Advertisement
5ಜಿ ಕಾಲದಲ್ಲಿ ಅತ್ಯಂತ ವೇಗವಾಗಿ ಸಾಗುತ್ತಿರುವ ಜಗತ್ತಿನಲ್ಲಿ ಎಲ್ಲ ದರಲ್ಲೂ ಕ್ಷಿಪ್ರವಾಗಿ ಮತ್ತು ಸುಲ ಭವಾಗಿ ಗುರಿ ಸಾಧಿಸ ಬೇಕೆಂಬ ಚಪಲ ಹೆಚ್ಚಾಗುತ್ತಿದೆ. ಕೆಲವೊಂದು ವಿಷಯಗಳಲ್ಲಿ ಇದು ಸಾಧ್ಯವಾ ಗಬಹುದಾದರೂ ಇನ್ನು ಕೆಲವು ವಿಷಯಗಳಲ್ಲಿ ಇದು ಅತ್ಯಂತ ಅಪಾಯಕಾರಿ. ಕ್ರೀಡೆಯಲ್ಲಿಯೂ ಇಂತಹ ಧಾವಂತ ಕಂಡು ಬರತೊಡಗಿದ್ದು ಈ ಚಪಲ ತಮ್ಮ ಭವಿಷ್ಯಕ್ಕೆ ಕುತ್ತು ತಂದೊ ಡ್ಡಬಹುದು ಎಂಬ ಅರಿವಿದ್ದರೂ ಕ್ರೀಡಾಪಟುಗಳು ಇಂತಹ ವರ್ತನೆ ತೋರುತ್ತಿರುವುದು ಚಿಂತೆಗೆ ಕಾರಣವಾಗಿದೆ.
ಒಲಿಂಪಿಕ್ಸ್ ಹೊಸ್ತಿಲಲ್ಲಿ ಕಪ್ಪು ಚುಕ್ಕಿ ಮುಂದಿನ ವರ್ಷ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟ ನಡೆಯಲಿದ್ದು, ಅದರ ಹೊಸ್ತಿಲಿನಲ್ಲಿಯೇ ಹಲವು ಕ್ರೀಡಾ ಪಟುಗಳು ಉದ್ದೀಪನ ಡ್ರಗ್ಸ್ ಸೇವನೆಯಲ್ಲಿ ಸಿಕ್ಕಿ ಬೀಳುತ್ತಿರುವುದು ಆತಂಕದ ವಿಷಯ. ಕಳೆದ ವರ್ಷ 17 ಮಂದಿ ನಿಷೇಷಧಕ್ಕೆ ಒಳಗಾ ಗಿದ್ದರೆ, ಈ ವರ್ಷ ಇದುವರೆಗೆ 71 ಮಂದಿ ನಿಷೇಧ ಕ್ಕೊಳಗಾಗಿದ್ದಾರೆ. ಇದಲ್ಲದೆ 36 ಮಂದಿ ಕ್ರೀಡಾಳುಗಳು ಪ್ರಸ್ತುತ ಅಮಾನತಿನಲ್ಲಿದ್ದು, ಅಂತಿಮ ನಿರ್ಧಾರ ಘೋಷಣೆಯಾಗಿಲ್ಲ. ಈ ರೀತಿ ಫೇಲ್ ಆದವರು ಕನಿಷ್ಠ 2 ವರ್ಷವಾದರೂ ನಿಷೇಧವನ್ನು ಎದುರಿಸುತ್ತಾರೆ. ಅಷ್ಟರಲ್ಲಿ ಒಲಿಂಪಿಕ್ಸ್ ಮುಗಿದಿರುತ್ತದೆ.
Related Articles
ಅಚ್ಚರಿಯ ವಿಷಯ ಎಂದರೆ ಈ ಬಾರಿ ಅತ್ಯಂತ ಕಿರಿಯ ಕ್ರೀಡಾಳು ಉದ್ದೀಪನ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿ ಮುಂಬ ರುವ ಏಷ್ಯನ್ ಗೇಮ್ಸ್‌ನಿಂದ ಹೊರಬಿದ್ದಿರುವುದು. ಚೀನದಲ್ಲಿ ಸೆಪ್ಟಂಬರ್ 23ರಿಂದ ಅಕ್ಟೋಬರ್ 8ರ ವರೆಗೆ ಏಷ್ಯನ್ ಗೇಮ್ಸ್ ನಡೆ ಯಲಿದೆ. ಇದರಲ್ಲಿ ಭಾಗವಹಿಸುವ ಭಾರತೀಯ ಕ್ರೀಡಾಳುಗಳ ಆಯ್ಕೆ ಈಗಾಗಲೇ ನಡೆಯುತ್ತಿದೆ. ಇಂಥವರಿಗೆ ಉದ್ದೀಪನ ದ್ರವ್ಯ ಪರೀಕ್ಷೆ ಎಂಬುದು ಕಡ್ಡಾಯ. ಈಜು ತಂಡಕ್ಕೆ ಆಯ್ಕೆ ಯಾದವರಲ್ಲಿ ಇಬ್ಬರು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವುದಾಗಿ ನಾಡಾ (ರಾಷ್ಟ್ರೀಯ ಉದ್ದೀಪನ ಔಷಧ ಸೇವನೆ ನಿಗ್ರಹ ಘಟಕ)ವು ತನ್ನ ಆಗಸ್ಟ್ ಮಾಹೆಯ ವರದಿಯಲ್ಲಿ ತಿಳಿಸಿದೆ. ಬಹಳಷ್ಟು ಆ್ಯತ್ಲೀಟ್‌ಗಳ ವರದಿ ಇನ್ನಷ್ಟೇ ಬರಬೇಕಿದೆ.
Advertisement
ಇಬ್ಬರಲ್ಲಿ ಓರ್ವ ಈಜುಪಟು 14 ವರ್ಷದೊಳಗಿನ ವಿಭಾಗ ದವರಾಗಿದ್ದರೆ, ಇನ್ನೋರ್ವರು 70 ಕೆ.ಜಿ. ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಲಡಾಖ್ ಮೂಲದ 23ರ ಹರೆಯದ ಓವಸಿಸ್ ಸರ್ವಾರ್ ಅಹೆಂಗರ್. ಅಹೆಂಗರ್ ಅವರು ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ 14 ಮಂದಿ ಈಜು ಗಾರರ ತಂಡದ ಸದಸ್ಯರಾಗಿದ್ದರು. ಪರೀಕ್ಷೆಯ ಬಳಿಕ ಅವರನ್ನು ತಂಡದಿಂದ ಹೊರಗಿರಿಸಲಾಗಿದೆ. ಅಹೆಂಗರ್ ಅವರು ಜೂನ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಸೀನಿಯರ್ ಈಜು ಸ್ಪರ್ಧೆಯ ಮಹಿಳೆಯರ ವಿಭಾಗದ ಫ್ರೀಸ್ಟೈಲ್‌ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಇವರಿಬ್ಬರು ತಂಡದಿಂದ ಹೊರಬಿದ್ದಿರು ವುದರಿಂದ ಬದಲಿ ಆಟಗಾರರ ಆಯ್ಕೆಯೂ ಸಾಧ್ಯವಿಲ್ಲದೆ ದೇಶ ನಿರಾಶೆ ಗೀಡಾಗಿದೆ.
14 ವರ್ಷದೊಳಗಿನ ಈಜು ಕ್ರೀಡಾಳುವಿನ ಹೆಸರನ್ನು ಪ್ರಕಟ ಗೊಳಿಸಿಲ್ಲ. ಆದರೆ ಇಷ್ಟೊಂದು ಕಿರಿಯ ಕ್ರೀಡಾಳು ಉದ್ದೀಪನ ಮದ್ದು ಸೇವಿಸಿರುವ ಬಗ್ಗೆ ಮಾತ್ರ ಎಲ್ಲೆಡೆ ಆಘಾತ ವ್ಯಕ್ತವಾಗಿದೆ. ಮೈನರ್ ಆಗಿರುವುದರಿಂದ ಶಿಕ್ಷೆಯ ಪ್ರಮಾಣ ಕಡಿಮೆ ಇದ್ದರೂ ಅವರ ಮುಂದಿನ ಸಾಧನೆಯ ಪಟ್ಟಿಯಲ್ಲಿ ಕಪ್ಪುಚುಕ್ಕೆಯಂತೂ ಇರುವುದು ಖಚಿತ.
ಡ್ರಗ್ಸ್ ಸೇವನೆ ಏಕೆ?ಕ್ರೀಡಾಳುವಿನ ಆಸ್ತಿಯೇ ದೈಹಿಕ ಕ್ಷಮತೆ ಮತ್ತು ಸಾಮರ್ಥ್ಯ ಆಗಿದೆ. ಕೆಲವೊಂದು ಔಷಧ, ಸಿರಪ್, ಡ್ರಗ್ಸ್, ಜೂಸ್ ಸೇವನೆ ಯಿಂದ ಹೆಚ್ಚುವರಿ ಶಕ್ತಿ ಸಿಗುತ್ತದೆ. ಆಯಾಸ ನಿವಾರಣೆಯಾಗುತ್ತದೆ, ಕಠಿನ ಅಭ್ಯಾಸ ಸಾಧ್ಯವೆಂದು ಅವುಗಳನ್ನು ಸೇವಿಸುತ್ತಾರೆ. ತೀರಾ ನಿಷೇಧಿತ ವಸ್ತುಗಳು ಇರದಂತೆ ಕೆಲವರು ಜಾಗರೂಕತೆ ವಹಿಸಿ ದರೂ ಅವುಗಳಲ್ಲಿ ಸೇರಿರುವ ವಿವಿಧ ರಾಸಾಯನಿಕಗಳು ಅಪಾ ಯಕ್ಕೆ ಕಾರಣವಾಗುತ್ತವೆ. ಇದು ದ್ರವ್ಯ ಪರೀಕ್ಷೆಯ ವೇಳೆ ಪತ್ತೆ ಯಾಗಿ ನಿಷೇಧಕ್ಕೆ ಒಳಗಾಗುತ್ತಾರೆ. ಪರಿಣಾಮಗಳೇನು?
ಡ್ರಗ್ಸ್ ಅಥವಾ ಔಷಧ ಸೇವನೆ ಕ್ರೀಡಾಳುವಿನ ಜೀವನವನ್ನೇ ನಾಶಪಡಿಸುತ್ತದೆ. ಒಂದೆಡೆ ಕ್ರೀಡಾ ಜೀವನ ಕೊನೆಗೊಂಡರೆ ಮತ್ತೂಂದೆಡೆ ವೈಯಕ್ತಿಕ ಆರೋಗ್ಯ ಕೂಡ ಅಪಾಯಕ್ಕೆ ಸಿಲು ಕುತ್ತದೆ. ಇದರಿಂದ ಹೃದಯ, ಲಿವರ್, ನರಸಂಬಂಧಿ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ಸಣ್ಣ ಪ್ರಾಯದಲ್ಲಿಯೇ ಡ್ರಗ್ಸ್ ಸೇವಿಸಿದರೆ ಆತನ ಜೀವನವೇ ನರಕವಾಗಬಹುದು ಎಂಬ ಎಚ್ಚರಿಕೆಯನ್ನು ವಾಡಾ ನೀಡುತ್ತದೆ. ಯಾವ ವಸ್ತುಗಳನ್ನು ಸೇವಿಸಬಾರದು?
ಹಾಗಾದರೆ ಕ್ರೀಡಾಳುಗಳು ಯಾವುದೇ ರೀತಿಯ ಔಷಧ ಅಥವಾ ಶಕ್ತಿ ಉತ್ತೇಜಕ ವಸ್ತುಗಳನ್ನು ಸೇವಿಸುವಂತೆಯೇ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಹಾಗೇನಿಲ್ಲ, ಕೆಲವೊಂದು ಅಂಶಗಳಿರುವ ಡ್ರಗ್ಸ್, ಸಿರಪ್, ಮಾತ್ರೆ, ಜೂಸ್‌ಗಳನ್ನು ತೆಗೆದು ಕೊಳ್ಳುವಂತಿಲ್ಲ. ವಿಶ್ವ ಉದ್ದೀಪನ ಔಷಧ ನಿಗ್ರಹ ಸಂಸ್ಥೆ ಈ ಕುರಿ ತಾದ ಸ್ಪಷ್ಟ ಮಾಹಿತಿಯನ್ನು ಆಗಾಗ್ಗೆ ನೀಡುತ್ತಿದೆ. ತನ್ನ ವೆಬ್‌ಸೈಟ್‌ನಲ್ಲಿ ಅವುಗಳ ಪಟ್ಟಿಯನ್ನು ಹಾಕಿರುವುದಲ್ಲದೆ ಆಗಾಗ ಸೆಮಿನಾರ್, ವೆಬಿನಾರ್‌ಗಳ ಮೂಲಕ ಕ್ರೀಡಾಳುಗಳಿಗೆ, ಕ್ರೀಡಾ ಸಂಸ್ಥೆಗಳಿಗೆ, ಕೋಚ್‌ಗಳಿಗೆ ಮಾಹಿತಿ ನೀಡುತ್ತಲೇ ಬರುತ್ತಿದೆ. ರಾಜೇಶ್ ಮೂಲ್ಕಿ