ಬೆಳ್ತಂಗಡಿ: ದೇಶ ಕಟ್ಟುವ ಕಾರ್ಯದಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸುವ ನಿಟ್ಟಿನಲ್ಲಿ ಯುವಮೋರ್ಚಾ ಕಾರ್ಯ ಕರ್ತರು ಸಕ್ರಿಯರಾಗಬೇಕು. ದೀಪಾವಳಿ ರಾಷ್ಟ್ರೀಯತೆಯನ್ನು ಸಾರುವ ಹಬ್ಬ ಎಂದು ಹಾಸನ ಶಾಸಕ ಪ್ರೀತಂ ಗೌಡ ಹೇಳಿದರು.
ಅವರು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ದೀಪಾವಳಿ ದೋಸೆ ಹಬ್ಬ ಹಾಗೂ ಗೋಪೂಜೆ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಶಿಕಾರಿಪುರವನ್ನು ಬಿಟ್ಟರೆ ಬೆಳ್ತಂಗಡಿ ಕ್ಷೇತ್ರವೇ ಅಭಿವೃದ್ಧಿಯಲ್ಲಿ ಮುಂದಿದೆ. ಅದಕ್ಕೆ ಶಾಸಕ ಹರೀಶ್ ಪೂಂಜ ಅವರ ಪಟ್ಟು ಬಿಡದೆ ನಿಸ್ವಾರ್ಥ ಸೇವೆಯೇ ಕಾರಣ ಎಂದರು.
ಶಾಸಕ ಹರೀಶ್ ಪೂಂಜ ಶುಭ ಹಾರೈಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಹಿರಿಯ ಪ್ರಮುಖ್ ವಿಟ್ಠಲ ಭಟ್, ಎಂಎಲ್‌ಸಿ ಪ್ರತಾಪಸಿಂಹ ನಾಯಕ್, ಜಿ.ಪಂ.ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಪ್ರ.ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ಹರ್ಷಿತ್ ವೆಂಕಟೇಶ್, ಜಿಲ್ಲಾಧ್ಯಕ್ಷ ಗುರುಪ್ರಸಾದ್ ಕಾಮತ್, ಪ್ರ.ಕಾರ್ಯದರ್ಶಿ ಸೂರಜ್ ಜೈನ್, ರಾಜ್ಯ ಸದಸ್ಯ ಅಮಿತ್ ರೈ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಗೌಡ, ಶ್ರೀನಿವಾಸ್ ರಾವ್, ಉಪಾಧ್ಯಕ್ಷ ಸೀತಾರಾಮ ಬೆಳಾಲ್, ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಪ.ಪಂ.ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಬಿಜೆಪಿ ಜಿಲ್ಲಾ ಯುವಮೋರ್ಚಾ ಕಾರ್ಯ ದರ್ಶಿಗಳಾದ ಯತೀಶ್ ಶೆಟ್ಟಿ, ಸುಧಾಕರ್ ಗೌಡ, ಪ್ರಮುಖರಾದ ಉಮೇಶ್ ಕುಲಾಲ್, ವಿನುತ್ ಸಾವ್ಯ, ಪ್ರಮೋದ್ ದಿಡುಪೆ, ಪ್ರಕಾಶ್ ಉಪಸ್ಥಿತರಿದ್ದರು.
ಮಂಗಳೂರಿನ ಚೆಂಡೆ ತಂಡ ಗಮನ ಸೆಳೆಯಿತು. ಗುರಿಪಳ್ಳ, ಕುದ್ಯಾಡಿ ಹಾಗೂ ಕನ್ನಾಜೆ ಭಜನ ಮಂಡಳಿಗಳಿಂದ ಕುಣಿತ ಭಜನೆ ಜರಗಿತು. ಪುತ್ತೂರು ಜಗದೀಶ್ ಆಚಾರ್ಯ ಅವರ ತಂಡದಿಂದ ಭಕ್ತಿ ಗಾನ ವೈಭವ ನಡೆಯಿತು.
ಕರ್ಗಿ ಶೆಡ್ತಿ ಪಾಡªನ ಹಾಡುವ ಮೂಲಕ ಬಲೀಂದ್ರ ಪೂಜೆಯನ್ನು ನೆರ ವೇರಿಸಲಾಯಿತು. ಬಿಜೆಪಿ ಚಿಹ್ನೆಯನ್ನು ಜೋಡಿಸಿಟ್ಟ ಹಣತೆಯನ್ನು ಕಾರ್ಯ ಕರ್ತರು ಹಚ್ಚಿ ದರು. ಪ್ರೀತಂ ಗೌಡ, ಹರೀಶ್ ಪೂಂಜ ಹಾಗೂ ಪ್ರತಾಪಸಿಂಹ ನಾಯಕ್ ನೇತೃತ್ವದಲ್ಲಿ ಗೋಪೂಜೆ ನೆರವೇರಿತು. 15 ಸಾವಿರ ದೋಸೆಯನ್ನು ಸಾರ್ವಜನಿಕರು ಸವಿದರು. ಯಶವಂತ ಗೌಡ ಬೆಳಾಲು ಸ್ವಾಗತಿಸಿದರು.