ಬ್ಯಾಡಗಿ: ರೈತರ ಬೆವರಿನ ಶ್ರಮ ವ್ಯರ್ಥವಾಗಲು ಬಿಡುವುದಿಲ್ಲ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಯೋಗಿಕ ಅನುಭವ ಮತ್ತು ವಿಷಯಾಧಾರಿತ ತೀರ್ಮಾನ ಸರ್ಕಾರಗಳು ಕೈಗೊಳ್ಳಲಿವೆ. ಯಾವುದೇ ಕಾರಣಕ್ಕೂ ರಾಜಕೀಯ ಪ್ರೇರಿತ ಹೋರಾಟ ಮತ್ತು ಅಭಿಪ್ರಾಯಗಳಿಗೆ ಕಿವಿಗೊಡದಂತೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಪಟ್ಟಣದ ತಾಪಂ ಆವರಣದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಪಂಪ್‌ಸೆಟ್ ವಿತರಿಸಿ ಅವರು ಮಾತನಾಡಿದರು.
ಕೃಷಿ ಕ್ಷೇತ್ರದ ಆದಾಯವನ್ನೇ ನಂಬಿರುವ ಕೇಂದ್ರ-ರಾಜ್ಯ ಸರ್ಕಾರಗಳು ಅವರಿಗೆ ಮೋಸವಾಗಲು ಬಿಡುವುದಿಲ್ಲ ಸಾಲ ಮನ್ನಾ ಸೇರಿ ಇತರೆ ಉಚಿತ ಕೊಡುಗೆ ನೀಡುವುದರಿಂದ ಕೃಷಿ ಕ್ಷೇತ್ರ ಸ್ವಾವಲಂಬಿಯಾಗಲು ಸಾಧ್ಯವಿಲ್ಲ. ಕೃಷಿ ಅಭಿವೃದ್ಧಿಗೆ ಬೇಕಾದ ವಿದ್ಯುತ್, ನೀರಾವರಿ, ಸಬ್ಸಿಡಿ ದರದಲ್ಲಿ ಗುಣಮಟ್ಟದ ಬೀಜ-ಗೊಬ್ಬರ ಸೇರಿದಂತೆ ಹವಾಮಾನ ವೈಪರೀತ್ಯದ ಬೆಳೆಹಾನಿ ಸಂದರ್ಭಗಳಲ್ಲಿ ಆತನ ಸಹಾಯಕ್ಕೆ ಬರುವ ಬೆಳೆವಿಮೆ ಇತರೆ ಸೌಲಭ್ಯ ಅವಶ್ಯವಿದ್ದು ಸರ್ಕಾರಗಳು ಅವೆಲ್ಲವುಗಳನ್ನು ಒದಗಿಸುವ ನಿಟ್ಟಿನಲ್ಲಿ ನಿರಂತರ ಶ್ರಮಿಸುತ್ತಿವೆ ಎಂದರು.
ಪುರಸಭೆ ಅಧ್ಯಕ್ಷೆ ಸರೋಜಾ ಮಾತನಾಡಿ, ಕಳೆದ 10 ವರ್ಷಗಳಿಂದ ದೇಶದಲ್ಲಿ ಅ ಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಮೇಲೆ ಕೈಗೊಂಡ ಅಭಿವೃದ್ಧಿ ಪರ ನಿರ್ಧಾರಗಳಿಂದ ಕೃಷಿ ಕ್ಷೇತ್ರದಲ್ಲಿ ಕ್ರಮೇಣ ಪರಿವರ್ತನೆಗಳು ಕಾಣುತ್ತಿವೆ. ರೈತರ ಸಮಸ್ಯೆ ಅರಿತಿರುವ ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರ ರೈತರ ಅಭಿವೃದ್ಧಿಗೆ ಹಲವು ಯೋಜನೆ ಜಾರಿಗೆ ತಂದಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಸಲಹೆ ನೀಡಿದರು.
ಈ ವೇಳೆ ಟಿಇಒ ಎನ್. ತಿಮ್ಮಾರೆಡ್ಡಿ, ಎಸ್ಟಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶಂಕರ ಮರಡೂರಮಠ, ಶಿವಬಸಪ್ಪ ಕುಳೇನೂರ, ಸುರೇಶ ಉದ್ಯೋಗಣ್ಣನವರ, ವೀರೇಂದ್ರ ಶೆಟ್ಟರ್, ಶಿವಾನಂದ ಯಮನಕ್ಕನವರ, ಶಿವರಾಜ ಹರಮಗಟ್ಟಿ, ರಮೇಶ ಅರಬಗೊಂಡ, ಚಂದ್ರಣ್ಣ ಬಿಳಕಿ ಸೇರಿದಂತೆ ಇತರರಿದ್ದರು.