Advertisement

Fraud Case; ಆ್ಯಪ್‌ ಡೌನ್‌ಲೋಡ್‌ ಮಾಡಿಸಿ ಲಕ್ಷಾಂತರ ರೂ. ವಂಚನೆ

12:33 AM Mar 05, 2024 | Team Udayavani |

ಮಣಿಪಾಲ: ಅನಾಮ ಧೇಯ ಆ್ಯಪ್‌ ಡೌನ್‌ಲೋಡ್‌ ಮಾಡಿದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ.ಕಳೆದುಕೊಂಡಿದ್ದಾರೆ.

Advertisement

ಮಣಿಪಾಲದ ಉಮಾಕಾಂತ್‌ ಸಿಂಗ್‌ ಅವರಿಗೆ ಮಾ.4ರಂದು ಮನೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವ ಬಗ್ಗೆ ಒಂದು ಸಂದೇಶ ಬಂದಿತ್ತು. ಅದರಂತೆ ಅವರು ಆ ಸಂಖ್ಯೆಗೆ ಕರೆಮಾಡಿದಾಗ ಆರೋಪಿಯು ಅದಕ್ಕೆ ಸಂಬಂಧಿಸಿ ಒಂದು ಅರ್ಜಿಯನ್ನು ಭರ್ತಿ ಮಾಡಲು ಆ್ಯಪ್‌ ಒಂದನ್ನು ಡೌನ್‌ಲೋಡ್‌ ಮಾಡುವಂತೆ ತಿಳಿಸಿದ್ದಾನೆ.

ಅದರಂತೆ ಡೌನ್‌ಲೋಡ್‌ ಮಾಡಿ ಅದನ್ನು ತುಂಬಿಸುವ ವೇಳೆಯೇ ಅವರ ಅಕೌಂಟ್‌ನಿಂದ 1,69,950 ರೂ.ಗಳು ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾವಣೆಯಾಗಿದೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next