ಮುಂಬೈ : ಸದ್ಯದ ಕೋವಿಡ್ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ವೈದ್ಯರು ಕೂಡ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ತಮ್ಮ ಜೀವನವನ್ನೇ ಒತ್ತೆ ಇಟ್ಟು ಜನರನ್ನು ಕಾಪಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಸೋಂಕು ಉಲ್ಬಣವಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಮುಂಬೈ ವೈದ್ಯೆಯೊಬ್ಬರು ಕಣ್ಣೀರು ಹಾಕುತ್ತ ಜನರಲ್ಲಿ ಮನವಿ ಮಾಡಿದ್ದು, ದಯಮಾಡಿ ಕೋವಿಡ್ ಮುನ್ನೆಚ್ಚರಿಕೆಯಿಂದ ಇರಿ ಎಂದು ಕೇಳಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ದಯನೀಯವಾಗಿ ಮನವಿ ಮಾಡಿಕೊಂಡಿರುವ ಸಾಂಕ್ರಾಮಿಕ ರೋಗಗಳ ತಜ್ಞೆ ತೃಪ್ತಿ ಗಿಲಾಡಿ, ಕೋವಿಡ್ ಸೋಂಕನ್ನು ಲಘುವಾಗಿ ಪರಿಗಣಿಸಬೇಡಿ. ದಯಮಾಡಿ ಮಾಸ್ಕ್ ಧರಿಸಿ ಎಂದಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರುವ ವೈದ್ಯೆ, ನಾವು ಅಸಹಾಯಕರಾಗಿದ್ದೇವೆ. ಅಲ್ಲದೆ ನನ್ನಂತ ಅನೇಕ ವೈದ್ಯರು ಕೂಡ ಅಸಹಾಯಕರಾಗಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಕೋವಿಡ್ ನಿಯಂತ್ರಣ ಮಾಡುವಲ್ಲಿ ಸಹಕರಿಸಿ ಎಂದಿದ್ದಾರೆ.
ಸದ್ಯ ಆಸ್ಪತ್ರೆಗಳಲ್ಲಿ ಬೆಡ್ ಮತ್ತು ಆಕ್ಸಿಜನ್ ಕೊರತೆ ತಾಂಡವಾಡುತ್ತಿದೆ. ನಾವು ಸೋಂಕಿನಿಂದ ಗಂಭೀರವಾಗಿ ಬಳಲುತ್ತಿರುವ ರೋಗಿಗಳಿಗೆ ಬೆಡ್ ವ್ಯವಸ್ಥೆ ಮಾಡಿದ್ದೇವೆ. ಯಾಕಂದ್ರೆ ಆಸ್ಪತ್ರೆಗಳಲ್ಲಿ ಬೆಡ್ ಗಳು ಇಲ್ಲ. ಈ ವಿಚಾರದಿಂದ ನಾವು ಖುಷಿ ಪಡುತ್ತಿಲ್ಲ. ಸೋಂಕಿನಿಂದ ಗುಣಮುಖರಾದವರು ನಾವು ಹೀರೋಗಳು ಎಂದು ಭಾವಿಸಬೇಡಿ. ಎಚ್ಚರಿಕೆಯಿಂದ ಇರಿ ಎಂದಿದ್ದಾರೆ.
ಯುವ ಜನತೆ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದು, ಮುಂದಿನ ದಿನಗಳಲ್ಲಿ ಗಂಭೀರ ಸೋಂಕಿನ ಪರಿಣಾಮವನ್ನು ಹೆದುರಿಸುತ್ತಿದ್ದಾರೆ. ನೀವು ಹೊರಗಡೆ ಏನಕ್ಕಾಗಿ ಹೋಗುತ್ತಿದ್ದೀರಿ ಎಂಬುದು ಮುಖ್ಯವಲ್ಲ. ಆದ್ರೆ ಮನೆಯಿಂದ ಹೊರಗಡೆ ಹೋದ್ರೆ ದಯಮಾಡಿ ಬಾಯಿಯು ಸಂಪೂರ್ಣವಾಗಿ ಮುಚ್ಚುವಂತೆ ಮಾಸ್ಕ್ ಧರಿಸಿ.
ಮತ್ತೊಂದು ಪ್ರಮುಖ ವಿಷಯ ಅಂದ್ರೆ ಕೋವಿಡ್ ಸೋಂಕು ತಗುಲಿದ ಎಲ್ಲರೂ ಆಸ್ಪತ್ರೆಗೆ ಬಂದು ದಾಖಲಾಗಬೇಡಿ. ಇಲ್ಲಿ ಬೆಡ್ ಗಳ ಕೊರತೆ ಇದೆ. ಮೊದಲು ಮನೆಯಲ್ಲೇ ಕ್ವಾರಂಟೈನ್ ಆಗಿ. ನಿಮ್ಮ ವೈದ್ಯರಿಂದ ಸಲಹೆಗಳನ್ನು ಪಡೆಯಿರಿ. ಹಾಗಿದ್ದರೂ ಕೂಡ ತಮ್ಮ ಆರೋಗ್ಯದಲ್ಲಿ ವ್ಯತಿರಿಕ್ತ ಪರಿಣಾಮ ಕಂಡು ಬಂದರೆ ಮಾತ್ರ ಆಸ್ಪತ್ರೆಗೆ ದಾಖಲಾಗಿ. ಸೋಂಕು ತಗುಲಿದ ಎಲ್ಲರೂ ಆಸ್ಪತ್ರೆಗೆ ದಾಖಲಾದರೆ ಬೆಡ್ ಗಳು ಎಲ್ಲರಿಗೂ ಸಿಗುವುದಿಲ್ಲ ಎಂದಿದ್ದಾರೆ.
ಕೋವಿಡ್ ಲಸಿಕೆಯಿಂದ ಸೋಂಕು ಗುಣಮುಖವಾಗುವುದಿಲ್ಲ ಎಂಬ ವದಂತಿಯು ತುಂಬಾ ಹರಿದಾಡುತ್ತಿದೆ. ಇದಕ್ಕೆ ಕಿವಿಗೊಡಬೇಡಿ. ಯಾರೆಲ್ಲ ಇನ್ನೂ ಲಸಿಕೆಯನ್ನು ಹಾಕಿಸಿಕೊಂಡಿಲ್ಲವೋ ದಯಮಾಡಿ ಹಾಕಿಸಿಕೊಳ್ಳಿ ಎಂದು ತೃಪ್ತಿ ಮನವಿ ಮಾಡಿದ್ದಾರೆ.