ಕಾರಿ ವಿ.ವಿ. ಜ್ಯೋತ್ಸಾ ಕರೆ ನೀಡಿದರು. ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶುಕ್ರವಾರ ನಡೆದ ಕಲಬುರಗಿ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Advertisement
ಈ ಮೀಸಲಾತಿ ನಿಗದಿ ಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಮತ್ತು ಸದಸ್ಯರು ಆಗಮಿಸಿದ್ದರು. ಆದರೆ, ಅರ್ಧದಷ್ಟು ಮಹಿಳಾ ಸದಸ್ಯರು ಆಯ್ಕೆಯಾಗಿದ್ದರೂ ಪುರುಷರ ಸಂಖ್ಯೆಯೇ ಅ ಧಿಕವಾಗಿತ್ತು. ಹೀಗಾಗಿ ಸಭೆಯೊಳಗೆ ಗೆಲುವಿನ ಪ್ರಮಾಣಪತ್ರ ಮತ್ತು ಅವರ ಗುರುತಿನ ಚೀಟಿ ಪರಿಶೀಲನೆಗೆ ಒಳಗೆ ಬಿಡಲಾಗಿತ್ತು. ಮಹಿಳಾ ಸದಸ್ಯರ ಬದಲು ಬಂದ ಪತಿಯಂದಿರು ಮತ್ತು ಕುಟುಂಬದವರನ್ನು ಸಭಾಂಗಣದ ಹೊರಗೆ ನಿಲ್ಲಿಸಲಾಗಿತ್ತು.
Related Articles
Advertisement
ಹೊಸವಾಗಿ ಆಯ್ಕೆಯಾದ ಸದಸ್ಯರಿಗೆ ತರಹೇವಾರಿ ಕೆಲಸ ಮಾಡಬೇಕೆಂಬ ಇಚ್ಛೆ ಇರುತ್ತದೆ. ಆದರೆ, ಅ ಧಿಕಾರಿಗಳು ಇದರಲ್ಲಿ ಕೆಲ ಕೆಲಸ ಮಾಡಲು ಅವಕಾಶಇಲ್ಲವೆಂದು ಹೇಳುತ್ತಾರೆ. ಆಗ ಅಧಿಕಾರಿಗಳು ಮತ್ತು ಸದಸ್ಯರ ಮಧ್ಯೆ ಕಲಹ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಯಾವ ಕಾಮಗಾರಿಗಳು ನಿಮ್ಮ ವ್ಯಾಪ್ತಿಗೆ ಬರುತ್ತವೆ? ಯಾವ ಕಾಮಗಾರಿಗಳು ಬರುವುದಿಲ್ಲ? ಎನ್ನುವ ಬಗ್ಗೆಯೂ ಮಾಹಿತಿ ಹೊಂದಿರಬೇಕು ಎಂದು ಸಲಹೆ ನೀಡಿದರು. ತಮ್ಮ-ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಪಾರದರ್ಶಕ ಆಡಳಿತಕ್ಕೆ ಒತ್ತು ಕೊಡಬೇಕು. ಅಭಿವೃದ್ಧಿ ಕಾಮಗಾರಿಗಳು ಅಥವಾ ಫಲಾನುಭವಿಗಳ ಆಯ್ಕೆಯಲ್ಲಿ ಅವ್ಯವಹಾರ ನಡೆದರೆ, ಅದು ಬಹಿರಂಗಗೊಂಡಾಗ ಮುಂದುವರೆಸಲು ಸಾಧ್ಯವಾಗುವುದಿಲ್ಲ. ಅಲ್ಲದೇ, ಅದನ್ನು ಪುನರ್ ಆರಂಭಿಸಲು ನಾಲ್ಕೈದು ವರ್ಷಗಳಾದರೂ ಹಿಡಿಯುತ್ತದೆ. ಇದರಿಂದ ಸಾರ್ವಜನಿಕರು, ಫಲಾನುಭವಿಗಳು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪಂಚಾಯಿತಿಗಳಿಗೆ ಸರ್ಕಾರದಿಂದ ಸೀಮಿತವಾದ ಅನುದಾನ ಬರುತ್ತದೆ. ಹೀಗಾಗಿ ಅನುದಾನಕ್ಕೆ ಅನುಸಾರವಾಗಿ ಆದ್ಯತೆ ಮೇರೆಗೆ ಕಾಮಗಾರಿ
ಕೈಗೆತ್ತಿಕೊಳ್ಳಬೇಕು. ಈ ಸಮಯದಲ್ಲಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಂಡಾಗ ಅಗತ್ಯ ಕಾಮಗಾರಿಗಳನ್ನು ಬೇಗ ಮುಗಿಸಲು ಸಾಧ್ಯವಾಗುತ್ತದೆ ಎಂದರು. ಸಹಾಯಕ ಆಯುಕ್ತ ಬಲರಾಮ ಲಮಾಣಿ, ತಹಶೀಲ್ದಾರ್ ಜಗನ್ನಾಥ ಪೂಜಾರಿ, ತಾ.ಪಂ ಮುಖ್ಯ ಕಾರ್ಯನಿರ್ವಹಕ ಮಾನಪ್ಪ ಕಟ್ಟಿಮನಿ ಹಾಗೂ ಗ್ರಾಪಂ
ಪಿಡಿಒಗಳು ಪಾಲ್ಗೊಂಡಿದ್ದರು.