Advertisement

ಸಹಕಾರ ಸಂಘದಲ್ಲಿ ರಾಜಕೀಯ ಬೆರಸಬೇಡಿ: ಹರೀಶ್‌ಕುಮಾರ್‌

01:05 PM Feb 17, 2021 | Team Udayavani |

ಕನಕಪುರ: ಸಹಕಾರ ಸಂಘದಲ್ಲಿ ಯಾವುದೇ ರಾಜಕೀಯ ತರದೆ ಗ್ರಾಮದ ಎಲ್ಲ ರೈತರು ಒಮ್ಮತದಿಂದ ಸಂಘ ರಚನೆಗೆ ಸಹಕರಿಸಬೇಕು ಎಂದು ಬಮೂಲ್‌ ನಿರ್ದೇಶಕ ಹರೀಶ್‌ ಕುಮಾರ್‌ ತಿಳಿಸಿದರು. ತಾಲೂಕಿನ ಹಾರೋಹಳ್ಳಿ ಹೋಬಳಿ ಕರಿಕಲ್ಲುದೊಡ್ಡಿಯಲ್ಲಿ ನೂತನ ಹಾಲು ಉತ್ಪಾದಕ ಸಹಕಾರ ಸಂಘ ರಚನೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಸಹಕಾರ ಸಂಘಗಳಲ್ಲಿ ಪ್ರಸ್ತುತ ರಾಜಕೀಯ ಬೆರೆತು, ಸದಸ್ಯರಲ್ಲಿ ವೈಮನಸ್ಸು ಉಂಟಾಗಿ ಸಂಘದ ವಾತಾವರಣಹದಗೆಡುತ್ತಿದೆ. ಇದರಿಂದ ಸಂಘದ ಅಭಿವೃದ್ಧಿಗೆಹಿನ್ನಡೆಯಾಗುತ್ತದೆ. ಸಂಘದಲ್ಲಿ ರಾಜಕೀಯ ಬೆರೆಸದೆಒಮ್ಮತದಿಂದ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. ಸಂಘದ ನೋಂದಣಿಗೆ ಗ್ರಾಮದ 13 ಸದಸ್ಯರನ್ನುಗ್ರಾಮಸ್ಥರೇ ಆಯ್ಕೆ ಮಾಡಬೇಕು. ಸಂಘ ರಚನೆ ಬಳಿಕಒಮ್ಮತದಿಂದ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳುವಅವಕಾಶವಿದೆ. ಗ್ರಾಮಸ್ಥರಲ್ಲಿ ಹೊಂದಾಣಿಕೆ ಕೊರತೆ ಇದ್ದರೆ, ಚುನಾವಣೆ ಮೂಲಕ ನಿರ್ದೇಶಕರನ್ನು ಅಧಿಕಾರಿಗಳು ಆಯ್ಕೆ ಮಾಡಲಿದ್ದಾರೆ ಎಂದರು.

ಪ್ರತಿ ಗ್ರಾಮದಲ್ಲೂ ಸಂಘ ರಚನೆ: ಗ್ರಾಮೀಣ ಭಾಗಗಳಲ್ಲಿ ಮಹಿಳೆಯರೇ ಹೆಚ್ಚಾಗಿ ಹೈನೋದ್ಯಮದಲ್ಲಿತೊಡಗಿದ್ದಾರೆ. ಸಂಘಗಳಿಗೆ ಹಾಲು ಪೂರೈಸಲು ಒಂದುಗ್ರಾಮದಿಂದ ಮತ್ತೂಂದು ಗ್ರಾಮಕ್ಕೆ ಹೋಗಬೇಕಾದಅನಿವಾರ್ಯತೆಯಿದೆ. ಹೀಗಾಗಿ ಪ್ರತಿ ಗ್ರಾಮದಲ್ಲಿಹಾಲು ಉತ್ಪಾದಕರ ಸಹಕಾರ ಸಂಘ ರಚಿಸಿಮಹಿಳೆಯರಿಗೆ ಮತ್ತು ನಿರುದ್ಯೋಗಿಗಳಿಗೆ ಹೆಚ್ಚಿನಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.

13 ಪ್ರವರ್ತಕರ ಆಯ್ಕೆ: ಸಂಘದ ನೋಂದಣಾ ಚಟು ವಟಿಕೆಗಳಿಗೆ ಗ್ರಾಮದ ಸತೀಶ್‌ರಾವ್‌, ಮುತ್ತುರಾಜ್‌, ರವಿ, ಸತೀಶ್‌, ಜಗದೀಶ್‌, ಶಿವಮ್ಮ, ಗೌರಮ್ಮ, ಶ್ರೀನಿವಾಸ್‌, ಸುಬ್ಬಣ್ಣ, ಗಣೇಶ್‌, ವೈರಮುಡಿ, ರಾಮಕೃಷ್ಣ, ಬಾಳೆ ಗೌಡ ಸೇರಿದಂತೆ 13 ಪ್ರವರ್ತಕರನ್ನು ಆಯ್ಕೆ ಮಾಡಲಾಯಿತು. ಜಿಪಂ ಸದಸ್ಯ ಎಂ.ಎನ್‌ ನಾಗ ರಾಜು, ಸಾದೇನಹಳ್ಳಿ ಈಶ್ವರ್‌, ಒಕ್ಕೂಟದ ಡಿ.ಎಂ.ಪ್ರಕಾಶ್‌, ವಿಸ್ತರಣಾಧಿಕಾರಿಗಳಾದ ಪವ್ರಿàಣ್‌,ಅಲ್ಲಾ ಸಾಬ್‌, ಮರಳವಾಡಿ ಗ್ರಾಪಂ ಅಧ್ಯಕ್ಷ ಚಲುವರಾಜು, ಕಲ್ಲನಕುಪ್ಪೆ ಹಾಲು ಉತ್ಪಾದಕ ಸಂಘದ ಅಧ್ಯಕ್ಷಚಂದ್ರು, ಗ್ರಾಪಂ ಸದಸ್ಯ ಶಿವಶಂಕರ್‌, ಯಲಚವಾಡಿಚಂದ್ರು, ಕಲ್ಲನಕುಪ್ಪೆ ಕುಮಾರ್‌, ದೇವರಾಜು, ಕಾರ್ಯದರ್ಶಿ ಚಂದ್ರು, ನಿಂಗೇಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next