Advertisement

ಉಗ್ರ ಹಫೀಜ್‌ ಬಂಧನಕ್ಕೆ ಲಾಹೋರ್‌ ಹೈ ತಡೆ

09:29 AM Jan 25, 2018 | Team Udayavani |

ಲಾಹೋರ್‌: ಮುಂಬಯಿ ದಾಳಿಯ ರೂವಾರಿ, ಜಮಾತ್‌ ಉದ್‌ ದಾವಾ ಸಂಘಟನೆ ಉಗ್ರ ಹಫೀಜ್‌ ಸಯೀದ್‌ನನ್ನು ಮಾ.17ರವರೆಗೆ ಬಂಧಿಸದಂತೆ ಪಾಕ್‌ ಸರಕಾರಕ್ಕೆ ಲಾಹೋರ್‌ ಹೈಕೋರ್ಟ್‌ ಆದೇಶ ನೀಡಿದೆ. 

Advertisement

ಸಯ್ಯದ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಕುರಿತಾಗಿ ಪರಿಶೀಲನೆ ನಡೆಸಲು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಯೋಗ ಪಾಕಿಸ್ಥಾನಕ್ಕೆ ಗುರುವಾರ ಭೇಟಿ ನೀಡುವ ಮುನ್ನವೇ ಈ ಬೆಳವಣಿಗೆ ನಡೆದಿದೆ.  ಅತ್ತ ಪಾಕಿಸ್ಥಾನದ ಕೆಲ ಮಾಧ್ಯಮಗಳು, ಪಾಕ್‌ ಸರಕಾರ, ನಿಯೋಗಕ್ಕೆ ಹಫೀಜ್‌ ಭೇಟಿ ಮಾಡಲು ಅವಕಾಶ ನೀಡುವುದಿಲ್ಲವೆಂದು ಅಭಿಪ್ರಾಯಪಟ್ಟಿವೆ. 

ಏತನ್ಮಧ್ಯೆ, ಪಾಕಿಸ್ಥಾನ-ಅಫ್ಘಾನಿಸ್ಥಾನ ಗಡಿ ಪ್ರದೇಶದ ಮನೆಯೊಂದರ ಮೇಲೆ ಬುಧವಾರ ಅಮೆರಿಕ ಸೇನೆ, ಡ್ರೋಣ್‌ ಮೂಲಕ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಹಕ್ಕಾನಿ ಉಗ್ರರ ನಾಯಕ ಎಹಸಾನ್‌ ಅಲಿಯಾಸ್‌ ಖವಾರಿ ಹಾಗೂ ಆತನ ಇಬ್ಬರು ಸಹಚರರು ಬಲಿಯಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next