Advertisement

MAHE: ಡಾ| ರಾಮದಾಸ್‌ ಪೈ ಅವರಿಗೆ AAPI ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಪ್ರದಾನ

01:10 AM Jan 07, 2024 | Team Udayavani |

ಮಣಿಪಾಲ: ಭಾರತೀಯ ಸಂಜಾತ ಅಮೆರಿಕನ್‌ ವೈದ್ಯರ ಒಕ್ಕೂಟ (ಎಎಪಿಐ)ವು ಮಾಹೆ ವಿ.ವಿ.ಯ ಸಹಯೋಗದಲ್ಲಿ ಫಾರ್ಚೂನ್‌ ಇನ್‌ ವ್ಯಾಲಿ ಹೊಟೇಲ್‌ನಲ್ಲಿ ಹಮ್ಮಿಕೊಂಡಿದ್ದ “ಆರೋಗ್ಯ ರಕ್ಷಣೆ ಮತ್ತು ಕೃತಕ ಬುದ್ಧಿಮತ್ತೆಯ ಭವಿಷ್ಯ” ವಿಷಯದ ಜಾಗತಿಕ ಆರೋಗ್ಯ ಸಮ್ಮೇಳನದಲ್ಲಿ ವೈದ್ಯ ಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮಾಹೆ ವಿ.ವಿ.ಯ ಕುಲಾಧಿಪತಿ ಡಾ| ರಾಮದಾಸ್‌ ಪೈ ಅವರಿಗೆ ಶುಕ್ರವಾರ ಕೊಡಮಾಡಿದ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ಅವರ ಪರವಾಗಿ ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್‌. ಪೈ ಅವರು ಸ್ವೀಕರಿಸಿದರು.

Advertisement

ಎಎಪಿಐ ಅಧ್ಯಕ್ಷ ಡಾ| ಸಂಪತ್‌ ಶಿವಾಂಗಿ ಮಾತನಾಡಿ, ಎಎಪಿಐಯ ವಾರ್ಷಿಕ ಸಮ್ಮೇಳನವನ್ನು ದೇಶದ ಬೇರೆ ಬೇರೆ ಕಡೆಗಳಲ್ಲಿ ಆಯೋಜಿಸಿಕೊಂಡು ಬಂದಿದ್ದೇವೆ. ಈ ಬಾರಿ ಮಣಿಪಾಲದಲ್ಲಿ ನಡೆಸಿದ್ದೇವೆ. ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿರುವುದಕ್ಕೆ ಹೆಮ್ಮೆಯಿದೆ. ವೈದ್ಯಕೀಯ ಕ್ಷೇತ್ರಕ್ಕೆ ಡಾ| ರಾಮದಾಸ್‌ ಪೈ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಉತ್ಕೃಷ್ಟ ಶೈಕ್ಷಣಿಕ ಗುಣಮಟ್ಟಕ್ಕೆ ಮಾಹೆ ವಿ.ವಿ.ಯು ವಿಶ್ವದಲ್ಲೇ ಹೆಸರು ಗಳಿಸಿದೆ. ಡಾ| ಟಿಎಂಎ ಪೈ ಅವರು ಹಾಕಿಕೊಟ್ಟ ಮಾರ್ಗದಲ್ಲೇ ಡಾ| ರಾಮದಾಸ್‌ ಪೈ ಅವರು ಮುನ್ನಡೆದು ಸಂಸ್ಥೆಯನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ಎಲ್ಲದರಲ್ಲೂ ಹೊಸತನ ಹಾಗೂ ನಾವೀನ್ಯವನ್ನು ಹುಡುಕುವ ಗುಣ ಅವರದು. ಸಂಶೋಧನೆಗೆ ವಿಶೇಷ ಆದ್ಯತೆ ನೀಡುತ್ತ ಬಂದಿದ್ದಾರೆ. ವೈದ್ಯಕೀಯ ಹಾಗೂ ಶಿಕ್ಷಣ ರಂಗಕ್ಕೆ ಅವರು ವಿಶೇಷ ಕೊಡುಗೆಯನ್ನು ನೀಡಿದ್ದಾರೆ ಎಂದು ವಿಶ್ಲೇಷಿಸಿದರು.

ಮಾಹೆ ಟ್ರಸ್ಟ್‌ ಅಧ್ಯಕ್ಷರೂ ಆದ ಎಂಇಎಂಜಿ ಗ್ರೂಪ್‌ ಮುಖ್ಯಸ್ಥ ಡಾ| ರಂಜನ್‌ ಆರ್‌. ಪೈ, ರಾಜ್ಯ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ| ಆರತಿ ಕೃಷ್ಣ, ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌, ಎಎಪಿಐ ಯುಎಸ್‌ಎ ಅಧ್ಯಕ್ಷೆ ಡಾ| ಅಂಜನಾ ಸಮದ್ದರ್‌, ಎಎಐಪಿ ಮಹಿಳಾ ಘಟಕದ ಅಧ್ಯಕ್ಷೆ ಡಾ| ಉದಯಾ ಶಿವಾಂಗಿ, ಪ್ರಮುಖರಾದ ಡಾ| ಸುಬ್ರಹ್ಮಣ್ಯ ಭಟ್‌, ಅನು ಭಟ್‌ ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next