Advertisement

ಕೇಳ್ರಪ್ಪೋ ಕೇಳಿ, ನಾಳೆಯಿಂದ ಭೂಮಿಯ ಅವಸಾನ ಆರಂಭ?

01:20 PM Sep 22, 2017 | Karthik A |

ವಾಷಿಂಗ್ಟನ್‌: ಭಾರತದಲ್ಲಿ ಎಲ್ಲರೂ ನವರಾತ್ರಿಯ ಸಂಭ್ರಮದಲ್ಲಿದ್ದರೆ, ಅಮೆರಿಕದ ಕ್ರಿಶ್ಚಿಯನ್‌ ಸಂಖ್ಯಾ ರಹಸ್ಯ ಶಾಸ್ತ್ರಜ್ಞರೊಬ್ಬರು ‘ಕೊನೇ ರಾತ್ರಿ’ಯ ಬಗ್ಗೆ ಮಾತನಾಡಿ ಎಲ್ಲರ ಎದೆಬಡಿತವನ್ನೂ ಹೆಚ್ಚಿಸಿದ್ದಾರೆ!

Advertisement

ಹೌದು, ಅವರ ಪ್ರಕಾರ ನಾಳೆಯಿಂದ (ಶನಿವಾರ) ಭೂಮಿಯ ಅವಸಾನ ಆರಂಭ. ಜೆರುಸಲೇಂನ ಆಗಸದಲ್ಲಿ ಶನಿವಾರ ರಾತ್ರಿ ನಕ್ಷತ್ರಪುಂಜವೊಂದು ಕಾಣಿಸಿಕೊಳ್ಳಲಿದ್ದು, ಅದು ಜಗತ್ತಿನ ಅಂತ್ಯದ ಸೂಚಕವಾಗಿರಲಿದೆ ಎಂದು ಸ್ವಘೋಷಿತ ಸಂಶೋಧನಾ ಮತ್ತು ತನಿಖಾ ತಜ್ಞ ಡೇವಿಡ್‌ ಮೀಡ್‌ ಎಂಬವರು ಘೋಷಿಸಿದ್ದಾರೆ. ಅವರ ಹೇಳಿಕೆ ಹೊರಬರುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್‌ ಆಗಿದ್ದು, ಶನಿವಾರವೇ ಪ್ರಳಯವಾಗಲಿದೆ ಎಂಬ ವದಂತಿಗಳು ಹಬ್ಬತೊಡಗಿವೆ.

ಡೇವಿಡ್‌ ಹೇಳುವುದೇನು?: ಶನಿವಾರ ಅಂದರೆ ಸೆ.23, 2017ರಂದು ತಾರಾಪುಂಜವೊಂದು ಜೆರುಸಲೇಂನ ಆಗಸದಲ್ಲಿ ಕಾಣಿಸಿಕೊಳ್ಳಲಿದೆ. ತದನಂತರ ಭೂಮಿಗೆ ಗ್ರಹಣ ಹಿಡಿದಂತೆಯೇ ಸರಿ. ಅದರ ಪರಿಣಾಮ, ಅಕ್ಟೋಬರ್‌ ತಿಂಗಳಾಂತ್ಯದಲ್ಲಿ ಇಡೀ ಜಗತ್ತು 7 ವರ್ಷಗಳ ಕ್ಲೇಶಾವಸ್ಥೆಗೆ (ಟ್ರಿಬ್ಯುಲೇಷನ್‌ ಪೀರಿಯಡ್‌) ತಿರುಗಲಿದ್ದು, ಅಂದಿನಿಂದ ಭೂಮಿಯಲ್ಲಿ ಸರಣಿ ದುರಂತಗಳು ಸಂಭವಿಸಿ, ಕೊನೆಗೊಂದು ದಿನ ಇಡೀ ಭೂಮಿಯೇ ಹೇಳಹೆಸರಿಲ್ಲದಂತೆ ನಾಶವಾಗಿ ಹೋಗಲಿದೆ. ನಿಬಿರು ಎಂಬ ಹೆಸರಿನ ಗ್ರಹವೊಂದು (ಇಂಥ ಗ್ರಹವೇ ಇಲ್ಲ ಎಂದು ನಾಸಾ ಸ್ಪಷ್ಟಪಡಿಸಿದೆ) ಭೂಮಿಯತ್ತ ಚಲಿಸುತ್ತಿದೆ. ಈ ವರ್ಷಾಂತ್ಯದ ವೇಳೆಗೆ ನಿಬಿರು ಭೂಮಿಯನ್ನು ದಾಟಿ ಹೋದ ಕ್ಷಣದಿಂದ, ಭೂಕಂಪಗಳು, ಜ್ವಾಲಾಮುಖೀ ಸ್ಫೋಟ, ಸುನಾಮಿಯಂಥ ಪ್ರಾಕೃತಿಕ ವಿಕೋಪಗಳು ಬಂದರೆಗಲಿವೆ. ಅದು ಮಹಾಪ್ರಳಯವಾಗಿ ಪರಿವರ್ತಿತಗೊಂಡು, ಭೂಮಿಯ ಅವಸಾನಕ್ಕೆ ಕಾರಣವಾಗಲಿದೆ ಎನ್ನುವುದು ಡೇವಿಡ್‌ ಮೀಡ್‌ನ‌ ವಾದವಾಗಿದೆ.

ಮಾಧ್ಯಮಗಳ ಮೇಲೆ ಕಿಡಿ
ಈ ಎಲ್ಲ ವಿಚಾರಗಳನ್ನು ಡೇವಿಡ್‌ ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ. ಜತೆಗೆ, ತಮ್ಮ ಭವಿಷ್ಯವಾಣಿಯನ್ನು ಮಾಧ್ಯಮಗಳು ತಿರುಚಿವೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಕೆಲವು ಮಾಧ್ಯಮಗಳು ನನ್ನ ಹೇಳಿಕೆಯನ್ನು ವೈಭವೀಕರಿಸಿ, ಶನಿವಾರವೇ ಪ್ರಳಯವಾಗಲಿದೆ ಎಂದು ಸುಳ್ಳು ಸುದ್ದಿ ಪ್ರಕಟಿಸಿವೆ ಎಂದಿದ್ದಾರೆ ಡೇವಿಡ್‌. ವಿಶೇಷವೆಂದರೆ, ನೀವು ಎಲ್ಲಿಯವರು ಎಂಬ ಮಾಧ್ಯಮದವರ ಪ್ರಶ್ನೆಗೆ ಡೇವಿಡ್‌, ‘ಅತಿದೊಡ್ಡ ವಿಪತ್ತು ವಲಯದ ಹೃದಯಭಾಗದವನು’ ಎಂದು ಇರ್ಮಾ ಚಂಡಮಾರುತವನ್ನು ಪ್ರಸ್ತಾಪಿಸುತ್ತಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next