Advertisement
ಯುವಜನಾಂಗವನ್ನು ಬಹುಬೇಗನೇ ಸೆಳೆದಿರುವುದು ಸೆಲ್ಫಿ, ಮೊಬೈಲ್ ಗೇಮ್, ಟಿಕ್ ಟಾಕ್ ಆ್ಯಪ್‌ಗ್ಳು. ಆದರೆ ಇದು ಧನಾತ್ಮಕ ಸಂಗತಿ ಸೃಷ್ಟಿಸುವ ಪ್ರಮಾಣಕ್ಕಿಂತ ನಕರಾತ್ಮಕ ವಿದ್ಯಾಮಾನಗಳಿಗೆ ಕಾರಣವಾಗುತ್ತಿರುವುದು ಆತಂಕದ ಸಂಗತಿ. ಟ್ರೆಂಡ್ ಆಗುತ್ತಿರುವ ಈ ಟಿಕ್ ಟಾಕ್ ಇತ್ತೀಚೆಗೆ ಯುವಕರ ಸಾವಿಗೂ ಕಾರಣವಾಗಿದೆ. ಯಾವುದೋ ಸಿನೆಮಾದ ಡೈಲಾಗ್, ಹಾಡನ್ನು ಅನುಕರಣೆ ಮಾಡಿ ಅದರ ವೀಡಿಯೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಜನರು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಇನ್ನೊಬ್ಬರ ಟೀಕೆಗೂ ಈ ಟಿಕ್‌ಟಾಕ್ ಆ್ಯಪ್‌ಗ್ಳು ಸಹಕರಿಸುತ್ತಿವೆ. ಇವುಗಳು ಮನೋರಂಜನೆಗಾಗಿದ್ದರೂ, ಆ ಉದ್ದೇಶದಿಂದ ಬಳಕೆಯಾಗದೇ ಇರುವುದು ಖೇದಕರ ಸಂಗತಿ.
Related Articles
Advertisement
ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಸೆಲ್ಫಿ ಅಪ್‌ಲೋಡ್ ಮಾಡಿ ಲೈಕ್, ಕಮೆಂಟ್ ಎಂಬ ಪ್ರಚಾರದ ಗೀಳಿಗೆ ಕಡಿವಾಣ ಅಗತ್ಯ. ಪೋಟೋ ದುರ್ಬಳಕೆ ಆಗಿ ಭವಿಷ್ಯವನ್ನೇ ಕಳೆದುಕೊಂಡ ಉದಾಹರಣೆಗಳಿವೆ. ಇಂತಹ ಗೀಳು ನಿಯಂತ್ರಣಕ್ಕೆ ಮನೆಯೇ ಪಾಠ ಶಾಲೆಯಾಗಬೇಕು.
ಮುಖ ಪರಿಚಯ ಇರದ ಮಿತ್ರರ ಗೆಳೆತನ, ಪ್ರಶಂಸೆಗಿಂತ ಹತ್ತಿರದ ಬಂಧುಮಿತ್ರರ ಗೆಳೆತನ, ಪ್ರಶಂಸೆಗಳು ಮುಖ್ಯ ಎನ್ನುವ ಬುದ್ಧಿವಾದವನ್ನು ಮಕ್ಕಳಿಗೆ ತಿಳಿ ಹೇಳಬೇಕು. ಮೊಬೈಲ್ ಮಾತ್ರ ಜೀವನ ಎಂದೆನಿಸದೆ ಸೃಜನಾತ್ಮಕ ಗುಣಗಳಿಗೆ ಪೂರಕವಾಗುವ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಮಾಡುವುದು. ಕಲೆಯಾಧಾರಿತ ಚಟುವಟಿಕೆಗಳಿಗೆ ಉತ್ಸಾಹಿಸಬೇಕು. ಸ್ಮಾರ್ಟ್‌ಫೋನ್ ಮತ್ತು ನೆಟ್ನಿಂದ ಆಗುವ ಅನಾಹುತಗಳ ಬಗ್ಗೆ ಗಮನ ಹರಿಸಬೇಕು. ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧ ಕಟ್ಟುನಿಟ್ಟಾಗಿ ಜಾರಿಗೊಳ್ಳಲು ಪೋಷಕರು ಕೈ ಜೋಡಿಸಬೇಕು.