Advertisement

ಸರಕು ಸಾಗಣೆ ತೆರಿಗೆ ದ್ವಿಗುಣ?

12:13 AM Jul 21, 2023 | Team Udayavani |

ಬೆಂಗಳೂರು: ಮೋಟಾರು ವಾಹನಗಳ ತೆರಿಗೆ ಹೆಚ್ಚಿಸಲು ಮುಂದಾಗಿರುವ ರಾಜ್ಯ ಸರಕಾರವು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧಾರ (ತಿದ್ದುಪಡಿ) ಮಸೂದೆ-2023ನ್ನು ವಿಧಾನಸಭೆಯಲ್ಲಿ ಗುರುವಾರ ಮಂಡಿಸಿದೆ.

Advertisement

ಪ್ರಸಕ್ತ ಸಾಲಿನಲ್ಲಿ ಆಯ್ದ ವಾಹನ ವರ್ಗಗಳಿಗೆ ವಿಧಿಸುವ ತೆರಿಗೆ ಪರಿಷ್ಕರಣೆ ಮೂಲಕ 11,500 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿಯನ್ನು ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾವಿಸಿದ್ದರು.

ಇದಕ್ಕೆ ಪೂರಕವಾಗಿ ಗುರುವಾರ ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆ ಮಂಡಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, 1,500 ಕೆ.ಜಿ. -12 ಸಾವಿರ ಕೆ.ಜಿ. ತೂಕವಿರುವ ಸರಕು ವಾಹನಗಳ ಪೂರ್ಣಾವಧಿ ತೆರಿಗೆ ಯನ್ನು ಬಹುತೇಕ ದ್ವಿಗುಣಗೊಳಿಸಲು ಪ್ರಸ್ತಾವಿಸಿದ್ದಾರೆ. ರಾಜ್ಯದ ಹೊರಗೆ ನೋಂದಣಿಯಾಗಿ ಪರವಾನಿಗೆ ಪಡೆಯದ 15 ಲಕ್ಷ ರೂ.ಗಿಂತ ಅಧಿಕ ಮೌಲ್ಯದ ಮೋಟಾರು ಕ್ಯಾಬ್‌ಗಳ ಮೇಲಿನ ಪೂರ್ಣಾವಧಿ ತೆರಿಗೆಯನ್ನು 10 ಲಕ್ಷ ರೂ. ಮಿಕ್ಕಿದ ವಾಹನಗಳಿಂದಲೇ ಹೆಚ್ಚಿಸಲು ಪ್ರಸ್ತಾವಿಸಲಾಗಿದೆ. ಈ ತೆರಿಗೆಗಳು ಹೊಸ ನೋಂದಣಿಯ ಸಮಯದಲ್ಲೂ ಅನ್ವಯಿಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next