Advertisement

ಭಾರತಕ್ಕೆ ದ್ರೋಹ ಬಗೆಯಬೇಡಿ; ರಾಹುಲ್ ವಿರುದ್ಧ ಅನುರಾಗ್ ಠಾಕೂರ್ ವಾಗ್ದಾಳಿ

05:49 PM Mar 06, 2023 | Team Udayavani |

ನವದೆಹಲಿ: ಭಾರತದಲ್ಲಿ ಪ್ರಜಾಪ್ರಭುತ್ವ “ಕಣ್ಮರೆಯಾಗುತ್ತಿರುವ” ಬಗ್ಗೆ ಯುಎಸ್ ಮತ್ತು ಯುರೋಪಿಯನ್ ರಾಷ್ಟ್ರಗಳ ಮಧ್ಯಪ್ರವೇಶವನ್ನು ಬಯಸುತ್ತಿರುವ ರಾಹುಲ್ ಗಾಂಧಿಯವರ ಟೀಕೆಗಳಿಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಸೋಮವಾರ ವಾಗ್ದಾಳಿ ನಡೆಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು”ಭಾರತಕ್ಕೆ ದ್ರೋಹ ಮಾಡಬೇಡಿ, ರಾಹುಲ್ ಗಾಂಧಿ ಜೀ. ಭಾರತದ ವಿದೇಶಾಂಗ ನೀತಿಗೆ ಆಕ್ಷೇಪಣೆಗಳು ಈ ವಿಷಯದ ಬಗ್ಗೆ ನಿಮ್ಮ ಅಲ್ಪ ತಿಳುವಳಿಕೆಗೆ ಸಾಕ್ಷಿಯಾಗಿದೆ. ನೀವು ವಿದೇಶಿ ನೆಲದಿಂದ ಭಾರತದ ಬಗ್ಗೆ ಹರಡುವ ಸುಳ್ಳುಗಳನ್ನು ಯಾರೂ ನಂಬುವುದಿಲ್ಲ” ಎಂದು ಹೇಳಿದರು.

ತಮ್ಮ ವೈಫಲ್ಯಗಳನ್ನು ಮರೆಮಾಚುವ ಪಿತೂರಿಯ ಭಾಗವಾಗಿ ರಾಹುಲ್ ಗಾಂಧಿ ವಿದೇಶಿ ನೆಲದಿಂದ “ಭಾರತವನ್ನು ದೂಷಿಸಲು” ಆಶ್ರಯಿಸಿದ್ದಾರೆ ಎಂದು ಠಾಕೂರ್ ಹೇಳಿದರು.

ಅವರ ಭಾಷೆ, ಅವರ ಆಲೋಚನೆಗಳು, ಅವರ ಕಾರ್ಯಶೈಲಿ,ಎಲ್ಲವೂ ಶಂಕಿತವಾಗಿದೆ. ಇದೇ ಮೊದಲಲ್ಲ, ಪದೇ ಪದೇ ಇತರ ಹೇಳಿಕೆ ನೀಡುತ್ತಾ ಬಂದಿದ್ದಾರೆ.ಮಾತ್ರವಲ್ಲದೇ ಕೋವಿಡ್ ನಂತಹ ಮಾರಕ ರೋಗವು ಅಪ್ಪಳಿಸಿದಾಗ, ಅವರು ಭಾರತದ ಲಸಿಕೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು ಎಂದು ಹೇಳಿದರು.

ಚೀನಿಯರು ಭಾರತದ ಭೂಪ್ರದೇಶವನ್ನು ಅತಿಕ್ರಮಿಸಲು ಪ್ರಯತ್ನಿಸಿದಾಗ ಮಾಜಿ ಕಾಂಗ್ರೆಸ್ ಅಧ್ಯಕ್ಷರು ಸಶಸ್ತ್ರ ಪಡೆಗಳ ಮೇಲೆ ಪ್ರಶ್ನೆಗಳನ್ನು ಎತ್ತಿದರು. ಅವರು ಚೀನದ ಅಧಿಕಾರಿಗಳನ್ನು ಭೇಟಿಯಾಗಿದ್ದರು ಎಂದು ಠಾಕೂರ್ ಆರೋಪಿಸಿದ್ದಾರೆ.

Advertisement

ನಮ್ಮ ಸೈನಿಕರು ಹುತಾತ್ಮರಾದಾಗ ಅವರು ಕಾರ್ ಬಾಂಬ್‌ನಿಂದ ಕೊಲ್ಲಲ್ಪಟ್ಟರು ಎಂದು ಹೇಳಿದರು. ಸಶಸ್ತ್ರ ಪಡೆಗಳ ಬಗ್ಗೆ ರಾಹುಲ್ ಗಾಂಧಿ ಯೋಚಿಸುವ ರೀತಿ ಇದೇನಾ? ಎಂದು ಪ್ರಶ್ನಿಸಿದರು.

ಭಾರತದ ಪ್ರಜಾಪ್ರಭುತ್ವ ಬಲಿಷ್ಠವಾಗಿದೆ ಮಾತ್ರವಲ್ಲದೆ ಜನರು ಬಲಿಷ್ಠರಾಗಿದ್ದಾರೆ ಮತ್ತು ಸಶಸ್ತ್ರ ಪಡೆಗಳೂ ಬಲಿಷ್ಠವಾಗಿವೆ ಆದರೆ ರಾಹುಲ್ ಅವರು ಅಮೆರಿಕವನ್ನು ಮಧ್ಯಪ್ರವೇಶಿಸಲು ಏಕೆ ಕೇಳಬೇಕು? ಎಂದು ಠಾಕೂರ್ ಆರೋಪಿಸಿದ್ದಾರೆ.

ಭಾರತವು ದೂರದೃಷ್ಟಿಯ ನಾಯಕತ್ವವನ್ನು ಹೊಂದಿದೆ ಅಲ್ಲದೆ ವಿಶ್ವ ನಾಯಕರು ಭಾರತವನ್ನು ನಂಬುತ್ತಾರೆ ಮತ್ತು ಅವರು ಮೋದಿಯನ್ನು ನಂಬುತ್ತಾರೆ ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next