Advertisement

 ಡಾ|ಎ.ಪಿ.ಜೆ.ಅಬ್ದುಲ್‌ ಕಲಾಂ ಎಕ್ಸಲೆನ್ಸ್‌ ಅವಾರ್ಡ್‌ ಪ್ರದಾನ

11:30 AM Oct 25, 2017 | |

ಮುಂಬಯಿ: ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಸುರೇಂದ್ರ ಕುಮಾರ್‌ ಹೆಗ್ಡೆ ಅವರಿಗೆ ಪ್ರತಿಷ್ಠಿತ ಡಾ| ಎ.ಪಿ.ಜೆ.ಅಬ್ದುಲ್‌ ಕಲಾಂ ಎಕ್ಸಲೆನ್ಸ್‌ ಅವಾರ್ಡ್‌ ಲಭಿಸಿದೆ.

Advertisement

ಹೊಸದಿಲ್ಲಿಯ ಪ್ರತಿಷ್ಠಿತ ಸಿಟಿಜನ್‌ ಇಂಟಿಗ್ರೇ ಷನ್‌ ಪೀಸ್‌ ಇನ್‌ಸ್ಟಿಟ್ಯೂಟ್‌ ಸಂಸ್ಥೆಯು ಉದ್ಯಮ, ಕೈಗಾರಿಕೆ, ಸಮಾಜ ಸೇವೆ, ಶೈಕ್ಷಣಿಕ ಸೇವೆ, ಕಲೆ-ಸಾಂಸ್ಕೃತಿಕ ಸೇವೆಗೈದ ಸಾಧಕರಿಗೆ ಪ್ರತೀ ವರ್ಷ ಮಾಜಿ ರಾಷ್ಟ್ರಪತಿ ದಿ| ಎ. ಪಿ. ಜೆ. ಅಬ್ದುಲ್‌ ಕಲಾಂ ಅವರ ಸಂಸ್ಮರಣಾರ್ಥಕವಾಗಿ ಜೀವಮಾನ ಸಾಧಕ ಪ್ರಶಸ್ತಿ  ನೀಡುತ್ತಿದ್ದು, 2017 ನೇ ಸಾಲಿನ ಪ್ರಶಸ್ತಿ  ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈಯುತ್ತಿರುವ ಉದ್ಯಮಿ,  ರಂಗಕರ್ಮಿ, ಸಮಾಜ ಸೇವಕ, ಸಾಂಸ್ಕೃತಿಕ ರಾಯಭಾರಿ ಸುರೇಂದ್ರ ಕುಮಾರ್‌ ಹೆಗ್ಡೆ ಅವರು ಆಯ್ಕೆಯಾಗಿದ್ದರು.

ಭಾರತರತ್ನ ಡಾ| ಎ. ಪಿ. ಜೆ. ಅಬ್ದುಲ್‌ ಕಲಾಂ ಅವರ 86ನೇ ಹುಟ್ಟುಹಬ್ಬದ ಅಂಗವಾಗಿ ಸಿಟಿಜನ್‌ ಇಂಟಿಗ್ರೇಷನ್‌ ಪೀಸ್‌ ಇನ್‌ಸ್ಟಿಟ್ಯೂಟ್‌ ಸಂಸ್ಥೆಯು ಹೊಸದಿಲ್ಲಿಯ ಲೋಧಿ ಮಾರ್ಗದಲ್ಲಿರುವ ಇಂಡಿಯಾ ಇಂಟರ್‌ನ್ಯಾಶನಲ್‌ ಸೆಂಟರ್‌ನ ಸೆಮಿನಾರ್‌ ಹಾಲ್‌ನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ  ಲೋಕಸಭೆಯ ಮಾಜಿ ಸಭಾಪತಿ, ಮಾಜಿ ಕೇಂದ್ರ ಸಚಿವ  ಶಿವರಾಜ್‌ ವಿ. ಪಾಟೀಲ್‌ ಅವರು ಪ್ರಶಸ್ತಿಯನ್ನು ಸುರೇಂದ್ರ ಕುಮಾರ್‌ ಹೆಗ್ಡೆ ಅವರಿಗೆ ಪ್ರದಾನಿಸಿ ಶುಭ ಹಾರೈಸಿದರು.

ಮಾಜಿ ರಾಜ್ಯಪಾಲ, ಕೇಂದ್ರ ಸಚಿವ ಡಾ| ಭೀಷ್ಮ ನರೇನ್‌ ಸಿಂಗ್‌ ಅವರ ಅಧ್ಯಕ್ಷತೆಯಲ್ಲಿ ನಡೆದ  ಸಮಾರಂಭವನ್ನು ಮಾರಿಷಸ್‌ನ ಹೈಕಮಿಷನರ್‌ ಜೆ. ಗೋವರ್ಧನ್‌ ಅವರು ಉದ್ಘಾಟಿಸಿದರು. ನೇಪಾಲ-ಭಾರತ ರಾಯಭಾರಿ ದೀಪ್‌ ಕುಮಾರ್‌ ಉಪಾಧ್ಯಾಯ ಅವರು ಗೌರವ ಅತಿಥಿಯಾಗಿ ಉಪಸ್ಥಿತರಿದ್ದು, ಸುರೇಂದ್ರ ಕುಮಾರ್‌ ಹೆಗ್ಡೆ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.

ವಿವಿಧ ಕ್ಷೇತ್ರಗಳ ಸಾಧಕ ನಾಟಕ, ಯಕ್ಷಗಾನ ಕಲಾವಿದರಾಗಿ, ಕ್ರೀಡಾ ಕ್ಷೇತ್ರದ ಮಿನುಗು ತಾರೆಯಾಗಿ, ವಾಗ್ಮಿ ಯಾಗಿ, ಶ್ರೇಷ್ಠ ಸಂಘಟಕರಾಗಿ, ಪ್ರಭಾವಿ ಉದ್ಯಮಿ ಯಾಗಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಮಿಂಚಿರುವ ಸುರೇಂದ್ರ ಕುಮಾರ್‌ ಹೆಗ್ಡೆ ಅವರು,  ವೃತ್ತಿಯಲ್ಲಿ ವಾಣಿಜ್ಯೋದ್ಯಮಿಯಾಗಿ, ಪ್ರವೃತ್ತಿಯಲ್ಲಿ ಕಲಾಕಾರರಾಗಿ, ವ್ಯಾವಹಾರಿಕವಾಗಿ ಉತ್ತಮ ಆಡಳಿತಗಾರರಾಗಿ, ಸಾರ್ವಜನಿಕ ರಂಗದ ಮೇಧಾವಿಯಾಗಿ, ಸಾಮಾಜಿಕವಾಗಿ ಸದಾ ಕಾರ್ಯಶೀಲರಾಗಿ, ಸಾಮೂಹಿಕವಾಗಿ ಯಾವತ್ತೂ ಲವಲವಿಕೆಯವರಾಗಿ, ಸಂಘಟಕರಾಗಿ ಸಂಪೂರ್ಣ ತನ್ಮಯರಾಗಿ ಸಾರ್ವತ್ರಿಕ ಗುಣ ಸಂಪನ್ನರಾಗಿದ್ದಾರೆ.

Advertisement

ರಾಷ್ಟ್ರೀಯ ಮನ್ನಣೆಯ ಕಲಾವಿದ ರಾಷ್ಟ್ರೀಯ ಮಟ್ಟದ ಹಲವಾರು ಹಿಂದಿ, 
ಮರಾಠಿ, ತುಳು ಸಿನೆಮಾಗಳಲ್ಲಿ, ಅಮೆರಿಕದ ಫಿಲಡೆಲ್ಫಿಯಾ  ತಂಡದವರ ಸಿನೆಮಾದಲ್ಲಿ, ಡಿ. ಡಿ. ರಾಷ್ಟ್ರೀಯ ನೆಟ್‌ವರ್ಕ್‌ ಸೀರಿಯಲ್‌ಗ‌ಳಲ್ಲಿ ಕಲಾವಿದರಾಗಿ ಭಾಗವಹಿಸಿದ್ದಾರೆ. ಸಂಗೀತ, ತಬಲಾ, ಕೊಳಲು, ನೃತ್ಯ ಅವರ ಆಸಕ್ತಿಯ ಇತರ ಕಲಾಪ್ರಕಾರಗಳಾಗಿವೆ.  ಯಕ್ಷಗಾನ, ನಾಟಕ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಹೊಂದಿರುವ  ಅವರು ಔದ್ಯೋಗಿಕ ಕ್ಷೇತ್ರದಲ್ಲೂ ಸಾಧನೆಯ ಸರದಾರರಾಗಿದ್ದಾರೆ. ರಾಕ್‌ಫೋರ್ಡ್‌ ರಬ್ಬರ್‌ ಟೆಕ್ಸ್‌ ಇಂಡಿಯಾ ಲಿಮಿಟೆಡ್‌ನ‌ ಕಾರ್ಯಾಧ್ಯಕ್ಷರಾಗಿರುವ ಇವರು, ಹಲವಾರು ಪಬ್ಲಿಕ್‌ ಲಿಮಿಟೆಡ್‌ ಕಂಪೆನಿಗಳ ನಿರ್ದೇಶಕರಾಗಿ ವೃತ್ತಿಪರ ಸಾಧನೆ ಸಾಧಿಸಿದ ಹಿರಿಮೆಯನ್ನು ಹೊಂದಿದ್ದಾರೆ.

ಔದ್ಯೋಗಿಕ ರಂಗದ ವಿಶೇಷ ಸಾಧಕ
ಹೊಸ ದಿ ಲ್ಲಿಯ ಭಾರತೀಯ ಕೈಗಾರಿಕೆ ಹಾಗೂ ವ್ಯಾಪಾರದ ಅಂತಾರಾಷ್ಟ್ರೀಯ ಸಂಸ್ಥೆ 1997ರಲ್ಲಿ ಅವರನ್ನು ವರ್ಷದ ವ್ಯಕ್ತಿಯಾಗಿ ಗುರುತಿಸಿ “ರಾಷ್ಟ್ರೀಯ ಉದ್ಯೋಗ ರತ್ನ’ ಬಿರುದನ್ನು ನೀಡಿ ಸಮ್ಮಾನಿಸಿದೆ. ಹೊಸ ದಿ ಲ್ಲಿಯ ಭಾರತೀಯ ಆರ್ಥಿಕ ಅಭಿವೃದ್ಧಿ ಹಾಗೂ ಸಂಶೋಧನಾ ಸಂಘಟನೆಯು ವಾಣಿಜ್ಯ ಲೋಕಕ್ಕೆ ಹೆಗ್ಡೆ ಅವರು ನೀಡಿದ ಕೊಡುಗೆ ಹಾಗೂ ಅವರ ವೃತ್ತಿಪರ ಸಾಧನೆಗಳನ್ನು ಗುರುತಿಸಿ, 1998ರ ಸಾಲಿನ “ರಾಷ್ಟ್ರೀಯ ಔದ್ಯೋಗಿಕ ಉತ್ಕೃಷ್ಟತಾ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.

ದೇಶಾದ್ಯಂತ ಹಲವೆಡೆ ಸೆಮಿನಾರ್‌, ಸಮ್ಮೇಳನ ಹಾಗೂ ವೃತ್ತಿಪರ ಗೋಷ್ಠಿಗಳಲ್ಲಿ ಪಾಲ್ಗೊಂಡು ಭಾಷಣ, ಲೇಖನ ಹಾಗೂ ಪ್ರಬಂಧ ಮಂಡಿಸಿದ್ದಾರೆ. 

ತಾತ್ವಿಕ, ಧಾರ್ಮಿಕ, ಸಂವಾದಗಳಲ್ಲಿ ಭಾಗವಹಿಸಿದ್ದಾರೆ. ಕಲಾಜಗತ್ತು ಚಿಣ್ಣರ ಬಿಂಬದ ಸ್ಥಾಪಕ ರೂವಾರಿಗಳಲ್ಲಿ ಓರ್ವರಾದ ಅವರು, ಮುಂಬಯಿಯಲ್ಲಿ ಸಾವಿರಾರು ಮಕ್ಕಳಿಗೆ ನಮ್ಮ ತುಳು-ಕನ್ನಡದ ಸಂಸ್ಕೃತಿಯನ್ನು ಕಲಿಸಿ ಅವರನ್ನು ಸಂಸ್ಕಾರವಂತರನ್ನಾಗಿ ರೂಪಿಸಲು ಶ್ರಮಿಸುತ್ತಿದ್ದಾರೆ. ಲೇಖಕರೂ ಆಗಿರುವ ಅವರ ಲೇಖನ, ಕಥೆ, ಕವನ, ವಾಣಿಜ್ಯ ವ್ಯವಹಾರಗಳ ಬರೆಹಗಳು 
ಹಲವಾರು ದೈನಿಕಗಳಲ್ಲಿ ಸರಮಾಲೆಯೋಪಾದಿ ಯಲ್ಲಿ ಪ್ರಕಟಗೊಂಡಿವೆ.

ಪ್ರತಿಷ್ಠಿತ ಪ್ರಶಸ್ತಿಗಳ ಸರದಾರ
ಅಲಹಾಬಾದ್‌ನಲ್ಲಿ ನಡೆದ ಅಖೀಲ ಭಾರತ ನಾಟಕ ಸ್ಪರ್ಧೆಯಲ್ಲಿ ಎರಡು ಬಾರಿ ಪ್ರಸಿಡೆನ್ಸಿ ಪ್ರಶಸ್ತಿ, ಕಲಾಜಗತ್ತು ವಿಜಯಕುಮಾರ್‌ ಶೆಟ್ಟಿ ಅವರು ಬರೆದು ನಿರ್ದೇಶಿದ ಶರಶಯೆÂ ನಾಟಕದಲ್ಲಿ ಅವರ ಭೀಷ್ಮಾಚಾರ್ಯ ಪಾತ್ರದ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿ, ಅಂತಾರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿ, ಚಂದನ ವಾಹಿ ನಿ ಯ ಚಂದನಶ್ರೀ ಪ್ರಶಸ್ತಿ, ಶ್ರೀ ಕೃಷ್ಣ ವಿಟuಲ ಪ್ರತಿಷ್ಠಾನ ಮುಂಬಯಿ ಅವರಿಂದ ಅಭಿನಯ ವಿಚಕ್ಷಣ ಪ್ರಶಸ್ತಿ-ಬಿರುದು, ಕಲಾಭಿಮಾನಿ ಬಳಗ ಮೀರಾರೋಡ್‌ ಅವರಿಂದ ಜೀವನಶೈಲಿಯ ಸಾರ್ವಭೌಮ ಪ್ರಶಸ್ತಿ, ಜಗದ್ಗುರು ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ಪುತ್ತಿಗೆ ಮಠ ಉಡುಪಿ ಇದರ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರಿಂದ ಸಮಾಜ ಸೇವಾ ದುರಂಧರ ಪ್ರಶಸ್ತಿ, ದಕ್ಷಿಣ ಭಾರತದ ಸಾಂಸ್ಕೃತಿಕ ಏಕೀಕರಣ ಸಮಿತಿ ಮುಂಬಯಿ ಇದರ ಸಮಾಜ ರತ್ನ ಪ್ರಶಸ್ತಿ, ರಂಗಚಾವಡಿ ಮುಂಬಯಿ ಅವರಿಂದ ಅಭಿನಯ ಕಲಾಶ್ರೀ ಪ್ರಶಸ್ತಿಗಳು ಸೇರಿದಂತೆ ನೂರಾರು ಸಂಘ-ಸಂಸ್ಥೆಗಳ ಸಮ್ಮಾನ-ಗೌರವಗಳು ಲಭಿಸಿವೆ.

ಸಾಮಾಜಿಕ ರಂಗ 
ಸಾಂಸ್ಕೃತಿಕ, ಔದ್ಯೋಗಿಕ, ಧಾರ್ಮಿಕ ಹೀಗೆ ನಾನಾ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಸುರೇಂದ್ರ ಕುಮಾರ್‌ ಹೆಗ್ಡೆ ಅವರು, ವಿಶ್ವ ಮಾನವ ಏಕತಾ ಸಂಸ್ಥೆ ಮಹಾರಾಷ್ಟ್ರ ವಲಯದ ಗೌರವ ಕಾರ್ಯದರ್ಶಿಯಾಗಿ, ಗೋಜು-ರಿಯು-ಕರಾಟೆ ಫೆಡರೇಷನ್‌ ಆಫ್‌ ಇಂಡಿಯಾದ ಉಪಾಧ್ಯಕ್ಷರಾಗಿ, ಕಲಾಜಗತ್ತು ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ, ಸನಾತನ ವೇದಿಕೆಯ ಕಾರ್ಯಾಧ್ಯಕ್ಷರಾಗಿ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ, ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಗೌರವಾಧ್ಯಕ್ಷರಾಗಿ, ಕಲಾಜಗತ್ತು ಅಮ್ಮ ಚಾವಡಿಯ ವಿಶ್ವಸ್ತರಾಗಿ ಹೀಗೆ ಹತ್ತು-ಹಲವು ಸಂಘ-ಸಂಸ್ಥೆಗಳ ಮುಖಾಂತರ ನಾಡಿನ ಸಂಸ್ಕೃತಿ, ಕಲೆಯನ್ನು ಉಳಿಸಿ-ಬೆಳೆಸಲು ಕಾರ್ಯೋನ್ಮುಖರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next