Advertisement

ಡಾ|ಭರತ್‌ ಕುಮಾರ್‌ ಪೊಲಿಪು ಅವರಿಗೆ ಅಭಿನಂದನೆ

02:11 PM Mar 06, 2019 | |

ಮುಂಬಯಿ: ಈ ಬಾರಿಯ ಪ್ರತಿಷ್ಠಿತ ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್‌ ಪಡೆದ ರಂಗತಜ್ಞ, ಸಂಘಟಕ, ಖ್ಯಾತ ರಂಗ ನಿರ್ದೇಶಕ, ಕರ್ನಾಟಕ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ  ಡಾ| ಭರತ್‌ ಕುಮಾರ್‌ ಪೊಲಿಪು ಅವರನ್ನು ಗೌರವಿಸಲಾಯಿತು.

Advertisement

ಇತ್ತೀಚೆಗೆ ಮುಂಬಯಿ ವಿಶ್ವ ವಿದ್ಯಾಲಯ ಕನ್ನಡ ವಿಭಾಗ ಹಾಗೂ ಮೈಸೂರು ಅಸೋಸಿಯೇಶನ್‌ ಇವರ ಸಂಯುಕ್ತ ಅಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಹೊರನಾಡ ಕನ್ನಡ ರಂಗಭೂಮಿ ಎಂಬ ಡಾ| ಪೊಲಿಪು ಅವರ ಶೋಧ ಯೋಜನೆಗೆ ಕರ್ನಾಟಕ ನಾಟಕ ಅಕಾಡೆಮಿ ಹಸಿರು ನಿಶಾನೆ ತೋರಿಸಿದ್ದು ಈ ಯೋಜನೆ ಸಿದ್ಧಗೊಳಿಸಲು ಒಂದು ಲಕ್ಷ ರೂಪಾಯಿಗಳ ಅನುದಾನವನ್ನು  ಘೋಷಿಸಿದೆ.

ಈ ಸಾಧನೆಗಾಗಿ ಡಾ| ಭರತ್‌ ಕುಮಾರ್‌ ಪೊಲಿಪು ಅವರನ್ನು ಮುಂಬಯಿ ಕನ್ನಡಿಗರ ಪರವಾಗಿ ಖ್ಯಾತ ಸಾಹಿತಿ, ಸಿನೆಮಾ ನಿರ್ದೇಶಕ  ಡಾ| ನಾಗತಿಹಳ್ಳಿ ಚಂದ್ರಶೇಖರ ಅವರು ಗೌರವಿಸಿದರು. 

ವೇದಿಕೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ, ಹಿರಿಯ ನಾಟಕಕಾರ ಡಾ| ಮಂಜುನಾಥ್‌, ಸಂಘಟಕ ಮಂಜುನಾಥಯ್ಯ, ಮೈಸೂರು ಅಸೋಸಿಯೇಶನ್‌  ಕಾರ್ಯದರ್ಶಿ ಡಾ| ಗಣಪತಿ ಶಂಕರಲಿಂಗ, ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಶೆಟ್ಟಿ, ಕಲಾವಿದ ಜಯ ಸಾಲ್ಯಾನ್‌, ಹಿರಿಯ ಸಂಶೋಧಕಿ ಡಾ| ಲೀಲಾ ಬಿ. ಅವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next