Advertisement

Finance: ಅತಿಯಾದ ಪ್ರಾಬಲ್ಯ ಬೇಡ: ಶಕ್ತಿಕಾಂತ ದಾಸ್‌

10:25 PM Sep 25, 2023 | Team Udayavani |

ಮುಂಬೈ: “ಬ್ಯಾಂಕ್‌ಗಳ ನಿರ್ದೇಶಕರ ಮಂಡಳಿಗಳಲ್ಲಿ ಒಬ್ಬರು ಅಥವಾ ಇಬ್ಬರು ನಿರ್ದೇಶಕರ ಅತಿಯಾದ ಪ್ರಾಬಲ್ಯ ಇರುವುದನ್ನು ಆರ್‌ಬಿಐ ಗಮನಿಸಿದೆ. ದೊಡ್ಡ ವಾಣಿಜ್ಯ ಬಾಂಕ್‌ಗಳು ಕೂಡ ಇದಕ್ಕೆ ಹೊರತಲ್ಲ’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ. ಆರ್‌ಬಿಐ ಹಮ್ಮಿಕೊಂಡಿದ್ದ ನಗರ ಸಹಕಾರ ಬ್ಯಾಂಕ್‌ಗಳ ನಿರ್ದೇಶಕರ ಸಭೆ ಉದ್ದೇಶಿಸಿ ಮಾತನಾಡಿದ ಅವರು, “ಒಬ್ಬರು ಅಥವಾ ಇಬ್ಬರು ನಿರ್ದೇಶಕರ ಅಥವಾ ಅಧ್ಯಕ್ಷ-ಉಪಾಧ್ಯಕ್ಷರ ಅತಿಯಾದ ಪ್ರಾಬಲ್ಯ ಇರಬಾರದು.

Advertisement

ಈ ಬಗ್ಗೆ ಗಮನಕ್ಕೆ ಬಂದ ಕೂಡಲೇ, ಇದು ಸರಿಯಾದ ಕ್ರಮವಲ್ಲ ಎಂದು ಬ್ಯಾಂಕ್‌ಗಳಿಗೆ ತಿಳಿಸಿದ್ದೇವೆ. ಇತರೆ ನಿರ್ದೇಶಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಬೇಕು. ಒಬ್ಬರ ನಿರ್ಧಾರ ಅಂತಿಮವಾಗಬಾರದು’ ಎಂದು ಕಿವಿಮಾತು ಹೇಳಿದ್ದಾರೆ. “ಠೇವಣಿದಾರರು ಕಷ್ಟಪಟ್ಟು ಕೂಡಿಟ್ಟ ಹಣ ರಕ್ಷಿಸುವುದು ಬ್ಯಾಂಕರ್‌ಗಳ ಪವಿತ್ರ ಕರ್ತವ್ಯ. ಇದು ದೇಗುಲ ಅಥವಾ ಮಸೀದಿ ಅಥವಾ ಗುರುದ್ವಾರಕ್ಕೆ ಭೇಟಿ ನೀಡುವುದಕ್ಕಿಂತಲೂ ಹೆಚ್ಚು ಪವಿತ್ರ ಕೆಲಸ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next