Advertisement

“ರಣಜಿ ಕೂಟ ರದ್ದು ಮಾಡಬೇಡಿ’: ರಾಜ್ಯ ಕ್ರಿಕೆಟ್‌ ಸಂಸ್ಥೆ ಮನವಿ

11:06 PM Jan 25, 2022 | Team Udayavani |

ಮುಂಬಯಿ: ಒಂದು ಕಡೆ ಕೊರೊನಾ ಕಾಟ, ಮತ್ತೊಂದು ಕಡೆ ಹಲ ವಾರು ನಿರ್ಬಂಧಗಳು. ಇದರ ನಡುವೆ ಬಿಸಿಸಿಐಗೆ ಐಪಿಎಲ್‌ ಪಂದ್ಯಾವಳಿಯನ್ನು ಸುರಕ್ಷಿತವಾಗಿ ಮುಗಿಸುವುದು ದೊಡ್ಡ ಸವಾಲಾಗಿದೆ.

Advertisement

ಹೀಗಿರುವಾಗ ಸತತ 75 ದಿನಗಳಷ್ಟು ದೀರ್ಘ‌ಕಾಲ ನಡೆಯುವ ರಣಜಿ ಕೂಟ ನಡೆಸುವುದು ಹೇಗೆ? ಇದನ್ನು ರದ್ದು ಮಾಡುವ ಚಿಂತನೆಯೊಂದು ಒಳಗಿಂದೊಳಗೇ ನಡೆಯುತ್ತಿದೆ. ಆದರೆ 8 ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಮಾತ್ರ ಇಂಥ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಬಿಸಿಸಿಐಗೆ ಮನವಿ ಮಾಡಿರುವ ಬಗ್ಗೆ ವರದಿಯಾಗಿದೆ.

ಇದನ್ನೂ ಓದಿ:ವನಿತಾ ಟಿ20 ರ್‍ಯಾಂಕಿಂಗ್‌: ಶಫಾಲಿ ವರ್ಮ ಮತ್ತೆ ನಂ.1

ಅನೌಪಚಾರಿಕ ಮನವಿ
ಈ ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಅನೌಪಚಾರಿಕವಾಗಿ ಮನವಿ ಸಲ್ಲಿಸಿವೆ. ಈ ಬಗ್ಗೆ ಬಿಸಿಸಿಐ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರೂ ಖಚಿತವಾಗಿ ಉತ್ತರಿಸಿಲ್ಲ. ಇದಕ್ಕೆ ಕಾರಣವೂ ಇದೆ. ಕೊರೊನಾದಿಂದ ಕೂಟ ನಡೆಸುವುದು ಕಷ್ಟ ಎನ್ನುವುದು ಒಂದು ಕಾರಣವಾದರೆ, 38 ತಂಡಗಳು ಭಾಗವಹಿಸುವ ಈ ಕೂಟ ನಡೆಸಲು 75 ದಿನಗಳು ಬೇಕು ಎನ್ನುವುದು ಇನ್ನೊಂದು. ಐಪಿಎಲ್‌ ಹತ್ತಿರವಿರುವಾಗ ಇದನ್ನು ನಡೆಸುವುದು ಹೇಗೆ ಎಂಬ ಪ್ರಶ್ನೆ ಬಿಸಿಸಿಐನದ್ದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next