Advertisement

ಇತಿಹಾಸ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಬಿ.ರಾಜಶೇಖರಪ್ಪ

06:45 AM Oct 25, 2018 | |

ಚಿತ್ರದುರ್ಗ: ಬಾಗಲಕೋಟೆ ಜಿಲ್ಲೆ ಬಾದಾಮಿಯ ಬನಶಂಕರಿ ಸಮೀಪದ ಶಿವಯೋಗ ಮಂದಿರದಲ್ಲಿ ಅ. 26, 27 ಮತ್ತು 28ರಂದು ನಡೆಯಲಿರುವ ಕರ್ನಾಟಕ ಇತಿಹಾಸ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಇತಿಹಾಸ ಸಂಶೋಧಕ ಡಾ. ಬಿ. ರಾಜಶೇಖರಪ್ಪ ಆಯ್ಕೆಯಾಗಿದ್ದಾರೆ.

Advertisement

ಕರ್ನಾಟಕ ಇತಿಹಾಸ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಡಾ.ರಾಜಶೇಖರಪ್ಪ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

2004ರಲ್ಲಿ ಡಾ. ಬಾ.ರಾ. ಗೋಪಾಲ್‌ ಶಾಸನತಜ್ಞ ಪ್ರಶಸ್ತಿ ಮತ್ತು 2016ರಲ್ಲಿ ಸಂಶೋಧನ ಶ್ರೀ ಪ್ರಶಸ್ತಿ ನೀಡಿ ಇತಿಹಾಸ ಅಕಾಡೆಮಿ ಡಾ. ಬಿ.ರಾಜಶೇಖರಪ್ಪ ಅವರನ್ನು ಗೌರವಿಸಿತ್ತು. ಅಲ್ಲದೆ ಕನ್ನಡ ಮೋಡಿ ಲಿಪಿಯ ಹಸ್ತಪ್ರತಿ ಸಂಪಾದನ ಕಾರ್ಯಕ್ಕಾಗಿ ಶಿವಯೋಗ ಮಂದಿರದಿಂದ ಕುಮಾರಶ್ರೀ ಪ್ರಶಸ್ತಿ ನೀಡಲಾಗಿತ್ತು. ಡಾ. ರಾಜಶೇಖರಪ್ಪ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 650 ಅಪ್ರಕಟಿತ ಶಾಸನಗಳನ್ನು ಪತ್ತೆ ಹಚ್ಚಿದ್ದಾರೆ. ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next