ಪುಂಜಾಲಕಟ್ಟೆ : ಸಮಾಜದ ಅಸ್ಪೃಶ್ಯತೆ, ಅಸಮಾನತೆಯನ್ನು ಹೋಗ ಲಾಡಿಸಲು ಹೋರಾಟ ನಡೆಸಿದ್ದ ಮಹಾ ಚೇತನ ಡಾಣ ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನದ ಮಹಾನ್ ಕೊಡುಗೆ ನೀಡಿದ್ದಾರೆ. ಅವರ ಆದರ್ಶ ಪಾಲನೆ ಅಗತ್ಯವಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಆದಿದ್ರಾವಿಡ ಸಮಾಜ ಬಾಂಧವರಿಂದ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಗಾಡಿಪಲ್ಕೆ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಗಾಡಿಪಲ್ಕೆಯಲ್ಲಿ ನಡೆದ ಡಾಣ ಬಿ.ಆರ್. ಅಂಬೇಡ್ಕರ್ ಅವರ 128ನೇ ಜನ್ಮದಿನಾಚರಣೆ ಪ್ರಯುಕ್ತ 13ನೇ ವರ್ಷದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದಿಂದಲೇ ಅಭಿವೃದ್ಧಿ ಸಾಧ್ಯ ಎಂಬ ಡಾಣ ಅಂಬೇಡ್ಕರ್ ಅವರ ಆಶಯದಂತೆ ಪುಸ್ತಕ ವಿತರಣೆ ಮೂಲಕ ವಿದ್ಯಾದಾನಗೈಯ್ಯುತ್ತಿರುವ ಗಾಡಿಪಲ್ಕೆ ಯುವಕ ಸಂಘದ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು.
ಪ್ರಗತಿಪರ ಕೃಷಿಕ ಪ್ರಫುಲ್ಲ ರೈ ಮಂಜನದೊಟ್ಟು, ಎಪಿಎಂಸಿ ಸದಸ್ಯ ಪದ್ಮರಾಜ ಬಲ್ಲಾಳ್, ನಿವೃತ್ತ ಬ್ಯಾಂಕ್ ಅಧಿಕಾರಿ ಬೇಬಿ ಕುಂದರ್, ತಾ.ಪಂ. ಮಾಜಿ ಸದಸ್ಯ ರತ್ನಕುಮಾರ್ ಚೌಟ, ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಉಪ್ಪಿರ ಶ್ರೀ ಮೂಜಿಲಾ°ಯ ದೈವಸ್ಥಾನದ ಅಧ್ಯಕ್ಷ ಪ್ರಕಾಶ್ ಜೈನ್ ಜಂಕಳ, ಕೋರ್ಯಾರು ಶ್ರೀ ಮಹಮ್ಮಾಯಿ ದೇವಸ್ಥಾನದ ಗುರಿಕಾರ ಗೋಪಾಲ ಗೌಡ, ಉದ್ಯಮಿಗಳಾದ ನಾರಾಯಣ ಪೂಜಾರಿ, ಮಹಮ್ಮದ್ ಗಾಡಿಪಲ್ಕೆ, ಸಿದ್ದಕಟ್ಟೆ ವೈದ್ಯ ಡಾಣ ಸುದೀಪ್ ಕುಮಾರ್ ಜೈನ್, ಗುಣಶ್ರೀ ವಿದ್ಯಾಲಯದ ಮೇಲುಸ್ತುವಾರಿ ವಿಜಯ ಚೌಟ, ಗ್ರಾ.ಪ. ಸದಸ್ಯರಾದ ಮಾಧವ ಶೆಟ್ಟಿಗಾರ್, ಸುರೇಶ್ ಕುಲಾಲ್, ಮಯ್ಯದ್ದಿ, ಗಾಡಿಪಲ್ಕೆ ಒಕ್ಕೂಟದ ಅಧ್ಯಕ್ಷ ಸುರೇಶ್ ಪೂಜಾರಿ, ಗಾಡಿಪಲ್ಕೆ ಸ.ಹಿ.ಪ್ರಾ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಾಮೋದರ ಪೂಜಾರಿ, ಪ್ರಗತಿಪರ ಕೃಷಿಕ ರಾಜನ್ ಸಾಂತ್‌ಮಾರ್, ಗುತ್ತಿಗೆದಾರ ಜಗದೀಶ ಕೊçಲ, ಸಂಘದ ಅಧ್ಯಕ್ಷ ಆನಂದ, ಗೌರವಾಧ್ಯಕ್ಷ ಬಾಬು, ಉಪಾಧ್ಯಕ್ಷ ರಾಜೇಶ್, ಮಹಿಳಾ ಸಮಿತಿ ಅಧ್ಯಕ್ಷೆ ಕಾಂಚನಾ, ಆದಿ ದ್ರಾವಿಡ ಸಮಾಜದ ರಾಜ್ಯ ಕಾರ್ಯದರ್ಶಿ ಲೋಕಯ್ಯ ಗಾಡಿಪಾಲ್ಕೆ ಮತ್ತಿತರರು ಉಪಸ್ಥಿತರಿದ್ದರು.
ಸಮ್ಮಾನ
ಈ ಸಂದರ್ಭದಲ್ಲಿ ವಿದ್ಯಾರ್ಥಿವೇತನ ಗಳ ಬಗ್ಗೆ ಜಿಲ್ಲಾದ್ಯಂತ ಶಾಲೆಗಳಲ್ಲಿ ಉಚಿತ ಮಾಹಿತಿ ಒದಗಿಸುತ್ತಿರುವ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ನಾಯಕ್ ಕಪೆì ಅವರನ್ನು ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಒಟ್ಟು 1,14,580 ರೂ. ಮೊತ್ತದ ಪುಸ್ತಕಗಳನ್ನು ವಿವಿಧ ಶಾಲೆಗಳ 806 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಧನುಷ್ ಸ್ವಾಗತಿಸಿ, ರಾಜೇಶ್ ವಂದಿಸಿದರು. ಸಂತೋಷ್ ಕುಮಾರ್ ಸಿದ್ದಕಟ್ಟೆ ನಿರೂಪಿಸಿದರು. ರಾತ್ರಿ ಸಸಿಹಿತ್ಲು ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಿತು.