ನವ ದೆಹಲಿ : ಗ್ರೆಟಾ ಥನ್ ಬರ್ಗ್ ಟ್ವಿಟರ್‌ನಲ್ಲಿ “ಟೂಲ್ಕಿಟ್” ಹಂಚಿಕೊಂಡ ನಂತರ, ಹವಾಮಾನ ಹೋರಾಟಗಾರ್ತಿ ದಿಶಾ ರವಿ, ಯುಎಪಿಎ ಕಠಿಣ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳುವ ಭಯದಿಂದ ಸ್ವೀಡನ್ ನ ಪರಿಸರ ಹೋರಾಟಗಾರ್ತಿ ಥನ್ ಬರ್ಗ್ ಅವರಲ್ಲಿ ತಮ್ಮ ಪೋಸ್ಟ್ ನನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದರು ಎಂಬ ಮಾಹಿತಿಯನ್ನು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಓದಿ : ರೈತನೊಬ್ಬ ಈಗ “ಹೆಲಿಕಾಪ್ಟರ್ ಮಾಲಿಕ…!”
ದಿಶಾ ಕೋರಿಕೆಯ ಮೇರೆಗೆ ಥನ್ ಬರ್ಗ್ ಪೋಸ್ಟ್ ನ್ನು ಡಿಲೀಟ್ ಮಾಡಿದ್ದು, ನಂತರ ಎಡಿಟೆಡ್ ಡಾಕ್ಯುಮೆಂಟನ್ನು ಹಂಚಿಕೊಂಡಿದ್ದಾರೆ. ಈ ಎಡಿಟೆಡ್ ಡಾಕ್ಯುಮೆಂಟನ್ನು ದಿಶಾ ರವಿ ತಯಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು, ದಿಶಾ ವಾಟ್ಸ್ಯಾಪ್ ನಲ್ಲಿಯೂ ಕೂಡ ಥನ್ ಬರ್ಗ್ ಅವರಲ್ಲಿ ಸಂದೇಶ ಕಳುಹಿಸಿದ್ದು, “ನೀವು ಟೂಲ್ಕಿಟ್ ನ್ನು ಟ್ವೀಟ್ ಮಾಡಲು ಸಾಧ್ಯವಿಲ್ಲ. ಸ್ವಲ್ಪ ಹೊತ್ತಿನ ತನಕ ನಾವು ಏನನ್ನೂ ಹೇಳಲು ಸಾಧ್ಯವಿಲ್ಲ. ನಾನು ವಕೀಲರಲ್ಲಿ ಮಾತಾಡಲು ಹೋಗುತ್ತಿದ್ದೇನೆ. ಐ ಆ್ಯಮ್ ಸ್ವಾರಿ, ನಮ್ಮ ಹೆಸರು ಅದರ ಮೇಲಿದೆ. ಖಂಡಿತವಾಗಿಯೂ ನಮ್ಮ ವಿರುದ್ಧ ಯುಎಪಿಎ ಬರಲಿದೆ” ಎಂದು ಹಂಚಿಕೊಂಡಿದ್ದಾರೆ ಎಂಬ ವರದಿಯಾಗಿದೆ.
ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವಿಕೆ ಕಠಿಣ ಕಾಯ್ದೆ ಯುಎಪಿಎ ಅಡಿಯಲ್ಲಿ ಪ್ರಕರಣವನ್ನು ದಾಖಲಾಗುವ ಭಯದಿಂದ ದಿಶಾ ಈ ಮನವಿಯನ್ನು ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಓದಿ : ಅಮೇರಿಕಾಕ್ಕೆ ಕಳಂಕವಾಗಿರುವ ಬೃಹತ್ ಕಾರಾಗೃಹ “ಗ್ವಾಂಟನಾಮೊ ಬೇ” ಶಾಶ್ವತ್ ಬಂದ್ …!?