Advertisement

ಡೋಪಿಂಗ್‌: ಲಿಫ್ಟರ್‌ ಸಂಜಿತಾ ಆರೋಪ ಮುಕ್ತ

03:12 AM Jun 11, 2020 | Sriram |

ಹೊಸದಿಲ್ಲಿ: ಕಾಮನ್ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತೆ ಕೆ. ಸಂಜಿತಾ ಚಾನು ಡೋಪಿಂಗ್‌ ಆರೋಪದಿಂದ ಮುಕ್ತರಾಗಿದ್ದಾರೆ ಎಂದು ಇಂಟರ್‌ನ್ಯಾಶನಲ್‌ ವೇಟ್‌ ಲಿಫ್ಟಿಂಗ್‌ ಫೆಡರೇಶನ್‌ (ಐಡಬ್ಲ್ಯು ಎಫ್) ಪ್ರಕಟಿಸಿದೆ. ಅವರ ಸ್ಯಾಂಪಲ್‌ನಲ್ಲಿ ನಿಷೇಧಿತ ಪದಾರ್ಥ ಅಂಶ ಇರುವುದು ಸಾಬೀತಾಗದ ಕಾರಣ ತನಿಖೆಯನ್ನು ಕೈಬಿಟ್ಟಿರುವುದಾಗಿ ತಿಳಿಸಿದೆ.

Advertisement

ಆದರೆ ವಿನಾ ಕಾರಣ ತನ್ನ ಮೇಲೆ ಅಪವಾದ ಹೊರಿಸಿ ಮಾನಸಿಕ ಹಿಂಸೆ ನೀಡಿದ ಕಾರಣಕ್ಕಾಗಿ ಐಡಬ್ಲ್ಯುಎಫ್ ಕ್ಷಮೆ ಕೇಳಬೇಕು ಹಾಗೂ ಇದಕ್ಕೆ ಸೂಕ್ತ ಆರ್ಥಿಕ ಪರಿಹಾರ ಒಸಗಿಸಬೇಕು ಎಂಬುದಾಗಿ ಸಂಜಿತಾ ಚಾನು ಆಗ್ರಹಿಸಿದ್ದಾರೆ.

ವಿಶ್ವ ಉದ್ದೀಪನ ನಿಗ್ರಹ ಏಜೆನ್ಸಿ “ನಾಡಾ’ ನೀಡಿದ ಸಲಹೆ ಮೇರೆಗೆ ಐಡಬ್ಲ್ಯುಎಫ್ ಸಂಜಿತಾ ಚಾನು ಅವರನ್ನು ಪ್ರಕರಣದಿಂದ ಮುಕ್ತ ಗೊಳಿಸಿದೆ. ಅಮೆರಿಕದಲ್ಲಿ ನಡೆದ 2017ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅಲ್ಲಿನ ಯುಎಸ್‌ಎಡಿಎ ನಡೆಸಿದ ಡೋಪಿಂಗ್‌ ಟೆಸ್ಟ್‌ ವೇಳೆ ಚಾನು ಅವರ ಸ್ಯಾಂಪಲ್‌ನಲ್ಲಿ ಪಾಸಿಟಿವ್‌ ಅಂಶ ಕಂಡುಬಂದಿತ್ತು.

ಇದಕ್ಕೆ ಯಾರು ಹೊಣೆ?
“ಕೊನೆಗೂ ನನಗೆ ನ್ಯಾಯ ಸಿಕ್ಕಿದೆ. ನಾನೀಗ ಡೋಪಿಂಗ್‌ ಆರೋಪದಿಂದ ಮುಕ್ತಳಾಗಿದ್ದೇನೆ. ಆದರೆ ಈ ಅವಧಿಯಲ್ಲಿ ನಾನು ಅನುಭವಿಸಿದ ಮಾನಸಿಂಕ ಹಿಂಸೆಗೆ, ನೋವಿಗೆ ಯಾರು ಹೊಣೆ? ಇದಕ್ಕೆ ಯಾರು ಹೊಣೆ? ಐಡಬ್ಲ್ಯುಎಫ್ ಆ್ಯತ್ಲೀಟ್‌ಗಳ ಭವಿಷ್ಯದೊಂದಿಗೆ ಆಟವಾಡುತ್ತಿದೆ. ನನ್ನ ಒಲಿಂಪಿಕ್ಸ್‌ ಅವಕಾಶವನ್ನೇ ಕಸಿದುಕೊಂಡಿದೆ. ಇದಕ್ಕೆ ಸಂಬಂಧಿ ಸಿದವರು ಸೂಕ್ತ ಪರಿಹಾರ ಒದಗಿಸಲಿ’ ಎಂದು ಸಂಜಿತಾ ಚಾನು ವಿನಂತಿ ಮಾಡಿದ್ದಾರೆ.

ಚಾನು 2014 ಮತ್ತು 2018ರ ಕಾಮನ್ವೆಲ್ತ್‌ ಗೇಮ್ಸ್‌ಗಳೆರಡರಲ್ಲೂ ಚಿನ್ನದ ಪದಕ ಜಯಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next