Advertisement

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

04:57 PM Jul 15, 2024 | Team Udayavani |

ಬೆಲೆ ಕಟ್ಟಲಾಗದ ಜೀವ ಎಂದರೆ ಅದು ತಂದೆ ತಾಯಿ. ತಮ್ಮ ನೋವು, ಕಷ್ಟಗಳನ್ನು ಬದಿಗಿಟ್ಟು ಮಕ್ಕಳ ಸಂತೋಷಕ್ಕಾಗಿ ಪ್ರತೀದಿನ ಮಿಡಿಯುವ ಜೀವ. ಆದರೆ ಹೆತ್ತು ಹೊತ್ತು ಸಾಕಿದವರನ್ನು ಮಕ್ಕಳು ಅವರ ಬದುಕಿಗೆ ಆಸರೆಯಾಗಬೇಕಾದ
ಕಾಲದಲ್ಲೇ ಅವರನ್ನು ಆಶ್ರಮಗಳಿಗೆ ಸೇರಿಸುವುದು ಮಕ್ಕಳ ಅಮಾನವೀಯತೆಯನ್ನು ಸೂಚಿಸುತ್ತದೆ. ಅಂತೆಯೇ, ಆಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೂ ಮೂಲ ಕಾರಣ ಇದಾಗಿದೆ ಎಂದರೆ ತಪ್ಪೇನಿಲ್ಲ
.
ತಾಯಿ ಇರುವವರೆಗೆ ಹಸಿವು ಗೊತ್ತಾಗಲ್ಲ, ತಂದೆ ಇರುವವರೆಗೆ ಜವಾಬ್ದಾರಿ ಗೊತ್ತಾಗಲ್ಲ ಎಂಬ ಮಾತೊಂದಿದೆ. ಆದರೆ ಇತ್ತೀಚಿನ
ದಿನಗಳಲ್ಲಿ ಮಕ್ಕಳು ತಂದೆ ತಾಯಿಯನ್ನೇ ಮನೆಯಿಂದ ಹೊರಗೆ ತಳ್ಳುವುದನ್ನು ಕಾಣುತ್ತಿದ್ದೇವೆ. ಪೋಷಕರ ಪ್ರೀತಿಯನ್ನು
ಕುರುಡೆಂದು ಭಾವಿಸುವಂತಹ ಮಕ್ಕಳು ಸಹ
ಇಂದು ಇದ್ದಾರೆ.

Advertisement

ತಂದೆಯ ಆಸ್ತಿ ಬೇಕು ಆದರೆ ಅವರು ಬೇಡ ಎಂಬುದು ಈಗಿನ ಮಕ್ಕಳ ಮನಸ್ಥಿತಿ. ಮಕ್ಕಳಿಗೆ ಅವರ ಜವಾಬ್ದಾರಿ ಏನು ಎಂಬುದು
ತಿಳಿಯಬೇಕು. ಪೋಷಕರನ್ನು ಕಷ್ಟ ಕಾಲದ ಸಮಯದಲ್ಲಿ ನೋಡಿಕೊಳ್ಳುವುದರ ಜತೆಗೆ, ಅವರ ಮನಸ್ಥಿತಿಯನ್ನು ತಿಳಿದುಕೊಂಡು, ಆಶ್ರಮಗಳಿಗೆ ಸೇರಿಸುವುದನ್ನು ನಿಲ್ಲಿಸಬೇಕು. ಮಕ್ಕಳು ತಂದೆ ತಾಯಿಗೆ ನೀಡುವ ಕಿರುಕುಳದಿಂದಾಗಿ ಅವರು ಬೇಸತ್ತು ಹೋಗಿದ್ದಾರೆ. ಕೆಲವು ಪೋಷಕರು ತಮ್ಮ ಮಕ್ಕಳಿಂದ ತೊಂದರೆಯಾದರೂ ನ್ಯಾಯಾಲಯದ ಮೆಟ್ಟಿಲೇರುವುದಿಲ್ಲ. ಇನ್ನು ಕೆಲವರು ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಲೇ ಬೇಕಾಗುತ್ತದೆ.

ವೃದ್ಧಾಶ್ರಮವು ಯಾರು ನಿರ್ಗತಿಕರಾಗಿರುತ್ತಾರೋ ಅವರಿಗೆ ಆಸರೆಯಾಗಬೇಕೇ ಹೊರತು ಮಕ್ಕಳಿರುವ ಪೋಷಕರಿಗೆ ಅಥವಾ ವೃದ್ಧರಿಗಲ್ಲ. ಯಾರು ಅನಾಥರಾಗಿರುತ್ತಾರೋ ಅವರಿಗೆ ಒಂದು ನೆಲೆಯನ್ನು ಕಲ್ಪಿಸುವ ಕೆಲಸವನ್ನು ಮಾಡಬೇಕು. ನಿಜವಾಗಿಯೂ ಮಕ್ಕಳ ಕರ್ತವ್ಯ ಎಂದರೆ, ಪೋಷಕರನ್ನು ವೃದ್ಧಾಪ್ಯದ ಸಮಯದಲ್ಲಿ ನೋಡಿಕೊಳ್ಳುವುದು. ಅದರ ಬದಲಿಗೆ ಮಕ್ಕಳು ಇಂದು ತಂದೆ ತಾಯಿಯನ್ನು ನೋಡಿಕೊಳ್ಳಲು ಆಗುವುದಿಲ್ಲ ಎಂಬ ಒಂದೇ ಕಾರಣಕ್ಕೆ ಅವರನ್ನು ಆಶ್ರಮಗಳಿಗೆ ಕಳಿಸುವ ಬೇಜವಾಬ್ದಾರಿಯನ್ನು ಕಾಣುತ್ತಿದ್ದೇವೆ. ಪೋಷಕರು ತಮಗೆ ಅನ್ನವಿಲ್ಲದೇ ಹೋದರು ಪರವಾಗಿಲ್ಲ, ಮಕ್ಕಳು ತಿನ್ನಬೇಕು
ಎಂದು ಬಯಸುವರು. ಆದರೆ ಇಂದು ಮನಸುಗಳು ಬದಲಾಗಿವೆ ತಂದೆ ತಾಯಿಯರ ಮೇಲೆ ಕನಿಕರವೇ ಸತ್ತು ಹೋಗಿದ್ದು,
ಇವರಿಗೆ ಒಂದು ಹೊತ್ತು ಅನ್ನ ಹಾಕಲು ಕಷ್ಟವಾಗುವುದಾದರೆ ಅಂದು ಅವರು ಮಕ್ಕಳನ್ನು ಇಷ್ಟು ಕಷ್ಟ ಪಟ್ಟು ಓದಿಸಬೇಕಾಗಿಯೇ ಇರಲಿಲ್ಲ.

ತಂದೆ ತಾಯಿ ಎಂದರೆ ದೇವರಿಗೆ ಸಮ. ಅಂತಹ ದೇವರಿಗೆ ಮಕ್ಕಳು ಕೊಡುವಂತಹ ನೋವು ಕಡಿಮೆದ್ದಲ್ಲ. ತಮ್ಮನ್ನು ಸಾಕಿ ಸಲಹಿದ ಪೋಷಕರನ್ನು ಅವರ ಕಷ್ಟದ ಸಮಯದಲ್ಲಿ ನೋಡಿಕೊಳ್ಳಬೇಕು ಎಂಬ ಒಂದು ಮನಸ್ಥಿತಿ ಇರುತ್ತಿದ್ದರೆ, ಯಾವ ಪೋಷಕರೂ ಸಹ ಅನಾಥರಾಗಬೇಕಾಗಿರಲಿಲ್ಲ. ಹಲವಾರು ಕಡೆ ಅನಾಥ ವೃದ್ಧರನ್ನು ಆಶ್ರಮಗಳಿಗೆ ಸೇರಿಸುವ ಕಾರ್ಯ ನಡೆಯುತ್ತಿದೆ.

Advertisement

ಅಂತಹ ವೃದ್ಧರನ್ನು ಆಶ್ರಮಗಳಿಗೆ ಸೇರಿಸುವುದರಲ್ಲಿ ಒಂದು ಅರ್ಥವಿದೆ. ಆದರೆ ಮಕ್ಕಳಿದ್ದೂ, ಅವರು ತಮ್ಮ ಪೋಷಕರನ್ನು ಆಶ್ರಮಗಳಿಗೆ ಕಳಿಸಿದರೆ ಅಂತಹ ಮಕ್ಕಳಿಗೆ ಶಿûಾರ್ಹ ಅಪರಾಧದಂತಹ ನಿಯಮಗಳನ್ನು ಕಾನೂನು ತಂದರೆ ಮಾತ್ರ ಮಕ್ಕಳಿಗೆ ಪೋಷಕರ ನೋವು ಏನೆಂದು ತಿಳಿಯಲು ಸಾಧ್ಯ. ಹಾಗೆಯೇ ವೃದ್ಧಾಶ್ರಮವೂ ಅನಾಥರಾಗಿರುವ ವೃದ್ಧರಿಗೆ ಮಾತ್ರ ಮೀಸಲಾಗಿರುತ್ತದೆಯೇ ಹೊರತು ಮನೆ ಮಂದಿಗಳಿರುವ ವೃದ್ಧರಿಗಲ್ಲ.

ಮಕ್ಕಳಿಂದ ಜೀವನಾಂಶದ ವೆಚ್ಚಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ ವೃದ್ಧರ ಸ್ಥಿತಿಯೂ ದಯನೀಯವಾಗಿದೆ. ಮಕ್ಕಳ
ಮೇಲೆ ಪೋಷಕರ ಜೀವನಾಂಶದ ಕೇಸ್‌ ಗಳು 7 ಲಕ್ಷಕ್ಕಿಂತಲೂ ಹೆಚ್ಚಾಗಿದೆ. 35 ಲಕ್ಷಕ್ಕಿಂತಲೂ ಹೆಚ್ಚಿನ ವೃದ್ಧರು ಕೋರ್ಟ್‌ ಗಳಿಗೆ ಅಳೆಯುವಂತಹ ಸ್ಥಿತಿ ಎದುರಾಗಿದ್ದು, ಇಂತಹ ಕೇಸ್‌ ಗಳು ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕಗಳಲ್ಲಿ ಹೆಚ್ಚಾಗಿವೆ. ಆಧುನಿಕ ಯುಗದ ಪ್ರಭಾವದಿಂದ ಸಂಬಂಧಗಳು ದೂರವಾಗುತ್ತಿವೆ. ತಂತ್ರಜ್ಞಾನಗಳು ಮಕ್ಕಳನ್ನು ಸಂಪೂರ್ಣವಾಗಿ ಹಾಳು ಮಾಡುತ್ತಿವೆ. ಎಷ್ಟರ ಮಟ್ಟಿಗೆ ಜನರಿಗೆ ಆವರಿಸಿದೆ ಎಂದರೆ, ಪೋಷಕರಿಂದ ಮಿಗಲಾಗಿ ಮೊಬೈಲ…, ಟಿ.ವಿಗಳೇ ಆತ್ಮೀಯ ಎಂದು ಎನಿಸಿ ಬಿಟ್ಟಿದೆ.

ತಂತ್ರಜ್ಞಾನಗಳು ಎಷ್ಟು ಉಪಯೋಗವೋ ಅಷ್ಟೇ ಅಪಾಯವನ್ನು ತಂದೊಡ್ಡಿದೆ. ಇವುಗಳಿಂದ ಮಕ್ಕಳು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಪೋಷಕರನ್ನು ನೋಡಿ ಕೊಳ್ಳುವುದಿಲ್ಲ ಎಂಬ ಕಾರಣವಾಗಿ ಮಕ್ಕಳ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳುವ ಸಲುವಾಗಿ ಸರಕಾರವು ಕೆಲವೊಂದು ಕಾನೂನುಗಳನ್ನು ಜಾರಿಗೆ ತಂದಿದೆ. ಕರ್ನಾಟಕದಲ್ಲಿ ಹಿರಿಯ ನಾಗರಿಕರ ಸಂರಕ್ಷಣೆ
ಮತ್ತು ಪೋಷಣೆಗಾಗಿ ನ್ಯಾಯಾಲಯವೂ “ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆ 2007′ ಅನ್ನು ಜಾರಿಗೊಳಿಸಿದೆ.

ಇದರ ಪ್ರಕಾರ ಮಕ್ಕಳು ತಮ್ಮ ಪೋಷಕರನ್ನು ಮುಪ್ಪಿನ ವಯಸ್ಸಿನಲ್ಲಿ ನೋಡಿಕೊಳ್ಳದೇ ಹೋದಲ್ಲಿ ಕಾನೂನಿನ ಪ್ರಕಾರ ಅವರಿಗೆ ಶಿಕ್ಷಾರ್ಹ ಅಪರಾಧವಾಗುತ್ತದೆ. ಒಂದು ವೇಳೆ ತಮ್ಮ ಮಕ್ಕಳಿಂದ ಪೋಷಕರಿಗೆ ತೊಂದರೆಯಾದಲ್ಲಿ ರಾಷ್ಟ್ರೀಯ
ಹಿರಿಯ ನಾಗರಿಕರ ಸಹಾಯವಾಣಿಯನ್ನು ಕಾನೂನು ನೀಡಿದೆ.

*ಶ್ರೀನಿವಾಸ ಪ್ರಸಾದ್‌ಎಸ್‌.ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next