Advertisement
ಶುದ್ಧೀಕರಣಕ್ಕೆ ಯಂತ್ರ ಅಳವಡಿಕೆ: ನಗರಸಭೆವ್ಯಾಪ್ತಿಯಲ್ಲಿನ ಒಳಚರಂಡಿ ನೀರು ಹರಿದ ಪರಿಣಾಮ ದೊಡ್ಡತುಮಕೂರು ಕೆರೆಯ ನೀರು ಕಪ್ಪು ಬಣ್ಣಕ್ಕೆ ತಿರುಗಿವೆ. ನಗರಸಭೆ ವ್ಯಾಪ್ತಿಯಲ್ಲಿನ ಎಲ್ಲಾ ನೀರುಒಳಚರಂಡಿ ಮೂಲಕ ಹರಿದು ಹೋಗಿ ಚಿಕ್ಕತುಮಕೂರು ಕೆರೆಗೆ ಸೇರುತ್ತದೆ. ಕೊಳಚೆ ನೀರನ್ನುಇಲ್ಲಿಂದ ಶುದ್ಧೀಕರಿಸಿ ಹೊರಬಿಡಲು ಯಂತ್ರಗಳನ್ನು ಸಹ ಅಳವಡಿಸಲಾಗಿದೆ.
Related Articles
Advertisement
ನಗರಸಭೆಯಿಂದ ಮನವರಿಕೆ: ಕೆರೆ ನೀರು ಕಲುಷಿ ತವಾಗಲು ಒಳಚರಂಡಿ ನೀರು ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದ ಹಿನ್ನೆಲೆಯಲ್ಲಿ ಶುಕ್ರವಾರನಗರಸಭೆ ಅಧ್ಯಕ್ಷೆ ಎಸ್.ಸುಧಾರಾಣಿ ಲಕ್ಷ್ಮೀ ನಾರಾ ಯಣ್, ಉಪಾಧ್ಯಕ್ಷೆ ಫರ್ಹಾನತಾಜ್ ಚಿಕ್ಕ ತುಮಕೂರು ಬಳಿ ಇರುವ ನಗರಸಭೆ ವ್ಯಾಪ್ತಿಯ ತ್ಯಾಜ್ಯನೀರು ಶುದ್ಧೀಕರಣ ಘಟಕಕ್ಕೆ ಅಧಿಕಾರಿಗ ಳೊಂದಿಗೆ ಭೇಟಿ ನೀಡಿ, ಶುದ್ಧೀಕರಣ ವಿಧಾನದಲ್ಲಿ ಯಾವುದೇಲೋಪವಿಲ್ಲ ಎಂದು ಮನವರಿಕೆ ಮಾಡಿ ಕೊಟ್ಟರು.
ನೈಸರ್ಗಿಕವಾಗಿ ಶುದ್ಧೀಕರಣ: ಈ ಕುರಿತು ಮಾಹಿತಿ ನೀಡಿದ ನಗರಸಭೆ ಎಇಇ ಶೇಖ್ ಫೀರೋಜ್,ಕಿರಿಯ ಅಭಿಯಂತರ ಚಂದ್ರಶೇಖರ್, ತ್ಯಾಜ್ಯ ನೀರು ಶುದ್ಧೀಕರಿಸುವ ವಿಧಾನವನ್ನು ವಿವರಿಸಿ, ಇಲ್ಲಿನ ಶುದ್ಧೀ ಕರಣ ಘಟಕದಲ್ಲಿ 6 ಹಂತದಲ್ಲಿ ಯಾವುದೇ ಯಂತ್ರದ ಸಹಾಯ ಇಲ್ಲದೆ ನೈಸರ್ಗಿಕವಾಗಿ ಶುದ್ಧೀಕರಿಸಿ ಕೆರೆಗೆ ಬಿಡಲಾಗುತ್ತಿದೆ.ನಗರದ ಒಳಚರಂಡಿಗೆ ವಿಷಯುಕ್ತ ನೀರನ್ನು ಆಚೆ ಬಿಡುತ್ತಿಲ್ಲ. ನಿಮ್ಮ ಕೆರೆ ವಿಷಯುಕ್ತ ವಾಗಲು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ನೀರು ಕಾರಣವಾಗಿರಬಹುದು. ಈ ಹಿಂದೆ ರಸ್ತೆ ಕಾಮಗಾರಿ ನಡೆಯುತ್ತಿದ್ದಾಗ ನೀರಿನ ಪೈಪ್ ಒಡೆದು ಹೋಗಿದ್ದರಿಂದ ಕೆಲಕಾಲ ಶುದ್ಧೀಕರಣಕ್ಕೆ ತೊಂದರೆ ಯಾಗಿತ್ತು. ಈ ಎಲ್ಲಾ ಸಮಸ್ಯೆಗಳು ಬಗೆಹರಿ ದಿದ್ದು, ಒಂದು ಪಂಪ್ ಮೋಟಾರ್ ಸಹ ಹೆಚ್ಚುವರಿ ಇದೆ. ಇಲ್ಲಿನ ಶುದ್ಧೀಕರಿಸಿದ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಮೇಲೆ ನಮ್ಮದು ಲೋಪವಿದ್ದರೆ ಸರಿಪಡಿಸಿಕೊಳ್ಳಲಾಗುವುದು ಎಂದರು.
ನಮಗೆ ಶುದ್ಧವಾದ ನೀರು ಉಳಿಸದಿದ್ದರೆ ಹೋರಾಟ :
ನಗರದಲ್ಲಿ ಸಾಕಷ್ಟು ಜನಸಂಖ್ಯೆ ಇದ್ದು, ಅಲ್ಲಿನ ಒಳಚರಂಡಿ ವ್ಯವಸ್ಥೆ ಮೂಲಕ ಅವೈಜ್ಞಾನಿಕವಾಗಿ ಶುದ್ಧೀಕರಿಸಿ ಚಿಕ್ಕತುಮಕೂರು ಕೆರೆ ತುಂಬಿ ಕೋಡಿ ಹೋಗುವ ಮೂಲಕ ದೊಡ್ಡತುಮಕೂರು ಕೆರೆ ಸೇರುತ್ತಿದೆ. ಇದರೊಂದಿಗೆ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ವಿಷಯುಕ್ತ ನೀರು ಸಹ ಸೇರುತ್ತಿದೆ. 20 ವರ್ಷಗಳ ನಂತರ ಕೆರೆ ತುಂಬಿರುವ ಖುಷಿ ನಮಗೆ ಜೀವಂತವಾಗಿಲ್ಲ. ಇಲ್ಲಿನ ನೀರನ್ನು ಜನ ಜಾನುವಾರುಗಳು ಬಳಸದ ಹಾಗೆ ಹಾಗಿದೆ. ಅಂತರ್ಜಲವೂ ವಿಷಯುಕ್ತವಾಗುತ್ತಿದೆ. ಹೀಗಾಗಿ ನಗರಸಭೆಯ ಈ ವಿಧಾನದಿಂದ ಶುದ್ಧೀಕರಿಸಿದ ನೀರುನಮಗೆ ಬೇಡ, ಬಾಶೆಟ್ಟಿಹಳ್ಳಿ ವಿಷಯುಕ್ತ ನೀರು ಸಹ ಬೇಡ. ನಮಗೆ ಶುದ್ಧವಾದ ನೀರು ಉಳಿಸಿ.ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದು ದೊಡ್ಡತುಮಕೂರು ಗ್ರಾಮಸ್ಥರಾದ ಪಿ.ಆನಂದ್‌ಕುಮಾರ್, ವಸಂತ್‌ಕುಮಾರ್, ಟಿ.ಜಿ.ಮಂಜುನಾಥ್, ಎಸ್‌ಎಸ್‌ಟಿ ಮಂಜುನಾಥ್, ನಾಗರಾಜುಬಾಬು, ಸಿ.ರಾಮಕೃಷ್ಣ ತಿಳಿಸಿದರು.
ನಗರಸಭೆ ತ್ಯಾಜ್ಯ ನೀರು ಶುದ್ಧೀಕರಣ ಘಟಕದಿಂದ ವಿಷಯುಕ್ತ ನೀರುಕೆರೆಗಳಿಗೆ ಹೋಗುತ್ತಿಲ್ಲ. ಇಲ್ಲಿನ ಕೆರೆಗಳನೀರು ವಿಷಯುಕ್ತವಾಗಲು ಬಾಶೆಟ್ಟಿಹಳ್ಳಿಪಟ್ಟಣ ಪಂಚಾಯಿತಿಯಿಂದ ಹಾಗೂಕೈಗಾರಿಕೆಗಳು ಶುದ್ಧೀಕರಿಸದೆ ನೇರವಾಗಿ ಕೆರೆಗೆ ಬಿಡುತ್ತಿರು ವುದೇ ಕಾರಣ ಹೊರತುನಗರಸಭೆಯದ್ದಲ್ಲ. – ಸುಧಾರಾಣಿ, ನಗರಸಭೆ ಅಧ್ಯಕ್ಷೆ