Advertisement

ಹಫೀಜ್‌, ಹಕ್ಕಾನಿಗೆ ನಿಮ್ಮದೇ ಪೋಷಣೆ​​​​​​​

06:25 AM Sep 28, 2017 | |

ನ್ಯೂಯಾರ್ಕ್‌: ಉಗ್ರ ಹಫೀಜ್‌ ಸಯೀದ್‌, ಹಕ್ಕಾನಿ ನೆಟ್‌ವರ್ಕ್‌ಗೆ 20-30 ವರ್ಷ ಹಿಂದೆ ಶ್ವೇತಭವನವೇ ಅಕ್ಕರೆಯ ಪೋಷಣೆ ನೀಡುತ್ತಿತ್ತು. ಕಂಕುಳಲ್ಲಿ ಎತ್ತಿ ಕೊಂಡು ಆಡಿಸುತ್ತಿತ್ತು. ಅದೇ ಅಮೆರಿಕ ಇಂದು ಉಗ್ರವಾದ ಬೆಳೆಯಲು ಪಾಕಿಸ್ಥಾನವೇ ಕಾರಣ ಎಂದು ನಮ್ಮತ್ತ ಬೆರಳು ಮಾಡುತ್ತಿರುವುದು ಎಷ್ಟು ಸರಿ?’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಖವಾಜ ಆಸಿಫ್ ಪ್ರಶ್ನಿಸಿದ್ದಾರೆ.

Advertisement

ನ್ಯೂಯಾರ್ಕ್‌ನಲ್ಲಿ ನಡೆದ ಏಷ್ಯಾ ಭದ್ರತಾ ವಿಚಾರ ಸಂಕಿರಣದಲ್ಲಿ ಮಾತನಾಡಿದ ಪಾಕ್‌ ಸಚಿವ ಖವಾಜ ಆಸಿಫ್, ಅಮೆರಿಕದ ಮೇಲೆ ಹರಿಹಾಯ್ದಿದ್ದಾರೆ. “ಇತ್ತೀಚಿನ ಕೆಲ ದಶಕಗಳವರೆಗೂ ಹಫೀಸ್‌ ರೀತಿಯ ಅಪಾಯಕಾರಿ ಉಗ್ರರನ್ನು ತನ್ನ “ಪರಮಾಪ್ತ’ರಂತೆ ಸಲುಹಿದ ವೈಟ್‌ಹೌಸ್‌ ಆಡಳಿತವೇ, ಉಗ್ರವಾದ ಇಷ್ಟು ಅಪಾಯ ಕಾರಿ ಮಟ್ಟಕ್ಕೆ ಬೆಳೆಯಲು ಪ್ರಮುಖ ಕಾರಣ,’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಹೌದು ಅವರೇ ತಲೆನೋವು: “ಪಾಕಿಸ್ಥಾನವೇ ಉಗ್ರರ ಪ್ರಮುಖ ಅಡಗುದಾಣ’ ಎಂದು ಬಹು ದಶಕಗಳಿಂದಲೂ ಭಾರತ ಆರೋಪಿಸಿತ್ತಾ ಬಂದಿದ್ದರೂ ಆ ಆರೋಪ ವನ್ನು ತಳ್ಳಿಹಾಕುತ್ತಲೇ ಬಂದಿದ್ದ ಪಾಕಿಸ್ತಾನ, ಇದೀಗ ತಾನು ಪೋಷಿಸಿದ ಉಗ್ರರೇ ಜಾಗತಿಕ ಮಟ್ಟದಲ್ಲಿ ದೇಶ ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದು ಒಪ್ಪಿಕೊಂಡಿದೆ. 

“ಪಾಕಿಸ್ತಾನ ಲಶ್ಕರ್‌-ಇ-ತೈಬಾ ರೀತಿಯ ಉಗ್ರ ಸಂಘಟನೆ, ಹಫೀಸ್‌ ಸಯೀದ್‌ನಂಥ ಉಗ್ರರ ಬೆಂಬಲಕ್ಕೆ ನಿಂತಿದೆ ಎಂದು ಹೇಳುವುದು ತುಂಬಾ ಸುಲಭ. ಹೌದು. ಹಫೀಸ್‌ ರೀತಿಯ ಜಾಗತಿಕ ಮಟ್ಟದ ಉಗ್ರರು ನಮ್ಮ ದೇಶಕ್ಕೆ ತಲೆರನೋವಾ ಗಿದ್ದಾರೆ’ ಎಂದು ಬಹಿರಂಗವಾಗಿಯೇ ಒಪ್ಪಿ ಕೊಂಡಿರುವ ಪಾಕ್‌ ಸಚಿವ, “ಅಮೆರಿಕ ಪೋಷಿಸಿ ಬೆಳೆಸಿರುವ ಇಂಥ “ಸಂಪದ್ಭರಿತ ತಲೆನೋವನ್ನು’ ನಿವಾರಿಸಲು ಅಗತ್ಯವಿರುವ ಸಂಪನ್ಮೂಲ ನಮ್ಮ ಬಳಿಯಿಲ್ಲ. ಹೀಗಾಗಿ ಈ ಸಂಕಷ್ಟದಿಂದ ಹೊರಬರಲು ನಮಗೆ ಕೊಂಚ ಸಮಯ ಬೇಕಿದೆ,’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಸಶಸ್ತ್ರ ಉಗ್ರಗಾಮಿತ್ವಕ್ಕೆ ಅಂಕುಶ
ಆವಂತಿಪುರ:
 ಜಮ್ಮು ಮತ್ತು ಕಾಶ್ಮೀರದಲ್ಲಿ ಸಶಸ್ತ್ರ ಉಗ್ರಗಾಮಿತ್ವವನ್ನು ಹೊಸಕಿ ಹಾಕಲಾಗಿದೆ. ಇನ್ನೇನಿದ್ದರೂ ಶಾಂತಿ ನೆಲೆಸುವ ನಿಟ್ಟಿನಲ್ಲಿ ರಾಜಕೀಯ ನಾಯಕತ್ವ ಮುಂದಾಳತ್ವ ವಹಿಸಲಾಗಿದೆ ಎಂದು ಸೇನಾಧಿಕಾರಿ ಮೇ.ಜ.ಬಿ.ಎಸ್‌.ರಾಜು ಹೇಳಿದ್ದಾರೆ. 

Advertisement

ಕಣಿವೆ ರಾಜ್ಯದ ಯಾವುದೇ ಪ್ರದೇಶ ಪ್ರತ್ಯೇಕತಾವಾದಿಗಳು ಅಥವಾ ಉಗ್ರಗಾಮಿಗಳ ನಿಯಂತ್ರಣದಲ್ಲಿ ಇಲ್ಲ ಎಂದು ಅವರು ಹೇಳಿದ್ದಾರೆ. ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿ ದರು. ಇತ್ತೀಚಿನ ದಿನಗಳಲ್ಲಿ ಉಗ್ರ ಸಂಘಟನೆಗಳಿಗೆ ನೇಮಕ ನಡೆಯುತ್ತಿಲ್ಲ. ಸೇನೆಯ ವತಿಯಿಂದ ಯುವಕರನ್ನು ಮನವೊಲಿಸುವ ಕಾರ್ಯ ನಡೆಸಲಾಗುತ್ತಿದೆ. ಅದಕ್ಕಾಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ. ಉಗ್ರರು ಸೇನೆಯನ್ನು ಬಿಟ್ಟು ದುರ್ಬಲ ಸ್ಥಳಗಳನ್ನು ಗುರಿಯಾಗಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next