Advertisement

ನಿರ್ಲಕ್ಷಿಸದಿರಿ ಫುಡ್‌ ಪಾಯ್ಸನ್‌ ಸಮಸ್ಯೆ

01:04 AM Nov 12, 2019 | Sriram |

ರಸ್ತೆ ಬದಿಯಲ್ಲಿ ತಳ್ಳುಗಾಡಿಯಲ್ಲಿ ಮಾರುತ್ತಿರುವ ತಿಂಡಿಗಳನ್ನು ನೋಡಿದರೆ ಬಾಯಲ್ಲಿ ನೀರು ಬಾರದೆ ಇರದು. ಹಾಗಂತ ತಿಂದರೆ ಅನೇಕರು ಫುಡ್‌ ಪಾಯ್ಸನ್‌ ಸಮಸ್ಯೆಗೆ ಒಳಗಾಗುತ್ತಾರೆ. ಫುಡ್‌ ಪಾಯ್ಸನ್‌ ಒಂದು ಸಾಮಾನ್ಯ ರೋಗವಾಗಿದ್ದರೂ, ನಿರ್ಲಕ್ಷಿéದರೆ ದೇಹಕ್ಕೆ ಅಪಾಯವನ್ನುಂಟು ಮಾಡಬಹುದು.

Advertisement

ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆಂಟೇಷನ್‌ (ಸಿಡಿಸಿ) ವರದಿಯೊಂದರ ಪ್ರಕಾರ ಅಮೆರಿಕದಲ್ಲಿ 6 ಮಂದಿಯಲ್ಲಿ ಒಬ್ಬರು ಪ್ರತೀ ವರ್ಷ ಫುಡ್‌ ಪಾಯ್ಸನ್‌ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಕೆಲವೊಂದು ವೇಳೆ ಆಹಾರ ಸೇವನೆಯಾದ ಬಳಿಕ ಒಂದು ದಿನಗಳ ನಂತರ ಫುಡ್‌ ಪಾಯ್ಸನ್‌ ರೋಗದ ಲಕ್ಷಣಗಳು ಕಂಡುಬರಬಹುದು.

ಲಕ್ಷಣಗಳು
ಸಾಮಾನ್ಯ ಲಕ್ಷಣವೆಂಬಂತೆ ಫುಡ್‌ ಪಾಯ್ಸನ್‌ಗೆ ಒಳಗಾಗಿದ್ದರೆ ಪದೇ ಪದೇ ವಾಂತಿಯಾಗುತ್ತದೆ. ಕೆಲವೊಂದು ಬಾರಿ ಹಸಿವಾಗದೇ ಇರಬಹುದು. ಜ್ವರ ಬರುವ ಲಕ್ಷಣಗಳಿವೆ. ವಾಕರಿಕೆಯ ಜತೆ ತಲೆನೋವು ಕೂಡ ಇರಬಹುದು. ಫುಡ್‌ ಪಾಯ್ಸನ್‌ ಆಯಿತೆಂದು ಅದನ್ನು ನಿರ್ಲಕ್ಷ್ಯಸಿಸುವುದು ಒಳ್ಳೆಯದಲ್ಲ. ಮೂರು ದಿನಕ್ಕೂ ಹೆಚ್ಚು ಈ ರೋಗದ ಬಾಧೆ ಕಾಣಿಸಿಕೊಂಡರೆ ಹತ್ತಿರದ ವೈದ್ಯರನ್ನು ಭೇಟಿಯಾಗಬೇಕು. ಇಲ್ಲವಾದರೆ ಅದು ಪ್ರಾಣಹಾನಿಗೆ ಕಾರಣವಾಗಬಹುದು.

ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳಿಂದು ಫುಡ್‌ ಪಾಯ್ಸನ್‌ ಆಗುತ್ತದೆ. ಅದರಲ್ಲಿಯೂ ಇ ಕೋಲಿ, ಲಿಸ್ಟೇರಿಯಾ, ಸಾಲ್ಮೊನೆಲ್ಲಾಕಮ್‌ ಪ್ರಮುಖ ಬ್ಯಾಕ್ಟೀರಿಯಾಗಳು ತಿಂದಂತಹ ಆಹಾರ ವಿಷವಾಗುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವೈರಸ್‌ಗಳಿಂದಲೂ ಆಹಾರದಲ್ಲಿ ವಿಷಕಾರಿ ಅಂಶ ಅಡಕವಾಗಬಹುದು. ನೊರವಾಕ್‌ ವೈರಸ್‌ ಅದರಲ್ಲಿ ಪ್ರಮುಖವಾ ದುದ್ದು. ಈ ವೈರಸ್‌ಗಳು ತಿನ್ನುವ ಆಹಾರದ ಮುಖೇನ ನಮ್ಮ ದೇಹವನ್ನು ಪ್ರವೇಶಿಸುತ್ತದೆ.

ಫುಡ್‌ ಪಾಯ್ಸನ್‌ ಆದರೆ ಏನು ಮಾಡಬೇಕು
ಫುಡ್‌ ಪಾಯ್ಸನ್‌ ಆದರೆ ಸಾಮಾನ್ಯವಾಗಿ ವಾಂತಿ, ಬೇಧಿ ಇರುತ್ತದೆ. ಇದರಿಂದ ದೇಹದಲ್ಲಿರುವ ದ್ರವಾಂಶ ಹೊರ ಹೋಗುತ್ತದೆ. ಇದಕ್ಕಾಗಿ ನಿಂಬೆ ಹಣ್ಣಿನ ಜ್ಯೂಸ್‌, ಎಳನೀರು, ಬಿಸಿ ನೀರಿನ ಸೇವೆನೆ ಮಾಡಬಹುದು. ಮಿತ ಪ್ರಮಾಣದಲ್ಲಿ ಆಹಾರ ಸೇವಿಸಬಹುದು. ಜೀರ್ಣವಾಗದ ಆಹಾರ ಸೂಕ್ತಲ್ಲ. ಒಂದು ವೇಳೆ ಎರಡು ದಿನಕ್ಕೂ ಹೆಚ್ಚು ಕಾಲ ಫುಡ್‌ ಪಾಯ್ಸನ್‌ ನಿಯಂತ್ರಣಕ್ಕೆ ಬಾರದಿದ್ದರೆ ತತ್‌ಕ್ಷಣ ಹತ್ತಿರದ ವೈದ್ಯರನ್ನು ಭೇಟಿಯಾಗಿ.

Advertisement

ಫುಡ್‌ ಪಾಯ್ಸನ್‌ಗೆ ಮನೆಮದ್ದು
ಫುಡ್‌ ಪಾಯ್ಸನ್‌ನ್ನು ಶಮನ ಮಾಡುವಲ್ಲಿ ಶುಂಠಿ ಪರಿಣಾಮಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಶುಂಠಿ ಚಹಾ ಕೂಡ ಸಿಗುತ್ತಿದ್ದು, ವಾಕರಿಕೆ, ವಾಂತಿ ಮೊದಲಾದ ಕಾಯಿಲೆಗಳನ್ನು ಇದು ಗುಣಪಡಿಸುತ್ತದೆ. ಜ್ಯೂಸ್‌ನಲ್ಲಿಯೂ ಬಳಸಿಕೊಳ್ಳಬಹುದಾಗಿದೆ. ಶುಂಠಿಯನ್ನು ಜಗಿದು ಅದರ ರಸ ಕುಡಿಯುವುದರಿಂದ ಶಮನ ಮಾಡಬಹುದಾಗಿದೆ.

ಫುಡ್‌ ಪಾಯ್ಸನ್‌ ರೋಗಕ್ಕೆ ಬೆಳ್ಳುಳ್ಳಿ ಮನೆ ಮದ್ದು. ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್‌ ಗುಣವನ್ನು ಹೊಂದಿದ್ದು, ದೇಹವನ್ನು ಸ್ವತ್ಛಗೊಳಿಸುತ್ತದೆ. ಹಸಿ ಬೆಳ್ಳುಳ್ಳಿಯ ಎಸಳನ್ನು ನೀರಿನ ಜತೆ ಸೇವಿಸಿದರೆ ಹೊಟ್ಟೆಯ ಸಮಸ್ಯೆಯಿಂದ ಉಪಶಮನ ಕಾಣಬಹುದು. ದೇಹದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಲಿಂಬೆ ಹಣ್ಣು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಲೋಟ ನೀರಿಗೆ ಅರ್ಧ ಲಿಂಬೆ ಹಣ್ಣು ರಸ ಹಿಂಡಿ ಕುಡಿಯಬಹುದು.

ಕುದಿದ ನೀರಿಗೆ ಕೊತ್ತಂಬರಿ ಸೊಪ್ಪು, ಸ್ವಲ್ಪ ಉಪ್ಪು ಹಾಕಿ ಬೆರೆಸಿ ಸೇವಿಸಬೇಕು. ಇನ್ನು, ಒಂದುಲೋಟ ನೀರನ್ನು ಬಿಸಿ ಮಾಡಿ, ನೀರು ಕುದಿಯುತ್ತಿದ್ದಂತೆ ಒಂದು ಚಮಚ ಜೀರಿಗೆ ಬೆರೆಸಿ 5 ನಿಮಿಷ ಕುದಿಸಿ, ಉಗುರು ಬೆಚ್ಚನೆ ಬಳಿಕ ಕುಡಿಯಿರಿ. ತುಳಸಿ ರಸವನ್ನು ಜೇನಿನಲ್ಲಿ ಬೆರೆಸಿ ಕುಡಿದರೂ, ಫುಡ್‌ ಪಾಯ್ಸನ್‌ ಶಮನವಾಗಬಹುದು.

ಅದರಲ್ಲೂ ಮುಖ್ಯವಾಗಿ ಯಾವುದೇ ಆಹಾರವನ್ನು ಸೇವನೆ ಮಾಡುವ ಮುನ್ನ ಕೈಯನ್ನು ಚೆನ್ನಾಗಿ ತೊಳೆಯಬೇಕು. ಆಹಾರ ಸರಿಯಾದ ಪ್ರಮಾಣದಲ್ಲಿ ಶೇಖರಣೆ ಮಾಡಲಾಗಿದೆಯಾ ಎಂದು ಪರಿಶೀಲಿಸಬೇಕು. ಯಾವುದೇ ತಾಜಾ ಆಹಾರವನ್ನು ಬಳಸುವ ಮುನ್ನ ನೀರಿನಲ್ಲಿ ತೊಳೆಯಬೇಕು. ಮಾಂಸದ ಅಡುಗೆ ಮಾಡುವಾಗ ಶುಚಿತ್ವದ ಕಡೆಗೆ ಗಮನಹರಿಸಬೇಕು. ಅಡುಗೆಗೆ ಬಳಸುವ ತರಕಾರಿಯನ್ನು ಚೆನ್ನಾಗಿ ಬೇಯಿಸಬೇಕು.

ವೈದ್ಯರನ್ನು ಸಂಪರ್ಕಿಸಿ
ಹೊಟ್ಟೆಯಲ್ಲಿ ಆಹಾರ ಜೀರ್ಣವಾಗದೇ ಇದ್ದರೆ ಫುಡ್‌ ಪಾಯ್ಸನ್‌ ಸಮಸ್ಯೆ ಉಂಟಾಗಬಹುದು. ಈ ವೇಳೆ ಗಂಜಿಯನ್ನು ಸೇವೆನೆ ಮಾಡಿ. ಫುಡ್‌ ಪಾಯ್ಸನ್‌ ಆದಾಕ್ಷಣ ಸಾಮಾನ್ಯವಾಗಿ ಮನೆ ಮದ್ದು ಆಯ್ಕೆ ಇರಲಿ. ಮತ್ತು ಕಡಿಮೆಯಾಗದಿದ್ದರೆ ನಿರ್ಲಕ್ಷಿಸಬೇಡಿ. ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸಿ..
ಡಾ| ಸಚಿನ್‌ ನಡ್ಕ ವೈದ್ಯರು

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next