Advertisement

ಡಾ.ಅಂಬೇಡ್ಕರ್‌ ಮನುಕುಲದ ಮಾನವತಾವಾದಿ

09:59 PM Apr 14, 2019 | Lakshmi GovindaRaju |

ಗುಂಡ್ಲುಪೇಟೆ: ಡಾ.ಬಿ.ಆರ್‌ ಅಮಬೇಡ್ಕರ್‌ ಮನುಕುಲದ ಮಹಾನ್‌ ಮಾನವತಾವಾದಿಯಾಗಿದ್ದರು. ಶೋಷಿತ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಹೋರಾಟ ಮಾಡಿ, ಸಂವಿಧಾನ ರೂಪಿಸಿದ ಮಹಾನ್‌ ಹೋರಾಟಗಾರ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪೊ›.ಚಾಮರಾಜು ಅಭಿಪ್ರಾಯಪಟ್ಟರು.

Advertisement

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌ ಅಂಬೇಡ್ಕರ್‌ 128ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್‌ ಅವರಿಗಿದ್ದ ದೂರದೃಷ್ಟಿ ವ್ಯಕ್ತಿತ್ವದಿಂದಾಗಿ ಬಡವರು ಮತ್ತು ಪರಿಶಿಷ್ಟ ವರ್ಗಗಳ ಜನರು ಸಮಾಜದ ಮುಖ್ಯವಾಹಿನಿಯಲ್ಲಿ ಜೀವಿಸುತ್ತಿದ್ದಾರೆ.

ಅಂಬೇಡ್ಕರ್‌ ಅವರು ನಡೆಸಿದ ಹೋರಾಟ ನಮಗೆಲ್ಲಾ ಮಾದರಿ ಎಂದರು. ಮೊದಲಿಗೆ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವವನ್ನು ಸೂಚಿಸಲಾಯಿತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ನಂಜುಂಡಯ್ಯ, ವೃತ್ತನಿರೀಕ್ಷಕ ಬಾಲಕೃಷ್ಣ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಮೋದ್‌, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೃಷ್ಣಮೂರ್ತಿ, ಪುರಸಭಾ ಮುಖ್ಯಾಧಿಕಾರಿ ರಮೇಶ್‌, ಕಂದಾಯ ಇಲಾಖಾಧಿಕಾರಿ ಮಹೇಶ್‌ ಹಾಗೂ ದಲಿತ ಸಂಘಟನೆಗಳ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next