Advertisement

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

10:23 PM May 03, 2024 | Team Udayavani |

ಧಾರವಾಡ: ವಾರಂಟಿಯೇ ಇಲ್ಲದ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ನೀಡುತ್ತಿದ್ದು, ಈ ಗ್ಯಾರಂಟಿಗಳಿಗೆ ಮರುಳಾಗದೇ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಬೇಕು ಎಂದು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು.

Advertisement

ನಗರದ ಕೆಸಿಡಿ ಮೈದಾನದಲ್ಲಿ ಶುಕ್ರವಾರ ಸಂಜೆ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರ ಪ್ರಚಾರಾರ್ಥ ಹಮ್ಮಿಕೊಂಡಿದ್ದ ಬಿಜೆಪಿಯ ಮಹಿಳಾ ಮೋರ್ಚಾ ಹಾಗೂ ಯುವ ಮೋಚಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಳೆದ 20 ವರ್ಷಗಳಿಂದ ದೇಶದಲ್ಲಿ ಕಾಂಗ್ರೆಸ್ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸ್ಥಾನಗಳ ಸಂಖ್ಯೆಯಲ್ಲಿ ಕುಸಿಯುತ್ತಾ ಬಂದಿದ್ದು, ಈಗಂತೂ 300ಕ್ಕೂ ಕಡಿಮೆ ಸ್ಥಾನಗಳಲ್ಲಿ ಅಷ್ಟೇ ಸ್ಪರ್ಧೆ ಮಾಡಿದೆ. ಕಾಂಗ್ರೆಸ್ ಪಕ್ಷದ ಶಕ್ತಿಯೇ ಹುದುಗಿ ಹೋಗುತ್ತಾ ಇದ್ದು, ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ವಾರಂಟಿಯೇ ಇಲ್ಲ. ಇಂತಹ ಪಕ್ಷದಿಂದ ಗ್ಯಾರಂಟಿಗಳನ್ನು ನಂಬದೇ ಬಿಜೆಪಿಗೆ ಮತ ನೀಡಬೇಕು ಎಂದರು.

ವಿಶ್ವವು ಈಗ ಭಾರತದತ್ತ ನೋಡುತ್ತಿದ್ದು, ಪ್ರತಿಯೊಂದರಲ್ಲೂ ಭಾರತದ ನಡೆ, ಮಾತುಗಳೇ ಮಾನ್ಯ ಆಗುತ್ತಿದೆ. ವಿಶ್ವವೇ ಭಾರತದ ಮಾತು ಕೇಳುವಂತಹ ಕಾಲ ಬಂದಿದ್ದು, ಇದಕ್ಕೆ ಕಾರಣ ಪ್ರಧಾನ ನರೇಂದ್ರ ಮೋದಿ. ಸಾಮಾನ್ಯರಾಗಿ ಬೆಳೆದು ಸಿಎಂ, ಪಿಎಂ ಆಗಿ ದೇಶದ ನಾಯಕರಾಗಿದ್ದ ನರೇಂದ್ರ ಮೋದಿ ವಿಶ್ವನಾಯಕರಾಗಿ ಹೊರಹೊಮ್ಮಿದ್ದು, ಆ ತಾಕತ್ತು ಅವರಿಗಿದೆ. ವಿಶ್ವದಲ್ಲಿ ಭಾರತದ ಸ್ಥಾನಮಾನ ಉನ್ನತಕ್ಕೇರಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲೇಬೇಕಿದ್ದು, ಇದಕ್ಕಾಗಿ ಯುವ ಪೀಳಿಗೆ ಹಾಗೂ ಮಹಿಳೆಯರು ಕೈ ಜೋಡಿಸಬೇಕು ಎಂದರು.

ರಾಹುಲ್ ಗಾಂಧಿ ಅವರು ತಾವೇ ಆಯ್ಕೆಯಾದ ಸ್ವಕ್ಷೇತ್ರಕ್ಕೆ ಐದು ವರ್ಷದಲ್ಲಿ ಭೇಟಿ ನೀಡಿದ್ದು ಕೇವಲ 7 ಸಲ. ಅದೇ ವಿದೇಶಕ್ಕೆ ಹೋಗಿದ್ದು 80 ಸಲ. ರಾಹುಲ್‌ರ ನಡೆ, ನುಡಿ ನೋಡಿದಾಗ ಪ್ರಧಾನಿ ಅಭ್ಯರ್ಥಿಗೆ ಇರಬೇಕಾದ ಗುಣಮಟ್ಟವಿಲ್ಲ. ಇಂತಹವರ ಕೈಯಲ್ಲಿ ದೇಶ ಎಂದಿಗೂ ಸುಭದ್ರವಲ್ಲ. ನಮಗೆ ಗಟ್ಟಿಯಾದ ಪ್ರಧಾನಿಬೇಕು. ಆ ಗಟ್ಟಿತನ ಮೋದಿ ಅವರಲ್ಲಿದೆ ಎಂದರು.

Advertisement

ಉತ್ತರ ಕರ್ನಾಟಕದ 14 ಕ್ಷೇತ್ರಕ್ಕೆ ಮೇ 7ಕ್ಕೆ ಮತದಾನವಿದ್ದು, ಎಲ್ಲರೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಕೈ ಜೋಡಿಸಬೇಕು. ಈ ಹಿಂದೆಯೂ ಮೋದಿ ಎಂದಿಗೂ ತಪ್ಪು ಮಾಡಲ್ಲ ಎಂಬ ನಂಬಿಕೆಯಿಂದಲೇ ಕಣ್ಣು ಮುಚ್ಚಿ ಕರ್ನಾಟಕ ರಾಜ್ಯದ ಜನತೆ ಮತ ಹಾಕಿದ್ದಾರೆ. ಈ ನಂಬಿಕೆ ಉಳಿಸಿಕೊಂಡಿರುವ ನರೇಂದ್ರ ಮೋದಿ ಅವರಿಗೆ ಈಗ ಮತ್ತೊಮ್ಮೆ ಮತದ ವರದಾನ ಮಾಡಬೇಕು ಎಂದರು.

ಕಳೆದ 20 ವರ್ಷದಲ್ಲಿ ಜಿಲ್ಲೆಯ ಅಭಿವೃದ್ದಿಯಲ್ಲಿ ಮುಂದಿದ್ದು, ಮುಂದಿನ 25 ವರ್ಷಕ್ಕೆ ಬೇಕಾದ ಮೂಲಭೂತ ಸೌಕರ್ಯಗಳಿಗೆ ಪ್ರಹ್ಲಾದ ಜೋಶಿ ಆದ್ಯತೆ ಕೊಟ್ಟಿದ್ದಾರೆ. ಎಲ್ಲ ಕ್ಷೇತ್ರದಲ್ಲಿ ಅಭಿವೃದ್ದಿ ಮಾಡಿದಲ್ಲದೇ ಅವಳಿನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡಿರುವ ಕೀರ್ತಿ ಅವರಿಗಿದೆ. ಇನ್ನಷ್ಟು ಜಿಲ್ಲೆಯ ಅಭಿವೃದ್ದಿಯಲ್ಲದೇ ದೇಶದಲ್ಲಿ ಉನ್ನತಿಗೆ ಪ್ರಹ್ಲಾದ ಜೋಶಿ ಅವರ ಅವಶ್ಯಕತೆಯಿದ್ದು, ಈ ಸಲವೂ ಅವರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಮಾತನಾಡಿ, ರಕ್ತಪಾತ ಆಗುತ್ತಿದ್ದ ಕಾಶ್ಮೀರ ಈಗ ಪರಿಶುದ್ದವಾಗಿದೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಶ್ಮೀರದ ವಿಶೇಷ ಅಟಿಕಲ್ 370 ರದ್ದುಪಡಿಸಿದ್ದನ್ನು ವಾಪಸ್ಸು ಪಡೆಯುವುದಾಗಿ ರಾಹುಲ್ ಗಾಂಧಿ ಹೇಳುತ್ತಾರೆ. ಆದರೆ ರಾಹುಲ್ ಗಾಂಧಿ ಅವರೇ ಅಲ್ಲ, ಅವರ ತಾತ, ಮುತ್ಯಾತರೂ ಬಂದರೂ ರದ್ದುಪಡಿಸಿದನ್ನು ಮರಳಿ ಹಿಂಪಡೆಯಲಾಗದು ಎಂದು ಸವಾಲು ಹಾಕಿದರು.

ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಇದು ನರೇಂದ್ರ ಮೋದಿ, ಪ್ರಹ್ಲಾದ ಜೋಶಿ ಅವರ ಚುನಾವಣೆಯಂತೂ ಅಲ್ಲವೇ ಅಲ್ಲ. ಇದು ನಮ್ಮ ದೇಶ ಹಾಗೂ ಮಹಿಳೆಯರ ಸುರಕ್ಷತೆ ಹಾಗೂ ನಮ್ಮ ಮುಂದಿನ ಯುವ ಪೀಳಿಗೆಯ ಭವಿಷ್ಯದ ಚುನಾವಣೆ ಆಗಿದೆ. ಹೀಗಾಗಿ ದೇಶದ ಮುಂದಿನ ಉನ್ನತ ಭವಿಷ್ಯಕ್ಕಾಗಿ ನರೇಂದ್ರ ಮೋದಿ ಕೈ ಬಲಪಡಿಸಲು ಪ್ರಹ್ಲಾದ ಜೋಶಿ ಅವರನ್ನು ಮತ್ತೊಮ್ಮೆ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಳವಿಕಾ, ಮಾಜಿ ಶಾಸಕಿ ಸೀಮಾ ಮಸೂತಿ, ಚೈತ್ರಾ ಶಿರೂರ, ತಿಪ್ಪಣ್ಣ ಮಜ್ಜಗಿ, ರಾಜೇಶ್ವರಿ ಸಾಲಗಟ್ಟಿ, ಶಂಕರಕುಮಾರದೇಸಾಯಿ ಸೇರಿದಂತೆ ಹಲವರು ಇದ್ದರು.

ಕಳೆದ 10 ವರ್ಷದಲ್ಲಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಕಪ್ಪುಚುಕ್ಕೆಗಳಿಲ್ಲ. ಈ ಅವಧಿಯಲ್ಲಿ ದೇಶದ ಭವಿಷ್ಯ,ಸುಭದ್ರತೆ ಹಾಗೂ ನಮಗಾಗಿ ಕೆಲಸ ಮಾಡಿದ್ದಾರೆ. ಅವರೊಂದಿಗೆ ಧನ್ಯವಾದ ಹೇಳುವ ಸುಸಮಯ ಬಂದಿದ್ದು, ಮತದಾನದ ಮೂಲಕ ಎಲ್ಲರಿಗೂ ಧನ್ಯವಾದ ಹೇಳಬೇಕು. ಅದರಲ್ಲೂ ವಿಶೇಷವಾಗಿ ಯುವಕರು ಒಂದಲ್ಲ, 10 ಜನರಿಂದ ಮತ ಹಾಕಿಸುವ ಮೂಲಕ ದೇಶ ಹಾಗೂ ಯುವ ಪೀಳಿಗೆಯ ಭವಿಷ್ಯಕ್ಕಾಗಿ
ಮೋದಿ ಅವರನ್ನು ಆಯ್ಕೆ ಮಾಡಬೇಕು.
-ಅಣ್ಣಾಮಲೈ, ತಮಿಳುನಾಡು ರಾಜ್ಯಾಧ್ಯಕ್ಷ

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಲಗೈ ಬಂಟನಾಗಿ ಕೆಲಸ ಮಾಡಿರುವ ಪ್ರಹ್ಲಾದ ಜೋಶಿ ಅವರು ಜಿಲ್ಲೆಗೆ ಅಷ್ಟೇ ಅಲ್ಲ ಇಡೀ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಜೋಶಿಯವರ ಆಡಳಿತ, 10 ವರ್ಷಗಳಲ್ಲಿ ನರೇಂದ್ರ ಮೋದಿ ಆಡಳಿತ ನೋಡಿರುವ ಜನತೆ ಈ ಸಲವೂ ಆರ್ಶೀವಾದ ಮಾಡಬೇಕು. ಎಲ್ಲ ಕಡೆ ಬಿಜೆಪಿ ಅಲೆಯೇ ಇದ್ದು, ಹೀಗಾಗಿ ೫ನೇ ಬಾರಿಯೂ ಪ್ರಹ್ಲಾದ ಜೋಶಿಯವರ ಆಯ್ಕೆ ಖಚಿತವಾಗಿದ್ದು, ಇದರಲ್ಲಿ ಯಾವ ಸಂದೇಹವೂ ಇಲ್ಲ ಎಂದು ಅಣ್ಣಾಮಲೈ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಅಷ್ಟೇ ಅಲ್ಲ ದೇಶದಲ್ಲಿ ಐತಿಹಾಸಿಕ ಕೆಲಸಗಳು ಆಗಿದ್ದು, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ದಿ ಕಾಣುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷದಲ್ಲಿ ಮಾಡಿದ ಅಭಿವೃದ್ದಿ ಮಾಡಿದ್ದು ಬರೀ ಟೈಲರ್ ಮಾತ್ರ. ಅಬಿ ಪಿಚ್ಚರ್ ಬಾಕಿ ಹೈ. ಅದಕ್ಕಾಗಿ ದೇಶದ ಮುಂದಿನ ಭವಿಷ್ಯಕ್ಕಾಗಿ ಹಾಗೂ ದೇಶದಲ್ಲಿ ಬಡತನ ಸಂಪೂರ್ಣಕ್ಕಾಗಿ, ದೇಶದ ಸುಭದ್ರಕ್ಕಾಗಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಅಽಕಾರಕ್ಕೆ ಬರಲೇ ಬೇಕು. ನಮ್ಮ ಪಕ್ಷ ಮತ್ತೆ ಅಽಕಾರಕ್ಕೆ ಬರುತ್ತದೆ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ.
-ಪ್ರಹ್ಲಾದ ಜೋಶಿ, ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next