Advertisement
ಜೂ. 3ರಂದು ಕುರ್ಲಾ ಪೂರ್ವದ ಬಂಟರ ಭವನದ ಎನೆಕ್ಸ್ ಕಟ್ಟಡದ ಸಭಾಗೃಹದಲ್ಲಿ ನಡೆದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಏಕೈಕ ಸರಕಾರೇತರ ಸಂಸ್ಥೆಯಾಗಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮಾಜಿ ರಕ್ಷಣ ಸಚಿವ “ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣ ರಾಷ್ಟ್ರೀಯ ಪುರಸ್ಕಾರ-2019′ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು. ಜಾರ್ಜ್ ಅವರ ಪರಿಶ್ರಮ, ದೃಢ ನಿಲುವಿನಿಂದಾಗಿ ಕೊಂಕಣ ರೈಲ್ವೇ ವಿಭಾಗವು ಅಭಿವೃದ್ಧಿ ಹೊಂದುವಲ್ಲಿ ಸಹಕಾರಿಯಾಯಿತು ಎಂದರು.
ಗೌರವ ಅತಿಥಿಯಾಗಿ ಕರ್ನಾಟಕ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜಾರ್ಜ್ ಫೆರ್ನಾಂಡಿಸ್ ಅವರಂತಹ ನಾಯಕರುಗಳಿಂದ ಇಂದು ಪ್ರಜಾಪ್ರಭುತ್ವ ಉಳಿದಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಅವರ ಪ್ರಮಾಣಿಕ ರಾಜಕೀಯ ವ್ಯಕ್ತಿತ್ವ, ನೇರ ನಡೆನುಡಿ, ಯಾವುದೇ ಕೆಲಸವನ್ನು ಗುರಿ ಮುಟ್ಟುವವರೆಗೆ ಕೊಂಡೊಯ್ಯುವ ಗುಣ ಅನುಕರಣೀಯ. ಅಂತಹ ವ್ಯಕ್ತಿತ್ವದ ಮಹಾನ್ ನಾಯಕನ ಸಂಸ್ಮರಣೆಯಲ್ಲಿ ನೀಡುವ ಈ ಪ್ರಶಸ್ತಿಯನ್ನು ಸದಾ ಸಮಾಜದೊಂದಿಗೆ ಬೆಳೆದು, ಸಮಾ ಜದ ಕಳಕಳಿಯನ್ನು ಹೊಂದಿರುವ ಡಾ| ಬಿ. ಎಂ. ಹೆಗ್ಡೆ ಇವರಿಗೆ ನೀಡುತ್ತಿರುವುದು ಅಭಿನಂದನೀಯ. ಇಂದು ಪ್ರಾಮಾಣಿಕ ರಾಜ ಕಾರಣಿಗಳು ಬೆರಳೆಣಿಕೆಯ ಸಂಖ್ಯೆಯಲ್ಲಿದ್ದಾರೆ. ನಾನು ಕಂಡಂತಹ ಕೆಲವೇ ಕೆಲವು ಪ್ರಾಮಾಣಿಕ ರಾಜಕಾರಣಿಗಳಲ್ಲಿ ಜಾರ್ಜ್ ಫೆರ್ನಾಂಡಿಸ್ ಒಬ್ಬರಾಗಿದ್ದಾರೆ. ಅವರ ಹೆಸರನ್ನು ಶಾಶ್ವತವಾಗಿ ಇರಿಸುವಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಾಮಾಜಿಕ ಕಳಕಳಿ ಮೆಚ್ಚುವಂಥದ್ದು. ಜಿಲ್ಲೆಯ ಅಭಿವೃದ್ಧಿಗಾಗಿ ಈ ಸಮಿತಿಯು ಸದಾ ಶ್ರಮಿಸುತ್ತಿದ್ದು, ತೋನ್ಸೆ ಜಯಕೃಷ್ಣ ಶೆಟ್ಟಿ ಅವರ ನೇತೃತ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡದ ಪ್ರಗತಿಯನ್ನು ಹೊಂದಲಿ. ಅದಕ್ಕೆ ಬೇಕಾಗುವ ಸಹಕಾರ ಇದೆ ಎಂದು ನುಡಿದರು.
Related Articles
Advertisement
ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ ಹಾಗೂ ಬಂಟರ ಸಂಘ ಎಸ್‌ಎಂ ಶೆಟ್ಟಿ ಶಿಕ್ಷಣ ಸಂಕುಲದ ಕಾರ್ಯಾಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ ಅವರು ಪ್ರಶಸ್ತಿ ಪುರಸ್ಕೃತ ಡಾ| ಬಿ. ಎಂ. ಹೆಗ್ಡೆ ಅವರನ್ನು ಅಭಿನಂದಿಸಿ ಮಾತನಾಡಿ ಶುಭಹಾರೈಸಿದರು. ಸಮಿತಿಯ ಉಪಾಧ್ಯಕ್ಷ ಸಿಎ ಐ. ಆರ್. ಶೆಟ್ಟಿ ಅವರು ಸ್ವಾಗತಿಸಿದರು. ದಯಾಸಾಗರ್ ಚೌಟ ಮತ್ತು ಆ್ಯಂಟೋನಿ ಸಿಕ್ವೇರ ಅವರು ಅತಿಥಿಗಳನ್ನು ಪರಿಚಯಿಸಿದರು. ಡಾ| ಸುರೇಂದ್ರ ಕುಮಾರ್ ಹೆಗ್ಡೆ ಅವರು ಡಾ| ಬಿ. ಎಂ. ಹೆಗ್ಡೆ ಅವರ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಸಮಿತಿಯ ಉಪಾಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರು ಸಮಿತಿಯ ಕಾರ್ಯಚಟುವಟಿಕೆಗಳನ್ನು ವಿವರಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್‌ದಾಸ್ ಅವರು ಕಾರ್ಯಕ್ರಮ ನಿರ್ವಹಿಸಿ ದರು. ಕಾರ್ಯದರ್ಶಿ ದೇವದಾಸ್ ಎಲ್. ಕುಲಾಲ್ ವಂದಿಸಿದರು.ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉಪಾಧ್ಯಕ್ಷರುಗಳಾದ ಪಿ. ಧನಂಜಯ ಶೆಟ್ಟಿ, ನಿತ್ಯಾನಂದ ಡಿ. ಕೋಟ್ಯಾನ್, ಸಿಎ ಐ. ಆರ್. ಶೆಟ್ಟಿ, ಬಾಲಕೃಷ್ಣ ಭಂಡಾರಿ, ರಾಮಚಂದ್ರ ಗಾಣಿಗ, ಚಂದ್ರಶೇಖರ ಆರ್. ಬೆಳ್ಚಡ, ಜಿ. ಟಿ. ಆಚಾರ್ಯ, ಕೆ. ಎಲ್. ಬಂಗೇರ, ಆ್ಯಂಟೋನಿ ಸಿಕ್ವೇರಾ, ಫೆಲಿಕ್ಸ್ ಡಿಸೋಜಾ, ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್‌ದಾಸ್, ಗೌರವ ಕಾರ್ಯದರ್ಶಿಗಳಾದ ರವಿ ಎಸ್. ದೇವಾಡಿಗ, ಹ್ಯಾರಿ ಸಿಕ್ವೇರಾ, ಬಿ. ಮುನಿರಾಜ್ ಜೈನ್, ದೇವದಾಸ್ ಕುಲಾಲ್, ಗೌರವ ಪ್ರಧಾನ ಕೋಶಾಧಿಕಾರಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಗೌರವ ಜತೆ ಕೋಶಾಧಿಕಾರಿಗಳಾದ ತುಳಸಿದಾಸ್ ಅಮೀನ್, ತೋನ್ಸೆ ಸಂಜೀವ ಪೂಜಾರಿ, ಮಾಜಿ ಅಧ್ಯಕ್ಷರಾದ ವಿಶ್ವನಾಥ್ ಮ್ಹಾಡಾ, ಸಮಿತಿಯ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪ ಸ್ಥಿತರಿದ್ದರು. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಜನನಾಯಕ, ಸದಾ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿದ್ದ ಮಾನ್ಯ ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣ ರಾಷ್ಟ್ರೀಯ ಚೊಚ್ಚಲ ಪ್ರಶಸ್ತಿಯನ್ನು ಪ್ರೀತಿಯಿಂದ ಸ್ವೀಕರಿಸುತ್ತಿದ್ದೇನೆ. ಭ್ರಷ್ಟಾಚಾರ ತುಂಬಿದಂತಹ ರಾಜಕೀಯ ವ್ಯವಸ್ಥೆಯಲ್ಲಿ ಜಾರ್ಜ್ ಫೆರ್ನಾಂಡಿಸ್ ಅವರು ಆಶಾಕಿರಣವಾಗಿ ಮಿಂಚಿದವರು. ಅವರಂತಹ ಜನಪ್ರತಿನಿಧಿಗಳು ನಮಗಿಂದು ಅಗತ್ಯವಿದೆ.
– ಪದ್ಮಭೂಷಣ ಡಾ| ಬಿ. ಎಂ. ಹೆಗ್ಡೆ
ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು. ಜಾರ್ಜ್ ಹೆಸರು ಶಾಶ್ವತ ಆಗಿರಬೇಕು: ತೋನ್ಸೆ
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಮತ್ತು ಅಧ್ಯಕ್ಷ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು, ಸಮಿತಿಯ ಪ್ರತಿಯೊಂದು ಯೋಜನೆಗಳಿಗೆ ಮುಕ್ತವಾಗಿ ಸಲಹೆ ಸೂಚನೆಗಳನ್ನು ನೀಡುತ್ತಿದ್ದ ಮಾನ್ಯ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರು ಶಾಶ್ವತವಾಗಿ ಉಳಿಯಬೇಕು ಎಂಬ ಉದ್ದೇಶದಿಂದ ಸಮಿತಿ ವತಿಯಿಂದ ಪ್ರಶಸ್ತಿಯನ್ನು ಸ್ಥಾಪಿಸಿದ್ದೇವೆ. ಚೊಚ್ಚಲ ಪ್ರಶಸ್ತಿಯನ್ನು ಪದ್ಮಭೂಷಣ ಡಾ| ಬಿ. ಎಂ. ಹೆಗ್ಡೆ ಅವರಿಗೆ ಪ್ರದಾನಿಸಲು ಬಹಳಷ್ಟು ಸಂತೋಷವಾಗುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಶ್ರೇಯೋಭಿವೃದ್ಧಿಗಾಗಿ ಕಳೆದ ಒಂದು ದಶಕಗಳಿಗಿಂತಲೂ ಅಧಿಕ ಕಾಲದಿಂದ ಸಂಸ್ಥೆಯು ಹಗಲಿರುಳು ಶ್ರಮಿಸುತ್ತಿದೆ. ಅವಿಭಜಿತ ಜಿಲ್ಲೆಗಳಲ್ಲಿ ಮಾಲಿನ್ಯ ರಹಿತ ಉದ್ದಿಮೆಗಳಿಗೆ ಸಮಿತಿಯ ಸಹಕಾರ, ಪ್ರೋತ್ಸಾಹ ಸದಾಯಿದೆ. ಸಂಸ್ಥೆಯ ಪ್ರಮುಖ ಸಲಹೆಗಾರರಾಗಿ ಸಮಿತಿಯ ಎಲ್ಲಾ ಅಭಿವೃದ್ಧಿಪರ ಯೋಜನೆಗಳಿಗೆ ಬೆನ್ನಲುಬಾಗಿ ಸಹಕರಿಸಿದ ಜಾರ್ಜ್ ಫೆರ್ನಾಂಡಿಸ್ ಅವರ ಮಾರ್ಗದರ್ಶನ ನಮಗೆ ಸ್ಫೂರ್ತಿಯಾಗಿದೆ ಎಂದು ನುಡಿದು, ಡಾ| ಬಿ. ಎಂ. ಹೆಗ್ಡೆ ಇವರನ್ನು ಅಭಿನಂದಿಸಿ ಶುಭಹಾರೈಸಿದರು. ಚಿತ್ರ ವರದಿ: ಸುಭಾಷ್ ಶಿರಿಯಾ