Advertisement

G Boss ಎಂದು ಕರೆಯಬೇಡಿ..: ಫ್ಯಾನ್ಸ್‌ಗೆ ಗಣೇಶ್‌ ಮನವಿ

10:53 AM Aug 19, 2024 | Team Udayavani |

“ನನ್ನನ್ನು ಜಿ ಬಾಸ್‌ ಎಂದು ಕರೆಯಬೇಡಿ, ಪ್ರೀತಿಯಿಂದ ಗೋಲ್ಡನ್‌ಸ್ಟಾರ್‌ ಅನ್ನಿ ಸಾಕು…’ – ಹೀಗೆ ಹೇಳಿದ್ದು ನಟ ಗಣೇಶ್‌.

Advertisement

ಇತ್ತೀಚೆಗೆ “ಕೃಷ್ಣಂ ಪ್ರಣಯ ಸಖಿ’ ಚಿತ್ರದ ಬಿಡುಗಡೆ ವೇಳೆ ಅಭಿಮಾನಿ ಗಳು “ಜಿ ಬಾಸ್‌ ಜಿ ಬಾಸ್‌’ ಎಂದು ಘೋಷಣೆ ಕೂಗುತ್ತಿದ್ದರು. ಇದು ಗಣೇಶ್‌ ಅವರ ಕಿವಿಗೆ ಬಿದ್ದಿದೆ. ಇದೇ ಕಾರಣದಿಂದ ಅಭಿಮಾನಿ ಗಳಲ್ಲಿ ಗಣೇಶ್‌ ಮನವಿ ಮಾಡಿ ಕೊಂಡಿದ್ದು.

“ನನಗೆ ನಿಮ್ಮ ಮನೆ ಹುಡುಗನಾಗಿ, ನಿಮ್ಮ ಪ್ರೀತಿಯ ಗೋಲ್ಡನ್‌ಸ್ಟಾರ್‌ ಆಗಿ ಇರಲು ಬಯಸುತ್ತೇನೆ. ಹಾಗಾಗಿ, ಯಾರೂ ನನ್ನನ್ನು “ಜಿ ಬಾಸ್‌’ ಎಂದು ಕರೆಯಬೇಡಿ’ ಎಂದು ಗಣೇಶ್‌ ಮನವಿ ಮಾಡಿಕೊಂಡರು.

ಗಣೇಶ್‌ ಅವರು ನಟಿಸಿರು ʼಕೃಷ್ಣಂ ಪ್ರಣಯ ಸಖಿʼ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಚಿತ್ರದಲ್ಲಿ ಗಣೇಶ್‌ ಜತೆಗೆ ಮಾಳವಿಕಾ ನಾಯರ್‌, ಶರಣ್ಯ ಶೆಟ್ಟಿ, ರಂಗಾಯಣ ರಘು ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಚಿತ್ರದ ʼದ್ವಾಪರʼ ಹಾಡು ಸೂಪರ್‌ ಹಿಟ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next