Advertisement

ಸ್ಟಾಲಿನ್‌ ಕಾಲಿಗೆರಗಬೇಡಿ, ಹೂಮಾಲೆ ಹಾಕಬೇಡಿ: ಡಿಎಂಕೆ ಅಪ್ಪಣೆ

04:13 PM Sep 01, 2018 | Team Udayavani |

ಚೆನ್ನೈ : ”ಪಕ್ಷದ ಅಧ್ಯಕ್ಷ ಎಂ ಕೆ ಸ್ಟಾಲಿನ್‌ ಅವರ ಕಾಲಿಗೆ ಯಾರೂ ಎರಗಬಾರದು, ಹೂಮಾಲೆ ಹಾಕಬಾರದು, ಕೇವಲ ಒಣಕ್ಕಂ ಎಂದು ಹೇಳುವ ಮೂಲಕ ಅವರನ್ನು ಗೌರವಿಸಬೇಕು” ಎಂದು ಡಿಎಂಕೆ ತನ್ನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಕಟ್ಟಪ್ಪಣೆ ಮಾಡಿದೆ.

Advertisement

”ನಾಯಕನ ಕಾಲಿಗೆ ಎರಗುವುದು ಆತ್ಮ ಗೌರವದ ತತ್ವಗಳಿಗೆ ವಿರುದ್ಧ. ಆದುದರಿಂದ ಯಾರೂ ಸ್ಟಾಲಿನ್‌ ಕಾಲಿಗೆ ಎರಗಬಾರದು; ಒಣಕ್ಕಂ ಎಂದು ಹೇಳಿದರೆ ಸಾಕು. ಆ ಮೂಲಕ ಎಲ್ಲರೂ ಉತ್ತಮ ರಾಜಕೀಯ ಸಂಸ್ಕೃತಿಯನ್ನು ರೂಪಿಸುವುದಕ್ಕೆ ಸಹಕರಿಬಹುದು” ಎಂದು ಡಿಎಂಕೆ ಹೇಳಿದೆ. 

ಹಿಂದೆಲ್ಲ ಎಐಎಡಿಎಂಕೆ ಪರಮೋಚ್ಚ ನಾಯಕಿ ದಿ| ಜಯಲಲಿತಾ ಅವರ ಹಿಂಬಾಲಕರು, ಅನುಯಾಯಿಗಳು, ಪದಾಧಿಕಾರಿಗಳು ಆಕೆಯ ಕಾಲಿಗೆ ಎರಗುತ್ತಿದ್ದುದನ್ನು ಡಿಎಂಕೆ ಲೇವಡಿ ಮಾಡುತ್ತಿತ್ತು. ಈಗ ತಾವೇ ಅಂತಹ ಕೃತ್ಯಕ್ಕೆ ಇತರರಿಂದ ಲೇವಡಿಗೆ ಗುರಿಯಾಗಬಾರದು ಎಂಬ ಕಾರಣಕ್ಕೆ ಡಿಎಂಕೆ ತನ್ನ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಈ ರೀತಿಯ ಕಟ್ಟಪ್ಪಣೆ ಮಾಡಿದೆ. 

ಕಳೆದ ಆಗಸ್ಟ್‌ 28ರಂದು ಸ್ಟಾಲಿನ್‌ ಪಕ್ಷದ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾಗ ಪಕ್ಷದ ಪ್ರಧಾನ ಕಾರ್ಯಾಲಯವಾದ ಅಣ್ಣಾ ಅರಿವಾಳಯಂ ನಲ್ಲಿ ಪಕ್ಷದ ಪದಾಧಿಕಾರಿಗಳು, ಸ್ಟಾಲಿನ್‌ ಕಾಲಿಗೆರಗಿ, ಹೂಮಾಲೆ, ಹೂ ಗುಚ್ಚ ನೀಡಿ ಗೌರವಿಸಿದ್ದರು.

ಆದರೆ ಅದಕ್ಕೂ ಹಿಂದೆ , ಈ ವರ್ಷ ಜನವರಿಯಲ್ಲಿ  ಪಕ್ಷದ ಕಾರ್ಯಾಧ್ಯಕ್ಷರಾದಾಗಲೇ ಸ್ಟಾಲಿನ್‌ , ತಮ್ಮ ಕಾಲಿಗೆ ಯಾರೂ ಎರಗಬಾರದು; ಹೂಮಾಲೆ ಹಾಕಬಾರದು ಎಂದು ತಾಕೀತು ಮಾಡಿದ್ದರು. ಆದರೂ ಅದು ಮತ್ತೆ ಮರುಕಳಿಸಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next