Advertisement

ಕ್ಷಯ ರೋಗದ ಭಯಬೇಡ; ಚಿಕಿತ್ಸೆ ಪಡೆಯಿರಿ

01:24 PM Jan 18, 2022 | Team Udayavani |

ಕಾಳಗಿ: ಕ್ಷಯ ರೋಗದ ಬಗ್ಗೆ ಭಯಪಡದೇ, ಶೀಘ್ರ ಚಿಕಿತ್ಸೆ ಪಡೆದುಕೊಳ್ಳಬೇಕು ಅಂದಾಗಲೇ ಕಾಯಿಲೆಯಿಂದ ಗುಣವಾಗಲು ಸಾಧ್ಯ ಎಂದು ಜಿಲ್ಲಾ ಕ್ಷಯರೋಗ ಮೇಲ್ವಿಚಾರಕ ಸಂತೋಷ ಕುಡ್ಡಳ್ಳಿ ಹೇಳಿದರು.

Advertisement

ಪಟ್ಟಣದ ದೇವರಾಜ ಮಾಲಿಪಾಟೀಲ ಉಡಗಿ ಪದವಿ ಪೂರ್ವ ಮಹಾವಿದ್ಯಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕಾಳಗಿ ಸಂಯುಕ್ತಾಶ್ರದಲ್ಲಿ ಕ್ಷಯ ರೋಗದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಷಯ ರೋಗ ಹೋಗಲಾಡಿಸುವಲ್ಲಿ ಜನಪ್ರತಿನಿಧಿಗಳು, ಸ್ವಸಹಾಯ ಸಂಘದ ಸದಸ್ಯರು ಸೇರಿ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಲಕ್ಷಣಗಳು ಕಂಡುಬಂದರೆ ಕೂಡಲೇ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದರು.

ನಂತರ “ಕ್ಷಯ ರೋಗ ಮುಕ್ತ ಕರ್ನಾಟಕ” ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿಲಾಯಿತು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸೂರ್ಯಕಾಂತ, ತಾಲೂಕು ಆರೋಗ್ಯ ಕ್ಷಯರೋಗ ಮೇಲ್ವಿಚಾಕರ ಶ್ರೀಕಾಂತ, ಎಚ್‌ಇಒ ಶಿವಶರಣಪ್ಪ, ಪಾಚಾರ್ಯ ಚಂದನ ಎಸ್‌.ಎಚ್‌. ಉಪನ್ಯಾಸಕ ಪ್ರಕಾಶ ರಾಠೊಡ, ಪರ್ವಿನ್‌ ಬೇಗಂ, ಚಂದ್ರಕಾಂತ, ಝರಣಪ್ಪ, ಅನಿಲಕುಮಾರ, ಭುವನೇಶ್ವರಿ, ಅಮೃತ ರಾಠೊಡ, ಅಜಯ, ವಿಘ್ನೇಶ್ವರ, ಸಂಗೀತಾ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next