Advertisement
ಬೃಹನ್ಮುಂಬಯಿ ಇಲೆಕ್ಟ್ರಿಕ್ ಸಪ್ಲೈ ಆ್ಯಂಡ್ ಟ್ರಾನ್ಸ್ ಪೋರ್ಟ್ ಬೆಸ್ಟ್ ಸಂಸ್ಥೆಯ ಸೇವೆಯಲ್ಲಿ ತೊಡಗಿ ಪ್ರಸ್ತುತ ಸೇವಾ ಸ್ತಬ್ಧಗೊಂಡ ಡಬ್ಬಲ್ ಡೆಕ್ಕರ್‌ನ ಎರಡು ಬಸ್‌ಗಳು ಈಗಾಗಲೇ ಡಾ| ಹೆಗ್ಗಡೆ ಅವರ ಆಶಯದ ಮೇರೆಗೆ ಮಂಜುಷಾ ಮ್ಯೂಸಿಯಂಗೆ ತಲುಪಿದೆ. ಮಂಜುಷಾ ಮ್ಯೂಸಿಯಂನಲ್ಲಿ ಇದೀಗಲೇ ಸುಮಾರು 8,300 ಕಲಾಕೃತಿಗಳು ಸಂಗ್ರಹವಿದ್ದು, ಇದೀಗ ಸೇರ್ಪಡೆಗೊಳ್ಳಲಿರುವ ಈ ಎರಡು ಬಸ್‌ಗಳು ನೋಡುಗರನ್ನು ಆಕರ್ಷಿಸಲಿದೆ. ಈ ಪೈಕಿ ಒಂದು ಬಸ್ ನಿಯಮಿತ ಪ್ರಯಾಣ ಸೇವೆಯದ್ದಾಗಿದ್ದು ಮತ್ತೂಂದು ತೆರೆದ ಛಾವಣಿಯೊಂದಿಗೆ ಪ್ರವಾಸಕ್ಕಾಗಿ ಬಳಸುತ್ತಿದ್ದ ಬಸ್ ಆಗಿದೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
1937ರಲ್ಲಿ ಮೊದಲ ಬೆಸ್ಟ್ ಸಂಸ್ಥೆ ಮುಂಬಯಿಯಲ್ಲಿ ಡಬಲ್ ಡೆಕ್ಕರ್ ಬಸ್‌ಗಳನ್ನು ಆರಂಭಿಸಿತು. ಇವುಗಳು ಈಗಾಗಲೇ ಹಳೆಯದ್ದಾಗಿದ್ದು ಸೇವೆಯಿಂದ ಸ್ಥಗಿತಗೊಳಿಸಲು ತೀರ್ಮಾನಿಸಿತು. ಸದ್ಯ ಕೇವಲ 3,500 ಕ್ಕೂ ಹೆಚ್ಚು ಬಸ್‌ಗಳ ಫ್ಲೀಟ್‌ನಲ್ಲಿ ಕೇವಲ 120 ಡಬಲ್ ಡೆಕ್ಕರ್ ಬಸ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಜೊತೆಗೆ 100 ಆಧುನಿಕ ಡಬಲ್ ಡೆಕ್ಕರ್ ಬಸ್ಸುಗಳನ್ನು ಖರೀದಿಸಲು ಬೆಸ್ಟ್ ನಿರ್ಧರಿಸಿದೆ. ಈ ಹೊಸ ಬಸ್‌ಗಳು ಬಿಎಸ್ 6 ಸಂಪೂರ್ಣ ಡೀಸೆಲ್ ಎಂಜಿನ್‌ಗಳಿಂದ ನಿಯಂತ್ರಿಸಲ್ಪಟ್ಟರೆ, ಡ್ಯುಯಲ್ ನ್ಯೂಮ್ಯಾಟಿಕ್ ಕ್ಲೋಸಿಂಗ್ ಡೋರ್, ಎರಡು ಮೆಟ್ಟಿಲುಗಳು, ಸಿಸಿಟಿವಿ, ಎಲೆಕ್ಟ್ರಾನಿಕ್ ಡೆಸ್ಟಿನೇಶನ್ ಡಿಪ್ಪ್ಲೇ ಮತ್ತು ಚಾಲಕ ಮತ್ತು ಕಂಡೆಕ್ಟರ್‌ಗಳಿಗೆ ಸಂವಹನ ವ್ಯವಸ್ಥೆ (ಪ್ರತಿ ಡೆಕ್‌ನಲ್ಲಿ 1) ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. 70 ಆಸನ ಸಾಮರ್ಥ್ಯವನ್ನು ಹೊಂದಿರುವ ಈ ಬಸ್ ಹವಾನಿಯಂತ್ರಿತವಲ್ಲ.
2023ರ ವೇಳೆಗೆ ರಸ್ತೆಗಿಳಿಯಲಿರುವ 48 ಬಸ್‌ಗಳು ಡಬಲ್ ಡೆಕ್ಕರ್ ಬಸ್‌ಗಳಿಗೆ ಸಾಮಾನ್ಯ ಬೆಸ್ಟ್ ಗಳಿಗಿಂತ ಎರಡು ಪಟ್ಟು ಸಮಯ ಬೇಕಾಗುತ್ತದೆ. ದಟ್ಟಣೆಯ ರಸ್ತೆಗಳಲ್ಲಿ ಬೃಹತ್ ಬಸ್ಸುಗಳನ್ನು ಓಡಿಸುವುದು ಅಸಮರ್ಥವಾಗುತ್ತಿದ್ದು ಇದು ಸಿಬ್ಬಂದಿಗಳ ಸೇವೆಗೂ ಕಷ್ಟಕರವಾಗಿದೆ. ಅವುಗಳನ್ನು ನಿರ್ವಹಿಸಲು ಅಗತ್ಯವಾದ ಹೆಚ್ಚುವರಿ ಮಾನವ ಶಕ್ತಿಯನ್ನು ನಿಯೋಜಿಸಬೇಕಾಗುತ್ತದೆ ಎಂದು ಹಿರಿಯ ಬೆಸ್ಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎರಡು ಹಂತಗಳಲ್ಲಿ ಬಸ್ಸುಗಳನ್ನು ಸೇವೆಗಿಳಿಸಲು ಯೋಜಿಸಿದ್ದು, 2020ರ ವೇಳೆಗೆ 72 ಬಸ್‌ಗಳು ರಸ್ತೆಗಿಳಿದರೆ, 2023 ರ ಅಕ್ಟೋಬರ್‌ನಲ್ಲಿ ಉಳಿದ 48 ಬಸ್‌ಗಳು ರಸ್ತೆಗಿಳಿಯಲಿವೆ ಎಂದು ಅವರು ಹೇಳಿದ್ದಾರೆ.
ಮಂಜುಷಾ ವಸ್ತು ಸಂಗ್ರಹಾಲಯ :
1989ರಲ್ಲಿ ಸ್ಥಾಪನೆಗೊಂಡ ಸಮಾರು 32 ವರ್ಷಗಳಿಂದ ಜನಾಕರ್ಷಣೆಯ ಕೇಂದ್ರವಾಗಿರುವ ಮಂಜುಷಾ ವಸ್ತು ಸಂಗ್ರಹಾಲಯದಲ್ಲಿ ಇದೀಗಲೇ ಪ್ರಾಚೀನ ವಸ್ತುಗಳು, ವರ್ಣಚಿತ್ರಗಳು, ಕಲಾಕೃತಿಗಳು, ದೇವಾಲಯದ ರಥಗಳು, ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳ ಉತ್ತಮ ಸಂಗ್ರಹಗಳಿವೆ. ಮೈಸೂರಿನ ಖ್ಯಾತ ಕಲಾವಿದ, ಜಾನಪದ ಲೇಖಕ ಪಿ. ಆರ್. ತಿಪ್ಪೇಸ್ವಾಮಿ ಅವರ ಅಪಾರ ಶ್ರಮದೊಂದಿಗೆ ಅಭಿವೃದ್ಧಿ ಕಂಡ ಈ ವಸ್ತು ಸಂಗ್ರಹಾಲಯದಲ್ಲಿ ಕ್ರಿ. ಪೂ. ಒಂದನೇ ಶತಮಾನದಷ್ಟು ಹಳೆಯ ಮೌರ್ಯರ ಕಾಲದ ಟೆರಾಕೋಟಾ ನಾಣ್ಯಗಳಿವೆ. 300 ವರ್ಷ ಹಳೆಯದಾದ ವಿದ್ವಾನ್ ವೀಣೆ ಶೇಷಣ್ಣರ ಸಂಗೀತ ವಾದ್ಯಗಳ ವಿವರಗಳನ್ನು ಹೊಂದಿರುವ ಪುರಾತನ ಪುಸ್ತಕವನ್ನು ಸಂಗ್ರಹಿಸಿದೆ. ಇದು ಭಾರತೀಯ ಕಲ್ಲು ಮತ್ತು ಲೋಹದ ಶಿಲ್ಪಕಲೆ, ವರ್ಣಚಿತ್ರಗಳು, ಆಭರಣ ವಸ್ತುಗಳು, ಪೂಜಾ ವಸ್ತುಗಳು ಮತ್ತು ಕರಾವಳಿ ಪ್ರದೇಶದ ಕುಶಲಕರ್ಮಿಗಳು ರಚಿಸಿದ ಉಪಯುಕ್ತ ವಸ್ತುಗಳ ಸಂಗ್ರಹವನ್ನು ಹೊಂದಿದೆ.
ವಿಭಿನ್ನ ಶೈಲಿಯ ಹಳೆಯ ಕಾರುಗಳು :
ವಿಭಿನ್ನ ಗಾತ್ರದ ಕೆಮರಾ ಸೇರಿದಂತೆ ಹಲವಾರು ವಿಭಿನ್ನ ಪುರಾತನ ವಸ್ತುಗಳನ್ನು ವಿಶಾಲವಾದ ಜಾಗದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಕೇವಲ 20 ರೂ. ಪ್ರವೇಶ ಶುಲ್ಕವನ್ನು ಪಡೆದು ಸುಮಾರು 2 ಗಂಟೆಗಳ ವರೆಗೂ ವೀಕ್ಷಿಸುವಷ್ಟು ವಿಶೇಷ ವಸ್ತುಗಳನ್ನು ಈ ಸಂಗ್ರಹಾಲಯ ಹೊಂದಿದೆ. ಕೊಂಚವೇ ದೂರದಲ್ಲಿ ಸುಮಾರು 50 ವಿವಿಧ ಕಾರುಗಳ ಸಂಗ್ರಹವನ್ನೂ ಮಾಡಲಾಗಿದ್ದು, ಕಾರು ಸಂಗ್ರಹಾಲಯದಲ್ಲಿ ಪುರಾತನ ವಾಹನಗಳು ಮತ್ತು ಕಾರುಗಳನ್ನು ಸಂಗ್ರಹಿಸಿ ಇಡಲಾಗಿದೆ. ಇದರಲ್ಲಿ ಹೆಚ್ಚಿನವು ಇಂದಿಗೂ ಚಾಲ್ತಿಯಲ್ಲಿವೆ ಎಂಬುದು ವಿಶೇಷ. ಇಲ್ಲಿ ಮನುಸ್ಮೃತಿಯ 6000 ತಾಳೆ ಎಲೆ ಹಸ್ತಪ್ರತಿಗಳ ವಿಶಿಷ್ಟ ಸಂಗ್ರಹವಿದೆ.