Advertisement

ನನ್ನಲ್ಲಿಯೇ ಜನನ ಪ್ರಮಾಣಪತ್ರವಿಲ್ಲ, ನನ್ನ ತಂದೆಯ ಪ್ರಮಾಣಪತ್ರವನ್ನು ಹೇಗೆ ತರಲಿ?: ಕೆಸಿಆರ್

10:10 AM Mar 09, 2020 | Mithun PG |

ತೆಲಂಗಾಣ: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಮಧ್ಯೆ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ತಾನೂ ಜನನ ಪ್ರಮಾಣಪತ್ರವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

Advertisement

ನನ್ನಲ್ಲಿಯೇ ಜನನ ಪ್ರಮಾಣಪತ್ರವಿಲ್ಲದಿದ್ದಾಗ, ನನ್ನ ತಂದೆಯ ಪ್ರಮಾಣಪತ್ರವನ್ನು ನಾನು ಹೇಗೆ ತರಲಿ ಎಂದು ಅವರು ವಿಧಾನಸಭೆಯಲ್ಲಿ ಪ್ರಶ್ನಿಸಿದ್ದಾರೆ, ಆ ಮೂಲಕ ಏಪ್ರಿಲ್ 1, 2020 ರಿಂದ ಕೇಂದ್ರ ಸರ್ಕಾರವು  ಹೊರತರಲು ಯೋಜಿಸುತ್ತಿರುವ ಎನ್‌ ಪಿಆರ್‌ ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಎನ್ ಪಿ ಆರ್ ನನಗೆ  ಕಳವಳವನ್ನುಂಟುಮಾಡುತ್ತಿದೆ. ನಾನು ಹುಟ್ಟಿದ್ದು ಹಳ್ಳಿಯ ನನ್ನ ಮನೆಯಲ್ಲಿ. ಆಗ ಯಾವುದೇ ಆಸ್ಪತ್ರೆಗಳು ಇರಲಿಲ್ಲ. ಗ್ರಾಮದ ಹಿರಿಯರು ಯಾವುದೇ ಅಧಿಕೃತ ಮುದ್ರೆಯನ್ನು ಹೊಂದಿರದ ‘ಜನ್ಮ ನಾಮ’ ಬರೆಯುತ್ತಿದ್ದರು. ನಾನು ಜನಿಸಿದಾಗ ನಮಗೆ 580 ಎಕರೆ ಭೂಮಿ ಮತ್ತು ಕಟ್ಟಡವಿತ್ತು. ನನಗೆ ಜನನ ಪ್ರಮಾಣಪತ್ರ ದಾಖಲೆ ಮಾಡಿಸಲು ಸಾಧ್ಯವಾಗದಿದ್ದಾಗ, ದಲಿತರು, ಬುಡಕಟ್ಟು ಜನಾಂಗದವರು ಮತ್ತು ಬಡವರು ಹೇಗೆ  ದಾಖಲೆ ಒದಗಿಸುತ್ತಾರೆ ಎಂದು ಕಿಡಿಕಾರಿದ್ದಾರೆ.

ಹೊಸ ಶಾಸನವು ಸಾಂವಿಧಾನಿಕ ವಿರೋಧಿ ಮತ್ತು ಇದು ದೇಶದ ಸಂವಿಧಾನದ ಮೂಲ ತತ್ವಕ್ಕೆ ವಿರುದ್ಧವಾಗಿದೆ .ರಾಜ್ಯ ವಿಧಾನಸಭೆಯಲ್ಲಿ ಸಿಎಎ ಮತ್ತು ಎನ್‌ ಪಿಆರ್ ಕುರಿತು ಚರ್ಚೆ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಇಡೀ ದೇಶಕ್ಕೆ ಬಲವಾದ ಸಂದೇಶ ರವಾನಿಸಲು ನಿರ್ಣಯ ಮಂಡಿಸಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಇದೇ ವೇಳೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next