Advertisement

ಆಡಂಬರ ಜೀವನಕ್ಕೆ ಪ್ರಕೃತಿ ಬಲಿಯಾಗಿಸಬೇಡಿ; ಪ್ರೊ|ಬಿ.ಆರ್‌.ಪೊಲೀಸ್‌ ಪಾಟೀಲ

06:23 PM Dec 24, 2022 | Team Udayavani |

ಬಾಗಲಕೋಟೆ: ಮನುಷ್ಯ ಆಡಂಬರದ ಜೀವನ ಇಂದಿನ ಕಂಪ್ಯೂಟರ್‌ ಯುಗಕ್ಕೆ ಮಾರು ಹೋಗಿ ಪ್ರಕೃತಿಗೆ ವಿರುದ್ಧವಾದ ಕಾರ್ಯ ಮಾಡುತ್ತಿದ್ದಾನೆ ಎಂದು ಜಾನಪದ ವಿದ್ವಾಂಸ ಪ್ರೊ| ಬಿ.ಆರ್‌.ಪೊಲೀಸ್‌ ಪಾಟೀಲ ಹೇಳಿದರು.

Advertisement

ತೋಟಗಾರಿಕೆ ವಿವಿಯ ಸಭಾಂಗಣದಲ್ಲಿ 13ನೇ ಅಂತರ್‌ ಮಹಾವಿದ್ಯಾಲಯಗಳ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಕೃತಿಗೆ ವಿರುದ್ಧವಾಗಿ ನಡೆಯುತ್ತಿದ್ದೇವೆ ಎಂಬುದಕ್ಕೆ ರೈತರು ಕೊರೆಸುತ್ತಿರುವ ಕೊಳವೆ ಬಾವಿ ಆಳ ಇಂದು500ರಿಂದ ಸಾವಿರ ಅಡಿ ವರೆಗೆ ಅಗೆದಾಗ ನೀರು ಬರುತ ¤ದೆ. ಇದನ್ನು ಗಮನಿಸಿದಾಗ ನಾವು ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳುವುದಲ್ಲದೇ ಮುಂದಿನ ನಮ್ಮ ಪೀಳಿಗೆಯ ನೀರನ್ನು ಕೂಡಾ
ಬಳಸಿಕೊಳ್ಳುತ್ತಿದ್ದೇವೆ ಎಂದರು.

ಇಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದ್ದು, ಬಾವಿ ಪ್ರಜೆಗಳಾಗುತ್ತಿರುವ ವಿದ್ಯಾರ್ಥಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದ ವಿದ್ಯೆ ಪಡೆಯುವುದರ ಜತೆಗೆ ಸಮಾಜಕ್ಕೊಂದು ಸುಧಾರಣೆ ಕಾಣಿಕೆ ನೀಡಲು ಮುಂದಾಗಬೇಕು. ಕೇವಲ ವಿದ್ಯೆ ಕಲಿತರೆ ಸಾಲದು, ಜತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಮನೋಭಾವನೆ ಹೊಂದಬೇಕು ಎಂದರು. ಕ್ರೀಡೆ ಮತ್ತು ಸಂಸ್ಕೃತಿ ಶಿಕ್ಷಣದ ಅಂಗವಾಗಿದ್ದು, ಶಿಕ್ಷಣವು ಅಪೂರ್ಣಗೊಂಡಾಗ ಅಂದೇ ನಿಮ್ಮ ಕ್ರೀಡಾ ಶಕ್ತಿ ಮತ್ತು ಸಂಸ್ಕೃತ ಆಸಕ್ತಿ ಕಳೆದು ಹೋಗುತ್ತದೆ ಎಂಬುದನ್ನು ಅರಿಯಬೇಕು ಎಂದು ಹೇಳಿದರು.

ಕಲೆಗಳ ಉದ್ದೇಶ ಜನರಂಜನೆ, ಜನಶಿಕ್ಷಣ, ಜಲ ಕಲ್ಯಾಣ ಈ ಮೂರನ್ನು ಕಲ್ಯಾಣ ಮಾಡದ ಹೊರತು ನಮ್ಮ ನಿಮ್ಮ ಕಲ್ಯಾಣವಾಗದು ಎಂಬುದನ್ನು ಅರಿಯಬೇಕು. ಪ್ರತಿಯೊಬ್ಬರೂ ಆದ್ಯಾತ್ಮಿಕ ಚಿಂತನೆಯತ್ತ ಒಲವು ನೀಡಿ ಜೀವನವನ್ನು ಪರಿಪೂರ್ಣ ಮಾಡಿಕೊಳ್ಳಬೇಕು. ಇಂದು ಪಾಲಕರು ತಮ್ಮ ಮಕ್ಕಳಿಗೆ ಸುಸಂಸ್ಕೃತರನ್ನಾಗಿ ಮಾಡುವಲ್ಲಿ ವಿಫಲರಾಗಿದ್ದು, ಕೇವಲ ಖಾಸಗಿಯ ದುಬಾರಿ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಸೇರ್ಪಡೆ ಮಾಡಿಸಿದ್ದನ್ನು ಹೊರತುಪಡಿಸಿದರೆ ಅವರ ಶಿಕ್ಷಣ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಖಾಳಜಿ ತೋರಲಾಗುತ್ತಿರುವುದು ಕಂಡುಬರುತ್ತಿದೆ. ಇದು ಅಪಾಯದ ಮುನ್ಸೂಚನೆಯಾಗಿದ್ದು, ಪಾಲಕರು
ಜಾಗೃತರಾಗಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತೋವಿವಿಯ ಡೀನ್‌ ಡಾ|ರಾಮಚಂದ್ರ ನಾಯಕ ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ತೋರಬೇಕಾಗಿದ್ದು, ಅಂತಹ ವಿದ್ಯಾರ್ಥಿಗಳಲ್ಲಡಗಿದ ಪ್ರತಿಭೆ ಅನಾವರಣಗೊಳಿಸಲು ತೋವಿವಿಯ ಇಂತಹ ಕಲಾ ಸಂಗಮದಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ತಮ್ಮ ಒಳಗೆ ಹುದುಗಿದ್ದ ಕ್ರೀಡೆ, ಕಲೆ, ಸಾಂಸ್ಕೃತಿಯ ಪ್ರತಿಭೆಯನ್ನು ಅನಾವರಣಗೊಳಿಸಬಹುದಾಗಿದೆ ಎಂದು ತಿಳಿಸಿದರು.ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಸ್ಪರ್ಧಿಸುವುದು ಮುಖ್ಯವಾಗಿದೆ ಎಂಬುದನ್ನು ಅರಿಯಬೇಕು ಎಂದರು.

Advertisement

ಪ್ರಾರಂಭದಲ್ಲಿ ಪ್ರೊ| ಬಿ.ಆರ್‌. ಪೊಲೀಸ್‌ ಪಾಟೀಲ ಪರಿಸರ ಪ್ರೇಮದ ಗೀತೆಯನ್ನು ಹಾಡಿಸುತ್ತಾ ಮಕ್ಕಳನ್ನು ಮನರಂಜಿಸಿದರು.ತೋವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯೆ ಬಿ.ಸುಮಿತ್ರಾದೇವಿ, ಕುಲಪತಿಡಾ|ಕೆ.ಎಂ.ಇಂದಿರೇಶ, ಪ್ರಾಧ್ಯಾಪಕ ಡಾ| ವೆಂಕಟೇಶಲು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಮೆರವಣಿಗೆ: ಅಂತರ್‌ಮಹಾ ವಿದ್ಯಾಲಯ ಗಳ ಯುಜನೋತ್ಸವ ಅಂಗವಾಗಿ ಕಾಳಿದಾಸ ಸರ್ಕಲ್‌ನಿಂದ ಬಿ.ವಿ.ವಿ.ಎಸ್‌. ಮ್ಯಾನೇಜಮೆಂಟ್‌ ಮಹಾವಿದ್ಯಾಲಯದವರೆಗೆ ಸಾಂಸ್ಕೃತಿಕ ಮೆರವಣಿಗೆ ಜರುಗಿತು. ಒಂಬತ್ತು ಕಾಲೇಜುಗಳ ಸ್ಪರ್ಧಾರ್ಥಿಗಳ ಕಲಾ ತಂಡಗಳು ಸಾಂಸ್ಕೃತಿಕ ಮೆರವಣಿಗೆಯಲ್ಲಿ ಭಾಗವಹಿಸಿ ಜನರ ಕಣ್ಮನ ಸೆಳೆದವು.

ಇಂದು ಆತ್ಮಾವಲೋಕನ ಮಾಡಿಕೊಳ್ಳ ಬೇಕಾಗಿದ್ದು, ಬಾವಿ ಪ್ರಜೆಗಳಾಗುತ್ತಿರುವ ವಿದ್ಯಾರ್ಥಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದ ವಿದ್ಯೆ ಪಡೆಯುವದರ ಜೊತೆಗೆ ಸಮಾಜಕ್ಕೊಂದು ಸುಧಾರಣೆಕಾಣಿಕೆ ನೀಡಲು ಮುಂದಾಗಬೇಕು.
ಪ್ರೊ.ಬಿ.ಆರ್‌. ಪೊಲೀಸ್‌ಪಾಟೀಲ,
ಜಾನಪದ ವಿದ್ವಾಂಸರು

Advertisement

Udayavani is now on Telegram. Click here to join our channel and stay updated with the latest news.

Next