Advertisement

ಹಾನಗಲ್ಲ: ಬಿಜೆಪಿಯಲ್ಲಿ ಭ್ರಷ್ಟರಿಗಷ್ಟೇ ಭಾರಿ ಗೌರವ: ರಾಹುಲ್‌

06:12 PM Apr 25, 2023 | Team Udayavani |

ಹಾನಗಲ್ಲ: ಬಿಜೆಪಿಯಲ್ಲಿ 40 ಪರ್ಸೆಂಟ್‌ಗಿಂತ ಹೆಚ್ಚು ಭ್ರಷ್ಟಾಚಾರ ಮಾಡಿದವರಿಗೆ ಗೌರವವಿದೆಯೇ ಹೊರತು ಸ್ವತ್ಛ ರಾಜಕಾರಣಿಗಳಿಗೆ ಬೆಲೆ ಇಲ್ಲ. ಗುತ್ತಿಗೆದಾರರು ಪ್ರಧಾನಿಗೆ ಭ್ರಷ್ಟಾಚಾರದ ಪತ್ರ ಬರೆದಿದ್ದರೂ ಇದುವರೆಗೆ ತೆರೆದು ನೋಡಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ  ಕಿಡಿಕಾರಿದರು.

Advertisement

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಾಯಲ್ಲಿ ಬಸವಣ್ಣನವರ ಮಾತುಗಳನ್ನಾಡುತ್ತ ವಾಸ್ತವದಲ್ಲಿ ದ್ವೇಷ, ಜಾತಿ-ಧರ್ಮದ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆಯುವ ಬಿಜೆಪಿ, ಕಳ್ಳತನದಿಂದ ಶಾಸಕರನ್ನು ಖರೀದಿ ಸಿ ಸರ್ಕಾರ ಮಾಡಿತು. ಬಿಜೆಪಿ ಆಡಳಿತದಲ್ಲಿ ಮುಖ್ಯಮಂತ್ರಿಯಾಗಲು ಎರಡೂವರೆ ಸಾವಿರ ಕೋಟಿ ರೂ. ಹಣ ನೀಡಬೇಕಾಗುತ್ತದೆ. ಬಡವರಿಗಾಗಿ ಯೋಚಿಸದೆ ಬೆರಳೆಣಿಕೆಯ ಶ್ರೀಮಂತರಿಗಾಗಿ ಬಿಜೆಪಿ ಸರ್ಕಾರ ಯೋಜನೆಗಳನ್ನು ರೂಪಿಸುತ್ತದೆ ಎಂದರು.

40 ಪರ್ಸೆಂಟ್‌ ಕಮಿಷನ್‌ ಸರ್ಕಾರ ಈ ರಾಜ್ಯದ ಜನತೆಗೆ ಮೋಸ ಮಾಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗಲಿದ್ದು, ಮೊಟ್ಟ ಮೊದಲ ದಿನವೇ ಬಡವರಿಗಾಗಿ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‌ ಉಚಿತ ವಿದ್ಯುತ್‌, ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಮನೆಯ ಯಜಮಾನಿಗೆ 2000 ರೂ., ಅನ್ನ ಭಾಗ್ಯದಲ್ಲಿ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ,
ಪದವೀಧರರಿಗೆ 3000, ಡಿಪ್ಲೊಮಾ ಪದವೀಧರರಿಗೆ 1500 ರೂ. ಪ್ರತಿ ತಿಂಗಳು ನೀಡುವ ಯೋಜನೆಗಳನ್ನು ಜಾರಿ ಮಾಡಲಾಗುತ್ತದೆ ಎಂದರು. ಭಾರತದ ಪ್ರಧಾನಿ ಸರ್ಕಾರ ನಡೆಸುತ್ತಿಲ್ಲ. ಕಾರ್ಯದರ್ಶಿಗಳು ಎಲ್ಲ ಯೋಜನೆ ಮಾಡುತ್ತಾರೆ.

ಜಾತಿ ಆಧಾರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಸೇರಿದಂತೆ ಹಿಂದುಳಿದ ವರ್ಗಗಳಿಗೆ ಸರಿಯಾಗಿ ಮೀಸಲಾತಿ ಹಂಚಿಕೆಯಲ್ಲಿ ಸರ್ಕಾರ ವಿಫಲವಾಗಿದೆ. ಮೀಸಲಾತಿಯನ್ನು ಶೇ.50ರ ಮಿತಿ ತೆಗೆದು ಹಾಕಿ ಆಯಾ ಜನಸಂಖ್ಯೆಗನುಗುಣವಾಗಿ ಮೀಸಲಾತಿ ನೀಡುವಂತಾಗಬೇಕು ಎಂದರು. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡುವ ಮೂಲಕ ಕೃಷಿಕರಿಗೆ ಮೊದಲ ಆದ್ಯತೆ ನೀಡುವುದು, ಬೆಲೆ ಏರಿಕೆಗೆ ಕಡಿವಾಣ ಹಾಕುವುದು ನಮ್ಮ ಇಚ್ಛೆಯಾಗಿದೆ.

ನಮ್ಮ ಸರ್ಕಾರದಲ್ಲಿ ಲೀಟರ್‌ಗೆ 70 ರೂ. ಇದ್ದ ಪೆಟ್ರೋಲ್‌ ಬೆಲೆ ನೂರು ದಾಟಿದೆ. 400 ಇದ್ದ ಗ್ಯಾಸ್‌ ಸಿಲಿಂಡರ್‌ ಬೆಲೆ ಸಾವಿರ ರೂ. ದಾಟಿದೆ. ಇದು ಬಿಜೆಪಿ ಸಾಧನೆಯೇ. ಬಿಜೆಪಿ ಖಾಸಗೀಕರಣಕ್ಕೆ ಮುಂದಾಗಿದೆ. ಇದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದರು.

Advertisement

ಹಾನಗಲ್ಲ ಕ್ಷೇತ್ರದಲ್ಲಿ ಜನಸೇವೆ ಮೂಲಕ ಹೆಸರು ಮಾಡಿರುವ ಶ್ರೀನಿವಾಸ ಮಾನೆ ಅವರನ್ನು ಅತಿ ಹೆಚ್ಚು ಬಹುಮತದಿಂದ ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಗೆ ನೀವು ನಾಂದಿ ಹಾಡುತ್ತೀರಿ ಎಂಬ ವಿಶ್ವಾಸವಿದೆ. 40 ಪರ್ಸೆಂಟೇಜ್‌ ಪಡೆಯುವ ಬಿಜೆಪಿಗೆ ಈ ಬಾರಿ ರಾಜ್ಯ ಕೇವಲ 40 ಸೀಟುಗಳನ್ನು ಮಾತ್ರ ಕೊಡಬೇಕು.
ರಾಹುಲ್‌ ಗಾಂಧಿ , ಕಾಂಗ್ರೆಸ್‌ ವರಿಷ್ಠ

Advertisement

Udayavani is now on Telegram. Click here to join our channel and stay updated with the latest news.

Next