Advertisement

ಗೂಗಲ್‌ ಹುಡುಕಾಟ ಅಪಾಯ ತಂದೊಡ್ಡದಿರಲಿ

01:30 AM Mar 13, 2021 | Team Udayavani |

ನಕಲಿ ಯುಆರ್‌ಎಲ್‌, ವೆಬ್‌ಸೈಟ್‌, ಆ್ಯಪ್‌ಗ್ಳತ್ತ ಇರಲಿ ಸದಾ ಎಚ್ಚರ
ಮಾಹಿತಿಗಳ ಅಗತ್ಯವಿದ್ದಾಗ ನಾವು ನೇರವಾಗಿ ಗೂಗಲ್‌ ಮೊರೆ ಹೋಗುತ್ತೇವೆ. ಅದು ವಿಳಾಸಗಳಾಗಿರಲಿ ಅಥವಾ ವೆಬ್‌ಸೈಟ್‌, ಅರ್ಜಿಗಳು, ಚಲನಚಿತ್ರಗಳು ಸಹಿತ ಯಾವುದೇ ಮಾಹಿತಿ ಬೇಕಾದರೂ ಗೂಗಲ್‌ನ ಸರ್ಚ್‌ ಬಟನ್‌ ಪ್ರಸ್‌ ಮಾಡಿ ಆಯ್ತು. ಎಲ್ಲವೂ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಹೀಗಾಗಿ ಗೂಗಲ್‌ ನಮ್ಮ ಅತ್ಯುತ್ತಮ ಸ್ನೇಹಿತ. ಆದರೆ ಗೂಗಲ್‌ನ ಹುಡುಕಾಟ ಕೆಲವೊಮ್ಮೆ ಅಪಾಯವನ್ನು ತಂದಿಡುವ ಸಾಧ್ಯತೆ ಇದೆ. ಅಲ್ಲಿ ಪಡೆಯಲಾಗುವ ಮಾಹಿತಿಯನ್ನು ನಾವು ಸಮರ್ಪಕವಾಗಿ ಪರಿಶೀಲಿಸದೆ ಇರುವುದು ಇದಕ್ಕೆ ಕಾರಣ. ಗೂಗಲ್‌ ಹುಡುಕಾಟದ ವೇಳೆ ನೀವು ನಕಲಿ ವೆಬ್‌ಸೈಟ್‌ಗಳ ಮೇಲೆ ಕ್ಲಿಕ್‌ ಮಾಡುವ ಅಪಾಯ ಇದೆ. ಇದು ನಿಮ್ಮ ಹಾದಿಯನ್ನು ತಪ್ಪಿಸುವ ಸಾಧ್ಯತೆ ಇದೆ. ಗೂಗಲ್‌ನಲ್ಲಿ ಲಭ್ಯವಿರುವ ಎಲ್ಲ ವಿಷಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಕಷ್ಟ. ಏಕೆಂದರೆ ಗೂಗಲ್‌ ಹುಡುಕಾಟವು ಕೇವಲ ಆನ್‌ಲೈನ್‌ ಪ್ಲಾಟ್‌ಫಾರ್ಮ್ ಆಗಿದ್ದು, ನಿಮಗೆ ಅಗತ್ಯವಿರುವ ಮಾಹಿತಿಯನ್ನು ನೀಡುವ ವೆಬ್‌ಸೈಟ್‌ಗಳನ್ನು ನೀವು ಕಂಡುಕೊಳ್ಳುತ್ತೀರಿ. ವಿಷಯಕ್ಕಿಂತ ಹೆಚ್ಚಾಗಿ ಗೂಗಲ್‌ ಹುಡುಕಾಟದಲ್ಲಿ ನೀವು ಯಾವ ಫ‌ಲಿತಾಂಶ(ಸರ್ಚ್‌ ರಿಸಲ್ಟ್)ಗಳನ್ನು ಪಡೆಯುತ್ತೀರಿ ಎಂಬುದರ ಹಿಂದೆ ಇವು ದೊಡ್ಡ ಪಾತ್ರವನ್ನು ವಹಿಸುತ್ತವೆ. ಹೀಗಾಗಿ ಗೂಗಲ್‌ನಲ್ಲಿ ಹುಡುಕುವ ನೀವು ಈ ಎಂಟು ವಿಷಯಗಳಲ್ಲಿ ಬಹಳ ಎಚ್ಚರಿಕೆಯಿಂದಿರಬೇಕಾಗಿದೆ.

Advertisement

ತೂಕ ಇಳಿಸುವ ಮಾಹಿತಿಗಳನ್ನು ಕುರುಡಾಗಿ ನಂಬಬೇಡಿ
ಪ್ರತಿಯೊಂದು ಮಾನವ ದೇಹವು ವಿಶಿಷ್ಟವಾಗಿದೆ ಮತ್ತು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ತೂಕ ನಷ್ಟ ಅಥವಾ ಪೌಷ್ಟಿಕಾಂಶದ ಕುರಿತಂತೆ ಗೂಗಲ್‌ ಹುಡುಕಾಟದ ವೇಳೆ ಸಿಕ್ಕಿದ ಮಾಹಿತಿ ಅಥವಾ ಸಲಹೆಗಳನ್ನು ಪಾಲಿಸಬೇಡಿ. ನಿಮ್ಮ ಆಹಾರ ಕ್ರಮವನ್ನು ಬದಲಾಯಿಸಲು ನೀವು ಬಯಸಿದರೆ ಆಹಾರ ತಜ್ಞರನ್ನು ಭೇಟಿ ಮಾಡಿ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ವೈದ್ಯರಿಂದ ಸಲಹೆ ತೆಗೆದುಕೊಂಡು ಅನಂತರ ಮುಂದುವರಿಯಿರಿ.

ವೈಯಕ್ತಿಕ ಹಣಕಾಸು (ಪರ್ಸನಲ್‌ ಫೈನಾನ್ಸ್‌), ಸ್ಟಾಕ್‌ ಮಾರುಕಟ್ಟೆ ಮಾಹಿತಿಗಳು
ಆರೋಗ್ಯದಂತೆ ವೈಯಕ್ತಿಕ ಹಣಕಾಸು ಕೂಡ ಬಹಳ ಮುಖ್ಯವಾಗಿದೆ. ಎಲ್ಲರನ್ನೂ ಶ್ರೀಮಂತರನ್ನಾಗಿ ಮಾಡುವ ಒಂದು ಹೂಡಿಕೆ ಯೋಜನೆ ಎಂದಿಗೂ ಇರಲಾರದು ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಆದ್ದರಿಂದ ಹೂಡಿಕೆ ಮಾಡುವಂಥ ಸಂದರ್ಭ ಬಂದಾಗ ಅಥವಾ ಯೋಚಿಸುತ್ತಿದ್ದರೆ ಗೂಗಲ್‌ ಮೊರೆ ಹೋಗುವುದರ ಬದಲು ಮಾರುಕಟ್ಟೆ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳುವುದೇ ಉತ್ತಮ.

ಕಸ್ಟಮರ್ ಕೇರ್‌ ಸಂಪರ್ಕ ಸಂಖ್ಯೆಗಳು
ಸದ್ಯ ಅತೀ ಹೆಚ್ಚು ದುರ್ಬಳಕೆಯಾಗುತ್ತಿರುವ ಕ್ಷೇತ್ರ ಇದು. ವಂಚಕರು ಸಂಸ್ಥೆಗಳ ಹೆಸರನ್ನು ನಕಲಿಯಾಗಿ ರಚಿಸಿ ಗ್ರಾಹಕರ ಸೇವಾ ಕೇಂದ್ರದ ದೂರವಾಣಿ ಪೋಸ್ಟ್‌ ಮಾಡಿರುತ್ತಾರೆ. ಗೂಗಲ್‌ನಲ್ಲಿ ಹುಡುಕುವ ಧಾವಂತದಲ್ಲಿ ಜನರು ಅವುಗಳನ್ನು ಮೂಲ ಗ್ರಾಹಕ ಸಂಖ್ಯೆಗಳೆಂದೇ ನಂಬುತ್ತಾರೆ. ಹೆಚ್ಚಿನ ತಾಣಗಳು ನಕಲಿ ಸಂಪರ್ಕ ಸಂಖ್ಯೆಯನ್ನೇ ಹೊಂದಿದ್ದು, ನೀವು ಕರೆ ಮಾಡುವ ಯಾವುದೇ ಸಂಪರ್ಕ ಸಂಖ್ಯೆಯನ್ನು ಸಹ ಹೊಂದಿರುವುದಿಲ್ಲ. ಇಂಥ ಸಂದರ್ಭ ಮೈಮರೆಯಬಾರದು.

ಯುಆರ್‌ಎಲ್‌ಗ‌ಳನ್ನು ಎರಡೆರಡು ಬಾರಿ ಪರಿಶೀಲಿಸಿ
ಇದು ಪ್ರತೀ ನಿತ್ಯ ಪಾಲಿಸಲೇಬೇಕಾದ ನಿಯಮವಾಗಿದೆ. ನೀವು ಗೂಗಲ್‌ನಲ್ಲಿ ಆನ್‌ಲೈನ್‌ ಬ್ಯಾಂಕಿಂಗ್‌ ವೆಬ್‌ಸೈಟ್‌ಗಳನ್ನು ಬಳಸುವುದಾದರೆ ಯುನಿಫಾರ್ಮ್ ರಿಸೋರ್ಸ್‌ ಲೊಕೇಟರ್‌(URL) ಅನ್ನು ಎರಡೆರಡು ಬಾರಿ ಪರಿಶೀಲಿಸಬೇಕು. ನಿಖರವಾದ ಅಧಿಕೃತ ಯುಆರ್‌ಎಲ್‌ ವಿಳಾಸ ನಿಮಗೆ ತಿಳಿದಿಲ್ಲದಿದ್ದರೆ ಬ್ಯಾಂಕ್‌ನ ಆನ್‌ಲೈನ್‌ ಬ್ಯಾಂಕಿಂಗ್‌ ವೆಬ್‌ಸೈಟ್‌ ಅನ್ನು ಹುಡುಕದೇ ಇರುವುದು ಹೆಚ್ಚು ಸೂಕ್ತ. ನಿಮ್ಮ ಲಾಗಿನ್‌ ವಿವರಗಳನ್ನು ಪಡೆಯಲು ಸ್ಕ್ಯಾಮರ್‌ಗಳು ನಕಲಿ ಆನ್‌ಲೈನ್‌ ಬ್ಯಾಂಕಿಂಗ್‌ ವೆಬ್‌ಸೈಟ್‌ಗಳನ್ನು ರಚಿಸಿಕೊಳ್ಳುತ್ತವೆ ಎಂಬುದು ಗಮನದಲ್ಲಿರಬೇಕು. ಹೀಗಾಗಿ ಈ ಅಪಾಯದಿಂದ ಪಾರಾಗಲು ಬ್ಯಾಂಕ್‌ನ ಆನ್‌ಲೈನ್‌ ಬ್ಯಾಂಕಿಂಗ್‌ ಪೋರ್ಟಲ್‌ನ ಅಧಿಕೃತ ಖೀRಔ ಅನ್ನೇ ತಿಳಿದು ನಮೂದಿಸಿ.

Advertisement

ಆ್ಯಪ್ಸ್‌, ಸಾಫ್ಟ್ವೇರ್‌ಗಳನ್ನು ಡೌನ್‌ಲೋಡ್‌ ಮಾಡುವಾಗ ಎಚ್ಚರ
ಗೂಗಲ್‌ನಲ್ಲಿ ಆ್ಯಪ್ಲಿಕೇಶನ್‌ಗಳು, ಸಾಫ್ಟ್ವೇರ್‌ ಅಥವಾ ಇತರ ಫೈಲ್‌ಗ‌ಳನ್ನು ಹುಡುಕುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಆ್ಯಂಡ್ರಾಯ್ಡಗಾಗಿ ಗೂಗಲ್‌ ಪ್ಲೇ ಸ್ಟೋರ್‌ ಮತ್ತು ಐಫೋನ್‌ಗಳಿಗಾಗಿ ಆ್ಯಪ್‌ ಸ್ಟೋರ್‌ನಂತಹ ಅಧಿಕೃತ ಆ್ಯಪ್ಲಿಕೇಶನ್‌ ಸ್ಟೋರ್‌ಗಳಲ್ಲಿ ಮಾತ್ರ ಆ್ಯಪ್ಸ್‌ ಅನ್ನು ಹುಡುಕಿ. ಯಾಕೆಂದರೆ ಗೂಗಲ್‌ನಲ್ಲಿ ನಕಲಿ ಆ್ಯಪ್‌ಗ್ಳು ಮತ್ತು ಸಾಫ್ಟ್ವೇರ್‌ಗಳನ್ನು ಸ್ಕ್ಯಾಮರ್ಸ್‌ ಅಪ್‌ಲೋಡ್‌ ಮಾಡಿರುತ್ತಾರೆ. ಇವುಗಳ ಮೂಲಕ ನಿಮ್ಮ ಗೌಪ್ಯ ಮಾಹಿತಿಗಳನ್ನು ಕದಿಯುತ್ತಾರೆ.

ಔಷಧಗಳನ್ನು ಹುಡುಕುವ ಬದಲು ವೈದ್ಯರನ್ನು ಸಂಪರ್ಕಿಸಿ
ಅನಾರೋಗ್ಯದಿಂದ ಬಳಲುತ್ತಿದ್ದರೆ ವೈದ್ಯರ ಬಳಿಗೆ ಹೋಗಿ. ಅನಾರೋಗ್ಯವಾಗಿದ್ದರೆ ಅದನ್ನು ಹೇಳಲು ಗೂಗಲ್‌ ಸರಿಯಾದ ಸ್ಥಳವಲ್ಲ. ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ ರೋಗದ ಬಗ್ಗೆ ತಿಳಿಯಲು ಗೂಗಲ್‌ನಲ್ಲಿ ಹುಡುಕಾಡುವುದರ ಬದಲು ನೇರವಾಗಿ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಅಲ್ಲದೆ ಗೂಗಲ್‌ನಲ್ಲಿ ಹೇಳಲಾದ ಔಷಧಗಳನ್ನು ಖರೀದಿಸುವುದು ಅಪಾಯಕಾರಿ. ಆರೋಗ್ಯದಂಥ ವಿಚಾರದಲ್ಲಿ ಎಚ್ಚರ ವಹಿಸಿದಷ್ಟೂ ಕಡಿಮೆಯೇ.

ಸರಕಾರಿ ವೆಬ್‌ಸೈಟ್‌ಗಳನ್ನು ಯಾವಾಗಲೂ ಪರಿಶೀಲಿಸಿ
ಬ್ಯಾಂಕಿಂಗ್‌ ವೆಬ್‌ಸೈಟ್‌ಗಳಂತೆ, ಸರಕಾರಿ ವೆಬ್‌ಸೈಟ್‌ಗಳಾದ ಪಾಲಿಕೆಗಳ ತೆರಿಗೆ, ಬಿಲ್‌ಗ‌ಳು ಸಹಿತ ಇತ್ಯಾದಿಗಳು
ಹ್ಯಾಕರ್ಸ್‌ಗಳ ಪ್ರಮುಖ “ಟಾರ್ಗೆಟೆಡ್‌ ಏರಿಯಾ’ಗಳಾ ಗಿವೆ. ಕೆಲವು ಸಂದರ್ಭ ಯಾವ ವೆಬ್‌ಸೈಟ್‌ ಅಸಲಿ ಎಂದು ಗುರುತಿಸುವುದೇ ಕಷ್ಟವಾದ್ದರಿಂದ ಯಾವುದೇ ನಿರ್ದಿಷ್ಟ ಸರಕಾರಿ ವೆಬ್‌ಸೈಟ್‌ ಅನ್ನು ಗೂಗಲ್‌ನಲ್ಲಿ ಹುಡುಕುವ ಬದಲು ಯುಆರ್‌ಎಲ್‌ ವಿಳಾಸ ತಿಳಿದುಕೊಂಡು ನೇರವಾಗಿ ಭೇಟಿ ನೀಡಲು ಮುಂದಾಗಿ.

ಇ-ಕಾಮರ್ಸ್‌ ವೆಬ್‌ಸೈಟ್‌ಗಳ ಕೂಪನ್‌ ಮತ್ತು ಆಫ‌ರ್‌ಗಳು
ಇ-ಕಾಮರ್ಸ್‌ ವೆಬ್‌ಸೈಟ್‌ಗಳ ಕೊಡುಗೆಗಳೆಂದು ಕರೆಯಲ್ಪಡುವ ನಕಲಿ ವೆಬ್‌ ಪುಟಗಳು ಗೂಗಲ್‌ನಲ್ಲಿ ರಾಶಿ ಬಿದ್ದುಕೊಂಡಿವೆ. ಇದು ಜನರನ್ನು ಮೋಸದ ಜಾಲಕ್ಕೆ ಸೆಳೆಯುವ ಮತ್ತೂಂದು ದೊಡ್ಡ ಹಗರಣವಾಗಿದೆ. ಇದು ಜನರ ಆನ್‌ಲೈನ್‌ ಬ್ಯಾಂಕಿಂಗ್‌ ಲಾಗಿನ್‌ ವಿವರಗಳನ್ನು ಕದಿಯಲು ಯತ್ನಿಸುತ್ತವೆ. ಹಬ್ಬಗಳಂಥ ವಿಶೇಷ ಸಂದರ್ಭದಲ್ಲಿ ಇಂಥ ಆಫ‌ರ್‌ಗಳ ಹೆಸರಿನ ಕೆಲವು ತಾತ್ಕಾಲಿಕವಾದ ಜಾಲತಾಣಗಳು ತಲೆ ಎತ್ತುವುದನ್ನು ನೋಡಿದ್ದೀರಿ. ಇಂಥವುಗಳಿಗೆ ಮರುಳಾಗಬೇಡಿ.

Advertisement

Udayavani is now on Telegram. Click here to join our channel and stay updated with the latest news.

Next