ನವ ದೆಹಲಿ : ಶಿರೋಮಣಿ ಅಕಾಲಿ ದಳದದ ಸಂಸದೆ ಹರ್ಸಿಮ್ರತ್ ಕೌರ್ ಮತ್ತೆ ಕೇಂದ್ರದ ವಿರದ್ಧ ಹರಿಹಾಯ್ದಿದ್ದಾರೆ.
ಕೇಂದ್ರ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಂಸತ್ ಭವನದ ಹೊರಗಡೆ ಪ್ರತಿಭಟನೆಗಿಳಿದ ಕೌರ್, ರಾಷ್ಟ್ರೀಯ ರಾಜಧಾನಿಯ ಗಡಿಯಲ್ಲಿ ಅನ್ನದಾತ (ರೈತರು) ಸಾಯುತ್ತಿರುವಾಗ, ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ನಡೆಯುತ್ತಿರುವ ಎಲ್ಲ ಪ್ರಕ್ರಿಯೆಗಳನ್ನು ನಿಲ್ಲಿಸಬೇಕು ಮತ್ತು ಮುಂದಿನ ಸಾವುಗಳನ್ನು ನಿಲ್ಲಿಸಲು ಕೃಷಿ ಕಾನೂನುಗಳನ್ನು ಚರ್ಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಭರದಿಂದ ನಡೆಯುತ್ತಿದೆ ಸರನಾಲೆ ಸೇತುವೆ; ಮಳೆಗೆ ಕೊಚಿಕೊಂಡು ಹೋಗಿದ್ದ ತಾತ್ಕಾಲಿಕ ಸೇತುವೆ
ಸಂಸತ್ ಭವನದ ಹೊರಭಾಗದಲ್ಲಿ ನಿಮಗೆ ಆಹಾರ ನೀಡುವ ಕೈಯನ್ನು ಕಚ್ಚಬೇಡಿ (Don’t bite the hand that feeds you) ಎಂದು ಬರೆದಿದ್ದ ನಾಮ ಫಲಕವೊಂದನ್ನು ಹಿಡಿದುಕೊಂಡು ರೈತರ ಬಗ್ಗೆ ಸರ್ಕಾರ ಅಸಡ್ಡೆ ತೋರುತ್ತಿರುವುದನ್ನು ಖಂಡಿಸುತ್ತಾ, ಸರ್ಕಾರವು ಖೃಷಿ ಕಾನೂನುಗಳ ಬಗ್ಗೆ ಅಸಡ್ಡೆ ಹೊಂದಿದ್ದಕ್ಕಾಗಿ ನನಗೆ ಬೇಸರವಾಗಿದೆ. ಕಳೆದ ಎಂಟು ತಿಂಗಳಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಧ್ವನಿಯನ್ನು ಹತ್ತಿಕ್ಕಿದಂತೆ ಸಂಸತ್ತಿನ ಒಳಗೆ ನಮ್ಮ ಧ್ವನಿಯನ್ನು ಹತ್ತಿಕ್ಕಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸಂಸತ್ತಿನಲ್ಲಿ ಕೃಷಿ ಕಾನೂನುಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಅವಕಾಶ ಮಾಡಿಕೊಡಲಿಲ್ಲ. ನಿರಂತರವಾಗಿ ರೈತರು ಪ್ರತಿಭಟನೆ ಮಾಡುತ್ತಿದ್ದರೂ, ಸರ್ಕಾರ ರೈತರ ಬಗ್ಗೆ ಗಮನ ನೀಡುತ್ತಿಲ್ಲ. ಇದು ನಿರ್ಲಕ್ಷ್ಯ ಧೋರಣೆ ಎಂದು ಅವರು ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ಭರದಿಂದ ನಡೆಯುತ್ತಿದೆ ಸರನಾಲೆ ಸೇತುವೆ; ಮಳೆಗೆ ಕೊಚಿಕೊಂಡು ಹೋಗಿದ್ದ ತಾತ್ಕಾಲಿಕ ಸೇತುವೆ