Advertisement

ಡಾ|ಅಂಬೇಡ್ಕರ್‌ ದಲಿತರ ಆಶಾಕಿರಣ: ಜ್ಞಾನಪ್ರಕಾಶ

02:36 PM Apr 30, 2022 | Team Udayavani |

ಗುರುಮಠಕಲ್‌: ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ನಿಜವಾದ ದೇಶ ಭಕ್ತ ಮತ್ತು ದಲಿತರ ಆಶಾಕಿರಣ. ಅಂತಹ ಮಹಾನ್‌ ಚೇತನರನ್ನು ಕೇವಲ ಮೆರವಣಿಗೆ, ಭಾವಚಿತ್ರ ಹಾಗೂ ಪುತ್ಥಳಿಗೆ ಸೀಮಿತಗೊಳಿಸಬಾರದು ಎಂದು ಮೈಸೂರಿನ ಪೆದ್ದಿಲಿಂಗ ಮಹಾಸಂಸ್ಥಾನದ ಪೂಜ್ಯಶ್ರೀ ಜ್ಞಾನಪ್ರಕಾಶ ಮಹಾಸ್ವಾಮಿಗಳು ಹೇಳಿದರು.

Advertisement

ಪಟ್ಟಣದ ಸರಕಾರಿ ಪ್ರೌಢಶಾಲೆ ಮೈದಾನದ ಆವರಣದಲ್ಲಿ ನಡೆದ ಡಾ| ಬಿ.ಆರ್‌.ಅಂಬೇಡ್ಕರ್‌ ಹಾಗೂ ಡಾ| ಬಾಬು ಜಗಜೀವನರಾಮ್‌ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.

ಡಾ| ಅಂಬೇಡ್ಕರ್‌ ಕಂಡ್ರೆ ಮಹಾತ್ಮ ಗಾಂಧೀಜಿಗೆ ಭಯವಾಗುತ್ತಿತ್ತು. ಡಾ| ಅಂಬೇಡ್ಕರ್‌ ಅವರನ್ನು ತುಳಿಯಲು ನಾನಾ ಕಸರತ್ತು ಮಾಡಿದರು. ಆದರೂ ಡಾ| ಅಂಬೇಡ್ಕರ್‌ ದಲಿತರ ಹಕ್ಕುಗಾಗಿ ಮತ್ತು ದೇಶದ ಸರ್ವೋತ್ತಮುಖ ಅಭಿವೃದ್ಧಿಗಾಗಿ ನಾಲ್ಕು ಮಕ್ಕಳ ಬಲಿದಾನವನ್ನು ನೀಡಿ ದೇಶಪ್ರೇಮ ಮೆರೆದರು ಎಂದರು.

ಹೈದ್ರಾಬಾದ್‌ನ ಉಸ್ಮಾನೀಯ ವಿವಿಯ ಪ್ರೊ| ಸಿ. ಖಾಸೀಂ ಉಪನ್ಯಾಸ ನೀಡಿ, ಗುರುಮಠಕಲ್‌ ಮತಕ್ಷೇತ್ರವು ಪರಿಶಿಷ್ಠ ಜಾತಿ ಮೀಸಲು ಇದ್ದರೂ ಇಲ್ಲಿಂದಲೇ ಸತತವಾಗಿ ಗೆದ್ದು ರಾಜಕೀಯವಾಗಿ ಉನ್ನತ ಸ್ಥಾನಕ್ಕೆ ಏರಿದರೂ ಈ ಕ್ಷೇತ್ರದಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಪುತ್ಥಳಿ ಇಲ್ಲದಿರುವುದು ಇಲ್ಲಿನ ಜನರು ಯೋಚಿಸಬೇಕಾಗಿದೆ. ವ್ಯವಸ್ಥಿತವಾಗಿ ದಲಿತರನ್ನು ಗುಲಾಮಗಿರಿಯಲ್ಲೇ ಬದುಕಲು ಮತ್ತು ಮುಗ್ಧತೆಯಲ್ಲೇ ಇರಲು ಸಂಚು ರೂಪಿಸಿದ್ದಾರೆ ಎಂದರು.

ಹೈದ್ರಾಬಾದ್‌ನ ಗಾಯಕ ರಾಜೇಶ ಮಾತನಾಡಿದರು. ಪಟ್ಟಣದ ಜಗತ್‌ ವೃತ್ತದಿಂದ ಪೊಲೀಸ್‌ ಠಾಣೆ ಮಾರ್ಗವಾಗಿ ಸರಕಾರಿ ಪ್ರೌಢಶಾಲೆ ಮೈದಾನದವರೆಗೆ ಡಾ| ಅಂಬೇಡ್ಕರ್‌ ಭಾವಚಿತ್ರದ ಮೆರವಣಿಗೆ ನಡೆಯಿತು. ರಾಜ್ಯ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Advertisement

ಪುರಸಭೆ ಮತ್ತು ಸಮಿತಿ ಅಧ್ಯಕ್ಷ ಪಾಪಣ್ಣ ಮನ್ನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಪಂ ಅಧ್ಯಕ್ಷ ಬಸ್ಸಿರೆಡ್ಡಿ ಅನಪುರ್‌, ತಾಲೂಕು ನೌಕರರ ಸಂಘದ ಅಧ್ಯಕ್ಷ ಸಂತೋಷ ಕುಮಾರ ನಿರೇಟಿ, ಡಾ| ಬಿ.ಆರ್‌. ಅಂಬೇಡ್ಕರ್‌ ಯುವಕ ಸಂಘದ ತಾಲೂಕು ಅಧ್ಯಕ್ಷ ಹನುಮಂತು ಶನಿವಾರಂ, ಲಕ್ಷ್ಮಪ್ಪ ಲಿಕ್ಕಿ, ಭೀಮಶಪ್ಪ, ಪುರಸಭೆ ಮುಖ್ಯಾ ಧಿಕಾರಿ ಲಕ್ಷ್ಮೀಬಾಯಿ, ಪುರಸಭೆ ಉಪಾಧ್ಯಕ್ಷೆ ಭೀಮಮ್ಮ ಮುಕುಡಿ ಇದ್ದರು. ವೆಂಕಟೇಶ ಕಾರ್ಯಕ್ರಮ ನಿರೂಪಿಸಿದರು. ಆಂಜನೇಯ ಸ್ವಾಗತಿಸಿದರು. ಲಿಂಗಪ್ಪ ತಾಂಡೂರಕರ್‌ ಪ್ರಾಸ್ತಾವಿಕ ಮಾತನಾಡಿದರು. ಕೃಷ್ಣ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next