Advertisement

ಕಳ್ಳತನ ಮಾಡಿ ಸಕ್ಕರೆ ಹಂಚಿಲ್ಲ

05:51 PM May 05, 2020 | mahesh |

ಆನೇಕಲ್‌: ತಾಲೂಕು ಬಿಜೆಪಿ ಕಾರ್ಯಕರ್ತರಿಗೆ ಕಳ್ಳತನ ಮಾಡಿ ಸಕ್ಕರೆ ಹಂಚುವ ಮನೋಭಾವವಿಲ್ಲ ಎಂದು ಚಿತ್ರದುರ್ಗ ಲೋಕಸಭಾ ಸಂಸದ ನಾರಾಯಣಸ್ವಾಮಿ ತಿಳಿಸಿದರು.

Advertisement

ಸರ್ಜಾಪುರದಲ್ಲಿ ಸರ್ಜಾಪುರದ ಎಂಎಸ್‌ಪಿಸಿ ಕೇಂದ್ರದ ಕಾರ್ಮಿಕರಿಂದ ಎಸ್‌ಟಿಆರ್‌ಆರ್‌ ಪ್ರಾಧಿಕಾರದ ಅಧ್ಯಕ್ಷ ಮುನಿರಾಜು ಅವರು ಸಕ್ಕರೆ ಪ್ಯಾಕೆಟ್‌ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಅಕ್ರಮ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ. ಸುರೇಶ್‌, ಉಗ್ರಪ್ಪ, ಆನೇಕಲ್‌ ಶಾಸಕ ಶಿವಣ್ಣ ಆರೋಪ ಮಾಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು. ಸಂಸದರು ಮಾಹಿತಿ ಅರಿತು ಮಾತನಾಡಲಿ. ಪ್ರಧಾನಿ, ಸಿಎಂ ಬಗ್ಗೆ ಮಾತನಾಡುವುದು ಶೋಭೆ ತರಲ್ಲ. ಅಧಿಕಾರಿಗಳಿಗೆ ಒತ್ತಡ ಹೇರುವ ಮನೋಭಾವ ದೂರ ವಾಗಬೇಕು. ಗೋದಾಮಿಗೆ ಹೋದಾಗ ನನಗೆ ಬಂದಿರುವ ಸ್ಟಾಕ್‌ ಪರಿಶೀಲನೆ ಮಾಡಲಿ, ತಪ್ಪಾಗಿದ್ದರೆ ಎಫ್ಐಆರ್‌ ದಾಖಲು ಮಾಡಲು ಮಾಡಲಿ. ಅದನ್ನು ಬಿಟ್ಟು ಪೊಲೀಸರ ಮೇಲೆ ಒತ್ತಡ ತರುವ ಮನೋಭಾವ ಸಂಸದ ಡಿ.ಕೆ.ಸುರೇಶ್‌ರಿಗೆ ಒಳಿತಲ್ಲ ಎಂದರು. ಅಲ್ಲದೇ ಈ ಕುರಿತು ಕ್ಷಮೆ ಕೋರಬೇಕೆಂದರು.

ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ್‌, ಕೇಂದ್ರ ಸರ್ಕಾರದ ಉಜ್ವಲ ಯೋಜನೆಗೆ ಡಿ.ಕೆ.ಕುಟುಂಬದ ಹೆಸರನ್ನು ಹಾಕಿಕೊಂಡು ಗ್ಯಾಸ್‌ ವಿತರಣೆ ಮಾಡ ಲಾಗುತ್ತದೆ ಎಂದು ಹೇಳಿಕೊಂಡಿರುವುದು ಡಿ.ಕೆ. ಕುಟುಂಬಕ್ಕೆ ನಾಚಿಕೆ ಆಗಬೇಕು ಎಂದರು.

ಬೆಂಗಳೂರು ನಗರ ಜಿಪಂ ಅಧ್ಯಕ್ಷ ಮರಿಸ್ವಾಮಿ, ಕಾಂಗ್ರೆಸ್‌ ಆರೋಪದಲ್ಲಿ ಹುರುಳಿಲ್ಲ ಎಂದರು. ಎಸ್‌ ಟಿಆರ್‌ಆರ್‌ ಪ್ರಾಧಿಕಾರದ ಅಧ್ಯಕ್ಷ ಸಿ.ಮುನಿರಾಜು ಮಾತನಾಡಿ, ತಿಹಾರ್‌ ಜೈಲಿಗೆ ಹೋದವರಿಂದ ತಾನು ನೈತಿಕತೆ ಪಾಠ ಕಲಿಯಬೇಕಿಲ್ಲ. ತನ್ನ ಮೇಲಿನ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆಂದರು. ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಯಣ್ಣ,
ಬಿಜೆಪಿ ಆನೇಕಲ್‌ ತಾಲೂಕು ಮಂಡಲ ಅಧ್ಯಕ್ಷರಾದ ಎಸ್‌ಆರ್‌ಟಿ ಅಶೋಕ್‌, ಜಯಪ್ರಕಾಶ್‌ ರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next