Advertisement

ಉತ್ತರ ಕನ್ನಡದಲ್ಲಿ “ದೋಸ್ತಿ ಆಪತ್ತು’

01:42 AM Mar 17, 2019 | Team Udayavani |

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ಚಿತ್ರಣ ಬದಲಾಗಿ ಸಂಸತ್‌ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವುದು ಬಿಜೆಪಿಗೆ ವರವಾಗಿ ಪರಿಣಮಿಸಿದೆ. ಮೊದಲಿನಿಂದಲೂ ಉತ್ತರ ಕನ್ನಡ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ಕೆಲವು ವಿಧಾನಸಭಾ ಕ್ಷೇತ್ರದಲ್ಲಿ ಪ್ರಜಾ ಸೋಷಲಿಸ್ಟ್‌ ಪಕ್ಷ, ಜನತಾ ಪಕ್ಷ, ಕ್ರಾಂತಿರಂಗ, ಜನತಾ ದಳ, ಪಕ್ಷೇತರರು ಗೆಲುವು ಸಾಧಿಸಿದ್ದನ್ನು ಬಿಟ್ಟರೆ ಬಹುತೇಕ ಕಾಂಗ್ರೆಸ್‌ ಗೆಲುವು ಸಾಧಿಸಿದ್ದೇ ಹೆಚ್ಚು. ಕಳೆದ ಮೂರು ದಶಕಗಳಿಂದ ಬಿಜೆಪಿ ಜಿಲ್ಲೆಯಲ್ಲಿ ನೆಲೆ ಕಂಡುಕೊಂಡಿದ್ದು ಗಟ್ಟಿಗೊಳ್ಳುತ್ತಲೇ ಹೋಗಿದೆ. ಸತತ ಐದು ಬಾರಿ ಸಂಸದರಾಗಿ ಆಯ್ಕೆಯಾಗುತ್ತಲೇ ಇರುವ ಅನಂತಕುಮಾರ ಹೆಗಡೆ ಅವರಿಗೆ ಈ ಬಾರಿ ಗೆಲುವನ್ನು “ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿ’ ಬಕ್ಷಿಸು ಕೊಟ್ಟಂತಾಗಿದೆ.

Advertisement

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್‌ ಹೆಗಡೆಗೆ ಭಾರೀ ಪೈಪೋಟಿ ನೀಡಿದ್ದ ಪ್ರಶಾಂತ ದೇಶಪಾಂಡೆ ಕೊನೆಯ ಕ್ಷಣದಲ್ಲಿ ಮೋದಿ ಅಲೆಯಲ್ಲಿ ಸೋಲನುಭವಿಸಬೇಕಾಯಿತು. ಅಂದು ಹೆಗಡೆಗೆ ಮೋದಿ ಅಲೆ ಗೆಲುವು ತಂದುಕೊಟ್ಟಿದ್ದರೆ, ಇಂದು ಮೋದಿ ಅಲೆಗಿಂತಲೂ ಹೆಚ್ಚಿನ ಪ್ರಭಾವ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳ ಹೊಂದಾಣಿಕೆಯಿಂದ ದೊರೆತಂತಾಗಿದೆ. ಈಗಾಗಲೇ ಕಾಂಗ್ರೆಸ್‌ ಸಂಸತ್‌ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವುದನ್ನು ಜೀರ್ಣಿಸಿಕೊಳ್ಳದ ಸ್ಥಿತಿಯಲ್ಲಿದೆ. ಎಲ್ಲ ಕಡೆಗಳಲ್ಲಿಯೂ ಅಸಮಾಧಾನ ಭುಗಿಲೆದ್ದಿದ್ದರೆ, ಈ ಹಿಂದೆ ಕಾಂಗ್ರೆಸ್‌ ಪಕ್ಷದಿಂದ ಗೆದ್ದು ಬಂದು ಪಕ್ಷಕ್ಕೆ ದ್ರೋಹ ಬಗೆದು ಕೇವಲ ಮೂರೇ ತಿಂಗಳಲ್ಲಿ ಮಂತ್ರಿಗಿರಿಯ ಆಸೆಗಾಗಿ ಬಿಜೆಪಿ ಸೇರಿದ್ದ ಆನಂದ ಅಸ್ನೋಟಿಕರ್‌ ಈಗ ಜೆಡಿಎಸ್‌
ಅಭ್ಯರ್ಥಿಯಾದರೆ ಅವರಿಗೆ ನಾವು ಮತ ಚಲಾಯಿಸುವುದ ಹೇಗೆ ಎನ್ನುವ ಪ್ರಶ್ನೆಯೂ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next