Advertisement

“ಅತ್ಯಾಧುನಿಕ ಶಿಕ್ಷಣಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕ’: ಸಚಿವ ಡಾ|ಅಶ್ವತ್ಥನಾರಾಯಣ

11:38 PM Mar 07, 2023 | Team Udayavani |

ಸುಬ್ರಹ್ಮಣ್ಯ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಐತಿಹಾಸಿಕ ಸುಧಾರಣೆ ಆಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವ ಮೂಲಕ ಶಿಕ್ಷಣ ಕ್ಷೇತ್ರ ಮತ್ತು ದೇಶದ ಜ್ಞಾನಾರ್ಜನೆಯ ಮಟ್ಟ ಉತ್ಕೃಷ್ಠ ಮಟ್ಟಕ್ಕೇರಿದೆ. ದೇಶದ ಸರ್ವರೂ ಅತ್ಯಾಧುನಿಕ ರೀತಿಯ ಶಿಕ್ಷಣ ಪಡೆಯಲು ಈ ಯೋಜನೆ ಬೆನ್ನೆಲುಬಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ ಸಿ.ಎನ್‌. ಹೇಳಿದರು.

Advertisement

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯದ ಪ್ರತಿ ತಾಲೂಕಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಕಾಲೇಜು ಆರಂಭಿಸಿದ ಸಂಖ್ಯೆಗೆ ಒತ್ತು ನೀಡಲಾಗಿಲ್ಲ. ಬದಲಾಗಿ ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡಲಾಗಿದೆ. ಹೊಸದಾಗಿ ಆರಂಭಗೊಂಡ ಕಡಬ ತಾಲೂಕಿನ ಕೇಂದ್ರ ಸ್ಥಳ ಕಡಬ ದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಚಿಂತನೆ ನಡೆಸ ಲಾಗು ವುದು. ರಾಜ್ಯದಲ್ಲಿ ಸುಮಾರು 440 ಕಾಲೇಜು ಗಳಿವೆ ಇದರಲ್ಲಿ 360 ಕಾಲೇಜುಗಳು ಗುಣಮಟ್ಟದ ಗ್ರೇಡ್‌ ಅನ್ನು ನ್ಯಾಕ್‌ನಿಂದ ಪಡೆದಿದೆ ಎಂದರು.

ಆತಂಕ ಬೇಡ; ಮುಂಜಾಗ್ರತೆ ಇರಲಿ
ಎಚ್‌3 ಎನ್‌2 ಎಂಬ ಹೊಸ ವೈರಸ್‌ ತಳಿ ಇದೀಗ ಕಂಡು ಬಂದಿದೆ. ಇದಕ್ಕೆ ಜನತೆ ಭಯ ಪಡುವ ಆವಶ್ಯಕತೆ ಇಲ್ಲ. ಆದರೆ ಮುಂಜಾಗೃತ ಕ್ರಮಗಳನ್ನು ವಹಿಸಿಕೊಳ್ಳಬೇಕು. ಈ ಬಗ್ಗೆ ಸರಕಾರ ಈಗಾಗಲೇ ಸುತ್ತೋಲೆ ಹೊರಡಿಸಿದೆ. ಯಾರೂ ಭಯ ಪಡುವುದು ಬೇಡ ಎಂದರು.

ಬಹುಮತದೊಂದಿಗೆ ಅಧಿಕಾರ
ಕೇಂದ್ರ ಮತ್ತು ರಾಜ್ಯ ಸರಕಾರ ಜನತೆಯ ಹಿತಕ್ಕಾಗಿ ಭರಪೂರ ಅಭಿವೃದ್ದಿ ಕಾರ್ಯಗಳನ್ನು ನಡೆ ಸಿದ್ದು ಸರಕಾರದ ಸಾಧನೆಗಳನ್ನು ಗುರುತಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ. ಆದು ದರಿಂದ ಈ ಬಾರಿ ರಾಜ್ಯದಲ್ಲಿ 150ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಮತ್ತೆ ಸರಕಾರ ನಡೆಸಲಿದೆ ಎಂದು ಅವರು ತಿಳಿಸಿದರು.

ಸಚಿವರಿಂದ ಆಶ್ಲೇಷಾ ಬಲಿ ಸೇವೆ
ಶ್ರೀ ಕ್ಷೇತ್ರಕ್ಕೆ ಕುಟುಂಬ ಸಮೇತ ಆಗ ಮಿಸಿದ ಸಚಿವರನ್ನು ಶ್ರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಸ್ವಾತಿಸಿ ದರು. ಸಚಿವರು ಶ್ರೀ ದೇವರ ದರುಶನ ಪಡೆದು ಆಶ್ಲೇಷಾ ಬಲಿ ಮತ್ತು ಪಂಚಾಮೃತ ಮಹಾಭಿಷೇಕ ಸೇವೆ ನೆರವೇರಿಸಿದರು. ಅನಂತರ ಹೊಸಳಿಗಮ್ಮನ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.

Advertisement

ಅಶ್ವತ್ಥನಾರಾಯಣ ಅವರೊಂದಿಗೆ ಪತ್ನಿ, ಪುತ್ರಿ, ಪುತ್ರ ಹಾಗೂ ಸಹೋದರ ಜತೆಗಿದ್ದರು. ಸಚಿವರನ್ನು ಶಾಲು ಹೊದಿಸಿ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಲಾಯಿತು.

ಈ ಸಂದರ್ಭ ಸಹಾಯಕ ಕಾರ್ಯ ನಿರ್ವ ಹಣಾಧಿಕಾರಿ ಪುಷ್ಪಲತಾ ರಾವ್‌, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶೋಭಾ ಗಿರಿಧರ್‌, ಮಾಸ್ಟರ್‌ಪ್ಲ್ರಾನ್‌ ಸಮಿತಿ ಸದಸ್ಯ ಮನೋಜ್‌ ಸುಬ್ರಹ್ಮಣ್ಯ, ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ, ಗ್ರಾ.ಪಂ. ಸದಸ್ಯೆ ಭಾರತಿ ದಿನೇಶ್‌, ಲೋಕೋಪ ಯೋಗಿ ಅಭಿಯಂತರ ಪ್ರಮೋದ್‌ ಕುಮಾರ್‌, ಶಿಷ್ಠಾಚಾರ ಅಧಿಕಾರಿ ಜಯರಾಮ ರಾವ್‌, ಕೆ.ಎಂ. ಗೋಪಿನಾಥ್‌ ನಂಬೀಶನ್‌ ಮುಂತಾ ದವರು ಉಪಸ್ಥಿತರಿದ್ದರು.

ಬಂಟ್ವಾಳದ ತನಕ ದಶಪಥ ರಸ್ತೆ
ಪ್ರಧಾನಿ ಮೋದಿ ಅವರು ಬೆಂಗಳೂರು-ಮೈಸೂರು ದಶಪಥ ರಸ್ತೆ ಉದ್ಘಾಟಿಸಲಿದ್ದಾರೆ. ರೋಡ್‌ ಫಾರ್‌ ಡೆವಲಪ್‌ಮೆಂಟ್‌ ಧ್ಯೇಯ ವ್ಯಾಖ್ಯೆಯ ಮೂಲಕ ರಸ್ತೆಗಳು ಗಣನೀಯವಾಗಿ ನಮ್ಮ ಕಾಲದಲ್ಲಿ ಅಭಿವೃದ್ಧಿಯಾಗಿದೆ. ದಶಪಥ ರಸ್ತೆಯು ಬೆಂಗಳೂರು – ಮೈಸೂರು – ಮಡಿಕೇರಿ ಮೂಲಕ ಬಂಟ್ವಾಳ ತನಕ ವಿಸ್ತರಣೆಗೊಳ್ಳಲಿದೆ. ಈಗ ಬೆಂಗಳೂರು-ಮೈಸೂರು ತನಕ ರಸ್ತೆ ಕಾಮಗಾರಿ ನೆರವೇರಿದೆ. ಮುಂದೆ ಮೈಸೂರಿನಿಂದ ಮಡಿಕೇರಿ ತನಕ, ಮಡಿಕೇರಿಯಿಂದ ಬಂಟ್ವಾಳ ತನಕ ರಸ್ತೆ ಕಾಮಗಾರಿ ಆರಂಭವಾಗಲಿದೆ ಎಂದು ಸಚಿವ ಡಾ| ಅಶ್ವತ್ಥನಾರಾಯಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next