Advertisement
ಬೆಂಗಳೂರಿನಲ್ಲಿ ನೂರಾರು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರಾತ್ರಿಯಿಂದಲೇ ಬೀದಿಗಳಿದು ಚಿತ್ರ ಪ್ರದರ್ಶನ ಮಾಡದಂತೆ ಮನವಿ ಮಾಡುತ್ತಿದ್ದಾರೆ.
ಮಲ್ಲೇಶ್ವರದ ಮಂತ್ರಿ ಮಾಲ್, ವಿವೇಕನಗರದ ಬಾಲಾಜಿ ಚಿತ್ರ ಮಂದಿರ, ಓರಿಯನ್ ಮಾಲ್, ಗೋಪಾಲನ್ ಮಾಲ್‌ಗಳಲ್ಲಿ ಚಿತ್ರ ಇನ್ನೂ ಪ್ರದರ್ಶನ ಕಂಡಿಲ್ಲ .
Related Articles
ರಾಯಚೂರಿನ ಪದ್ಮಭಾಭ ಚಿತ್ರ ಮಂದಿರದಲ್ಲಿ ಟಿಕೆಟ್ ಖರೀದಿಸಿದ್ದ ಪ್ರೇಕ್ಷಕರು ನಿರಾಸೆ ಅನುಭವಿಸಬೇಕಾಯಿತು. ಪ್ರತಿಭಟನೆ ವ್ಯಕ್ತವಾದ ಹಿನ್ನಲೆಯಲ್ಲಿ ಚಿತ್ರ ಪ್ರದರ್ಶನ ರದ್ದು ಮಾಡಲಾಗಿದೆ.
Advertisement
ಬಳ್ಳಾರಿಯಲ್ಲಿ ಚಿತ್ರಮಂದಿರಕ್ಕೆ ನುಗ್ಗಿದ ಕಾರ್ಯಕರ್ತರುಬಳ್ಳಾರಿಯಲ್ಲಿ ಕಾಲಾ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿದ್ದ ಚಿತ್ರ ಮಂದಿರಕ್ಕೆ ಕನ್ನಡಪರ ಸಂಘಟನೆಗಳು ದಾಳಿ ನಡೆಸಿದ್ದು , ಚಿತ್ರ ಪ್ರದರ್ಶಿಸದಂತೆ ಎಚ್ಚರಿಕೆ ನೀಡಿದ್ದಾರೆ. ಮಂಗಳರೂರಿನಲ್ಲಿ ಟಿಕೆಟ್ ಸೋಲ್ಡ್ ಔಟ್
ಮಂಗಳೂರಿನ ಮಲ್ಟಿಪ್ಲೆಕ್ಸ್‌ಗಲ್ಲಿ 12 ರ ಬಳಿಕ ಚಿತ್ರ ಪ್ರದರ್ಶನ ನಡೆಯಲಿದ್ದು,ಈಗಾಗಲೇ ಟಿಕೇಟ್‌ಗಳು ಸೋಲ್ಡ್ ಔಟ್ ಆಗಿವೆ ಎಂದು ವರದಿಯಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕನ್ನಡ ಪರ ಸಂಘಟನೆಗಳು ಇದುವರೆಗೆ ಜಿಲ್ಲೆಯಲ್ಲಿ ಹೋರಾಟಕ್ಕಿಳಿದಿಲ್ಲ. ಶೋ ಅರ್ಧಕ್ಕೆ ಮೊಟಕು !
ಕೊಪ್ಪಳದ ಕಾರಟಗಿ ಲಕ್ಷ್ಮೀ ಚಿತ್ರಮಂದಿರ ರಲ್ಲಿ ಕಾಲಾ ಚಿತ್ರ ಪ್ರದರ್ಶನವಾಗುತ್ತಿದ್ದ ವೇಳೆ ಕನ್ನಡಪರ ಹೋರಾಟಗಾರರು ಚಿತ್ರ ಮಂದಿರಕ್ಕೆ ನುಗ್ಗಿದ್ದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಹಿನ್ನಲೆಯಲ್ಲಿ ಚಿತ್ರ ಪ್ರದರ್ಶನವನ್ನು ಅರ್ಧದಲ್ಲೇ ಮೊಟಕುಗೊಳಿಸಲಾಗಿದೆ. ಕೆಲ ಚಿತ್ರ ಮಂದಿರಗಳು ಚಿತ್ರ ಪ್ರದರ್ಶಿಸುವ ಸಾಧ್ಯತೆಗಳಿದ್ದು, ಸಂಘಟನೆಗಳು ಪ್ರತಿಭಟನೆ ನಡೆಸಿದರೆ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಗಳಿವೆ. ಪ್ರತಿಭಟನೆಯ ಕಾವು ಇರುವುದು ಮತ್ತು ಹಲವು ಸಂಘಟನೆಗಳು ಬೀದಿಗಿಳಿದಿರುವ ಹಿನ್ನಲೆಯಲ್ಲಿ ರಜನಿ ಅಭಿಮಾನಿಗಳು ಏನಾದರು ಸಂಭವಿಸಬಹುದು ಎಂಬ ಭಯದಲ್ಲಿ ಚಿತ್ರ ಮಂದಿರದತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಾವೇರಿ ವಿಷಯವಾಗಿ ರಜನಿಕಾಂತ್ ನೀಡಿದ ಹೇಳಿಕೆಯನ್ನು ಖಂಡಿಸಿ, ಕನ್ನಡಪರ ಸಂಘಟನೆಗಳು “ಕಾಲಾ’ ಬಿಡುಗಡೆಗೆ ತಡೆಯೊಡ್ಡಿದ್ದವು. ಚಿತ್ರ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ಅಡ್ಡಿಪಡಿಸುವ ಬೆದರಿಕೆ ಹಿನ್ನಲೆಯಲ್ಲಿ ಸೂಕ್ತ ರಕ್ಷಣೆ ನೀಡಲು ನಿರ್ದೇಶಿಸುವಂತೆ ಕೋರಿ ಚಿತ್ರ ನಿರ್ಮಾಣ ಸಂಸ್ಥೆಯು ರಿಟ್ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಪೀಠವು, ಚಿತ್ರ ಪ್ರದರ್ಶನದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಭದ್ರತೆ ನೀಡುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಿದೆ.