Advertisement

ಹಾಸಿಗೆ ಕೊರತೆ ಎಂಬ ಆತಂಕ ಬೇಡ

05:53 AM Jul 06, 2020 | Lakshmi GovindaRaj |

ಬೆಂಗಳೂರು: ಇತ್ತೀಚೆಗೆ ನಡೆದ ಟಾಸ್ಕ್ ಫೋರ್ಸ್‌ ಸಭೆಯಲ್ಲಿ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ 722 ಹಾಸಿಗೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಶೇ.80 ಹಾಸಿಗೆ ಖಾಲಿ ಇರುವ ಮಾಹಿತಿಯಿದ್ದು, ಹಾಸಿಗೆ ಕೊರತೆ ಇಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿ ಭಾನುವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ, ಬೆಂಗಳೂರಿನಲ್ಲಿ ರೋಗಿಗಳಿಗೆ ಹಾಸಿಗೆ ಹಂಚಿಕೆ ಆತಂಕದ ಬಗ್ಗೆ ಚರ್ಚೆ ನಡೆಯುತ್ತಿದೆ.

Advertisement

ಇತ್ತೀಚೆಗೆ ನಡೆದ ಟಾಸ್ಕ್ ಫೋರ್ಸ್‌ ಸಭೆ  ಮಾಹಿತಿ ಪ್ರಕಾರ ವಿಕ್ಟೋರಿಯಾ ಆಸ್ಪತ್ರೆ, ರಾಜೀವ್‌ಗಾಂಧಿ ಎದೆರೋಗಿಗಳ ಸಂಸ್ಥೆ ಹಾಗೂ ಬೌರಿಂಗ್‌ ಆಸ್ಪತ್ರೆ ಹೊರತುಪಡಿಸಿ ಇತರೆ ಸರ್ಕಾರಿ ಆಸ್ಪತ್ರೆಗಳಲ್ಲಿ 722 ಹಾಸಿಗೆ ಸಿದ್ಶಪಡಿಸಲಾಗಿತ್ತು. ಜತೆಗೆ ಖಾಸಗಿ ವೈದ್ಯಕೀಯ ಕಾಲೇಜು  ಶೇ.50 ಹಾಸಿಗೆ ಕಾಯ್ದಿರಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಪ್ಪಿವೆ ಎಂದು ತಿಳಿಸಿದ್ದಾರೆ.

ಹಾಗೆಯೇ ಖಾಸಗಿ ಆಸ್ಪತ್ರೆಗಳಲ್ಲೂ ಶೇ.50 ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಮೀಸಲಿಟ್ಟು ಸರ್ಕಾರದ ಸ್ವಾಮ್ಯಕ್ಕೆ ನೀಡಬೇಕು ಎಂಬ  ಸಿಎಂ ಮನವಿಗೆ ಖಾಸಗಿ ಆಸ್ಪತ್ರೆಗಳು ಒಪ್ಪಿವೆ. ಅದರಂತೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ.80 ಹಾಸಿಗೆ ಖಾಲಿ ಇವೆ. ಹೀಗಾಗಿ ಹಾಸಿಗೆ ಕೊರತೆ ಆಗಿದೆ ಎಂಬ ಆತಂಕ ಬೇಡ ಎಂದು ಹೇಳಿದ್ದಾರೆ. ಅಧಿಕಾರಿಗಳಿಗೆ ಹೊಸ ಸೋಂಕಿತ ಪ್ರಕರಣ ವರದಿ  ಸಿಗುತ್ತಿದ್ದಂತೆ ಸೂಕ್ತ ಹಾಸಿಗೆ ಗುರುತಿಸಿ ಜೋಡಿಸಲು ಸ್ವಲ್ಪ ಸಮಯ ಬೇಕಾಗುತ್ತದೆ.

ಇದನ್ನು ಅರ್ಥ ಮಾಡಿಕೊಳ್ಳಬೇಕು. ರೋಗ ಲಕ್ಷಣವಿಲ್ಲದವರು ಸದೃಢರಾಗಿ, ಆರೋಗ್ಯವಂತರಾಗಿದ್ದರೆ ಮನೆಯಲ್ಲೇ ಪ್ರತ್ಯೇಕವಾಗಿರಬಹುದು. ವೈದ್ಯರು  ನಿರಂತರವಾಗಿ ಆರೋಗ್ಯ ತಪಾಸಣೆ ನಡೆಸಿ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next