Advertisement

ಎಸ್ಸೆಮ್ಮೆಸ್‌ ಲಿಂಕ್‌ಗೆ ಮರುಳಾಗಬೇಡಿ!

11:34 PM Aug 13, 2021 | Team Udayavani |

ಗ್ರಾಹಕರನ್ನು ಮರುಳು ಮಾಡಿ, ವೈಯಕ್ತಿಕ ಮಾಹಿತಿ ಪಡೆದುಕೊಂಡು ಬ್ಯಾಂಕ್‌ ಖಾತೆ ವಿವರ, ಪಾಸ್‌ವರ್ಡ್‌ ಪಡೆದು ವಂಚಿಸುವವರ ಜಾಲ ಹೆಚ್ಚಾಗಿದೆ. ಈ ಕುರಿತು ದೇಶದ ಸೈಬರ್‌ ಭದ್ರತಾ ಸಂಸ್ಥೆ, ಇಂಡಿಯನ್‌ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌ ಹೊಸ ಎಚ್ಚರಿಕೆ ನೀಡಿದೆ. “ಎನ್‌ಜಿಆರ್‌ಒಕೆ’ ಎಂಬ ಪ್ಲಾಟ್‌ಫಾರಂ ಬಗ್ಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಿದೆ.

Advertisement

ಹೇಗೆ ವಂಚಿಸುತ್ತಾರೆ?

  • ನೀವು ಹೊಂದಿರುವ ಬ್ಯಾಂಕ್‌ ಖಾತೆಯಿಂದಲೇ ಕೆವೈಸಿ ಅಪ್‌ಡೇಟ್‌ ಮಾಡಲು ಸೂಚನೆ ಇರುವ ಎಸ್‌ಎಂಎಸ್‌ ಮತ್ತು ಅದಕ್ಕಾಗಿ ಲಿಂಕ್‌ ಕಳುಹಿಸಲಾಗುತ್ತದೆ. ಉದಾಹರಣೆ: ಆತ್ಮೀಯ ಗ್ರಾಹಕರೇ ನಿಮ್ಮ ಕೆವೈಸಿ ಅಪ್‌ಡೇಟ್‌ ಆಗಿಲ್ಲ. ಅದನ್ನು ಪೂರ್ತಿಗೊಳಿಸದಿದ್ದರೆ ಖಾತೆ ಬ್ಲಾಕ್‌ ಮಾಡಲಾಗುತ್ತದೆ. ಲಿಂಕ್‌ ಫಾಲೋ ಮಾಡಿ ಎಂದು ಇರುತ್ತದೆ.
  • ಅದನ್ನು ನಂಬುವವರು ಲಿಂಕ್‌ ತೆರೆದು ಬ್ಯಾಂಕ್‌ ವಿವರ ನಮೂದಿಸಿ ಕಳುಹಿಸುತ್ತಾರೆ. ಕೂಡಲೇ ವಂಚಕರು ಒಟಿಪಿ ಸಂಖ್ಯೆ ಕಳುಹಿಸುತ್ತಾರೆ. ಅದನ್ನು ನಮೂದಿಸಿದಾಗ ನಮ್ಮ ಬ್ಯಾಂಕ್‌ ಖಾತೆಯ ವಿವರ ಅವರಿಗೆ ಲಭ್ಯವಾಗುತ್ತದೆ. ಜತೆಗೆ ಹಣವನ್ನೂ ಕಳೆದುಕೊಳ್ಳುತ್ತಾರೆ.

ಎಚ್ಚರಿಕೆ ವಹಿಸುವುದು ಹೇಗೆ? :

  • ಸಿಇಆರ್‌ಟಿ ನೀಡಿದ ಮುನ್ನೆಚ್ಚರಿಕೆ ಪ್ರಕಾರ, ಅನಾಮಧೇಯ ಮೂಲಗಳಿಂದ ಬಂದ ಎಸ್‌ಎಂಎಸ್‌, ಇ-ಮೇಲ್‌ಗ‌ಳಲ್ಲಿರುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ.
  • ಎಸ್‌ಎಂಎಸ್‌ ಕಳುಹಿಸಿದ ನಂಬರ್‌ ಪರಿಚಿತವೇ ಅಥವಾ ನಕಲಿ ಮೊಬೈಲ್‌ ನಂಬರ್‌ ಆಗಿದೆಯೋ ಎಂದು ಪರಿಶೀಲಿಸಿ.
  • ನಿಗದಿತ ಬ್ಯಾಂಕ್‌ ಹೆಸರಲ್ಲಿ ಎಸ್‌ಎಂಎಸ್‌, ಇ-ಮೇಲ್‌ ಬಂದಿದ್ದರೆ ನೀವು ಖಾತೆ ಹೊಂದಿರುವ ಬ್ಯಾಂಕ್‌ ಶಾಖೆಯಲ್ಲಿ ವಿಚಾರಿಸಿ.
  • ಮೊಬೈಲ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗ್ಳಲ್ಲಿರುವ ಆ್ಯಂಟಿ ವೈರಸ್‌ ಸಾಫ್ಟ್ವೇರ್‌ ಅಪ್‌ಡೇಟ್‌ ಮಾಡಿ.
  • ly, tinyurl ಎಂದು ಇರುವ ಲಿಂಕ್‌ಗಳ ಬಗ್ಗೆ ಎಚ್ಚರಿಕೆ ವಹಿಸಿ. ಅದರ ಪೂರ್ತಿ ವೆಬ್‌ಸೈಟ್‌ ಲಿಂಕ್‌ ಇದೆಯೋ ಎಂದು ಪರಿಶೀಲಿಸಿ. ಅದಕ್ಕಾಗಿ ಯುಆರ್‌ಎಲ್‌ ಪರೀಕ್ಷಿಸುವ ವ್ಯವಸ್ಥೆಯೂ ಇದೆ.
  • ಆ್ಯಪ್‌ಸ್ಟೋರ್‌ನಿಂದ ಗೊತ್ತಿಲ್ಲದೇ ಇರುವ ಆ್ಯಪ್‌ ಡೌನ್‌ ಲೋಡ್‌ ಮಾಡಬೇಡಿ.
Advertisement

Udayavani is now on Telegram. Click here to join our channel and stay updated with the latest news.

Next