ದೋಟಿಹಾಳ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಿಲ್ಲಾರಹಟ್ಟಿ ಗ್ರಾಪಂ ವ್ಯಾಪ್ತಿಯ ರಾಮಜೀ ನಾಯಕ್ ತಾಂಡಕ್ಕೆ ಸೋಮವಾರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಭೇಟಿ ನೀಡಿದರು.
ರಾಮಜೀ ನಾಯಕ್ ತಾಂಡದಲ್ಲಿ 3-6 ವರ್ಷದೊಳಗಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಲ್ಲಿ ಕಡ್ಡಾಯ ಶಿಕ್ಷಣ ಮಾಯವಾಗುತ್ತಿದೆ ಹಾಗೂ ಗರ್ಭಿಣಿ, ಬಾಣಂತಿಯರಿಗೆ ಸರಿಯಾದ ಪೌಷ್ಟಿಕ ಆಹಾರ ಸಿಗುತ್ತಿಲ್ಲ ಎಂಬ ಸುದ್ದಿಯನ್ನು ಜ.02ರಂದು ಉದಯವಾಣಿ ಆನ್ಲೈನ್ ಮತ್ತು ಜ. 3ರಂದು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.
ವರದಿ ಪ್ರಕಟವಾದ ಬೆನ್ನಲ್ಲೇ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜೆ. ರಾಮತ್ನಾಳ, ಜಿಲ್ಲಾ ಮಕ್ಕಳ ರಕ್ಷಣ ಅಧಿಕಾರಿ ರೋಹಿಣಿ, ತಾಲೂಕ ಹಿಂದುಳಿದ ವರ್ಗದ ಅಧಿಕಾರಿ ಶ್ರೀನಿವಾಸ್ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಾಲಚಂದ್ರ ಅಕ್ಷರ ದಾಸೋಹ ಅಧಿಕಾರಿ ಕೆ ಶರಣಪ್ಪ, ಕಂದಾಯ ಇಲಾಖೆಯ ಸಿಬಂದಿ ಶರಣಯ್ಯ ಗ್ರಾಮ ಪಂಚಾಯಿತಿಯ ಪಿಡಿಒ, ಪೋಲಿಸ್ ಇಲಾಖೆಯ ಅಧಿಕಾರಗಳು ಸೇರಿದಂತೆ ಇತರರು ಗ್ರಾಮಕ್ಕದ ನೀಡಿ ಅಲ್ಲಿ ಮಕ್ಕಳ ಶಿಕ್ಷಣ ಬಗ್ಗೆ ಸಾರ್ವಜನಿಕ ರಿಂದ ಮಾಹಿತಿ ಪಡೆದುಕೊಂಡರು.
ಈ ವೇಳೆ ಮಾತನಾಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜೆ. ರಾಮತ್ನಾಳ ಅವರು ಯಾವುದೇ ಕಾರಣಕ್ಕೆ ಮಕ್ಕಳ ಹಕ್ಕು ಉಲ್ಲಂಘನೆ ಯಾಗುವಂತಿಲ್ಲ. ಕಡ್ಡಾಯವಾಗಿ ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡುವುದು ಸರಕಾರದ ಕೆಲಸ. ಕಡ್ಡಾಯವಾಗಿ ಎಲ್ಲಾ ಮಕ್ಕಳಿಗೂ ಶಿಕ್ಷಣ ಸಿಗಬೇಕು, ತಾಂಡದಲ್ಲಿ 10 ಮಕ್ಕಳಿಗೆ ಇರಲಿ.ಒಂದೇ ಮಗು ಇರಲಿ ಅವರಿಗೆ ಕಡ್ಡಾಯವಾಗಿ ಶಿಕ್ಷಣ ನೀಡುವದು ಸರ್ಕಾರದ ಕರ್ತವ್ಯ. ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗುವಂತಿಲ್ಲ, ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಶಿಕ್ಷಣ ನೀಡುವುದು ಸರಕಾರದ ಕರ್ತವ್ಯ ಎಂದರು.
ಈಗಾಗಲೇ 20021 ರಲ್ಲಿ ಅಕ್ಟೋಬರ್ 21ರಂದು ತಾಂಡಾದ ಜನತೆ ತಮ್ಮ ಗ್ರಾಮದಲ್ಲಿ ಒಂದು ಮಿನಿ ಅಂಗನವಾಡಿ ಕೇಂದ್ರ ಆರಂಭಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ ಆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ತತ್ ಕ್ಷಣದಿಂದಲೇ ಅಲ್ಲಿಯ ಮಕ್ಕಳಿಗೆ ಶಿಕ್ಷಣ ಸಿಗುವಂತಾಗಬೇಕು. ಇಂದು ತಾಲೂಕ ಕೇಂದ್ರದಲ್ಲಿ ತಾಲುಕ ಮಟ್ಟದ ಅಧಿಕಾರಿಗಳ ಸಭೆ ಇದೆ. ಈ ವೇಳೆ ತಾಂಡದ ಸಮಸ್ಯೆಯ ಬಗ್ಗೆ ಚರ್ಚೆ ಮಾಡಿ. ಅತೀ ಶೀಘ್ರದಲ್ಲಿ ತಾಂಡದಲ್ಲಿ ಮಿನಿಅಂಗನವಾಡಿ ಕೇಂದ್ರ ಆರಂಭಿಸಿಲು ಸೂಕ್ತ ಕ್ರಮಕೈಗೊಳ್ಳತ್ತೇವೆ.ಎಂದು ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜೆ ರಾಮತ್ನಾಳ ಅವರು ಮಾಹಿತಿ ನೀಡಿದ್ದರು.
ಇದೇ ವೇಳೆ ಮಾತನಾಡಿದ, ಗ್ರಾಮದ ಮಾಜಿ ಗ್ರಾಪಂ ಸದಸ್ಯ ತಮಣೇಪ್ಪ ಚವ್ಹಾಣ, ನಮ್ಮ ಗ್ರಾಮದಲ್ಲಿ ಸುಮಾರು 20-25 ಅಂಗನವಾಡಿ ಮಕ್ಕಳು ಇದ್ದಾರೆ. ಹೀಗಾಗಲೆ 2021 ಅಕ್ಟೋಬರ್26 ರಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ತಾಂಡದ ಗ್ರಾಮಸ್ಥರು ಮಿನಿ ಅಂಗನವಾಡಿ ಕೇಂದ್ರ ಆರಂಭಿಸಲು ಮನವಿ ಪತ್ರ ಸಲಿಸಿದರು. ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ ಆಯೋಗದ ಸದಸ್ಯರ ಮುಂದೇ ತಮ್ಮ ಗ್ರಾಮದ ಸಮಸ್ಯೆ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ರೋಹಿಣಿ, ತಾಲೂಕ ಹಿಂದುಳಿದ ಇಲಾಖೆಯ ಅಧಿಕಾರಿ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಾಲಚಂದ್ರ, ಅಕ್ಷರ ದಾಸೋಹ ಅಧಿಕಾರಿ ಕೆ ಶರಣಪ್ಪ, ಕಂದಾಯ ಇಲಾಖೆಯ ಅಧಿಕಾರಿ ಶರಣಯ್ಯ, ಗ್ರಾಪಂ ಪಿಡಿಒ, ಪೋಲಿಸ್ ಇಲಾಖೆಯ ಅಧಿಕಾರಗಳು, ಅಂಗನವಾಡಿ ಮೇಲ್ವಿಚಾರಕಿರಾದ ಜಯಶ್ರೀ, ಶಾರದಾ, ಗ್ರಾಮಸ್ಥರು ಸೇರಿದಂತೆ ಇತರರು ಉಪಸ್ಥಿತರಿದ್ದರು.