Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿ ಆಡಳಿತ ತರುವುದಕ್ಕೆ ಯಾವುದೇ ಕಾರಣಕ್ಕೂ ರಾಜ್ಯ ಸರಕಾರ ಅವಕಾಶ ಕೊಡಬಾರದು. ಜನರಿಂದ ಆಯ್ಕೆಯಾದ ಚುನಾಯಿತ ಸರಕಾರ ರಾಜ್ಯದಲ್ಲಿದೆ. ಸಿದ್ದರಾಮಯ್ಯ ನೇತೃತ್ವದ ಈ ಸರಕಾರವನ್ನು ಕೆಡವಿ ಎಂದು ನಾನು ಹೇಳ್ಳೋದಿಲ್ಲ. ರಾಷ್ಟ್ರಪತಿ ಆಡಳಿತ ತನ್ನಿ ಅಂತಾನೂ ಹೇಳ್ಳೋದಿಲ್ಲ. ಚುನಾಯಿತ ಪ್ರತಿನಿಧಿಗಳ ಸರಕಾರವೇ ಮುಂದುವರಿಯಲಿ. ಸಿದ್ದರಾಮಯ್ಯ ಸಿಎಂ ಆಗಿಯೇ ಇರುತ್ತಾರೋ, ಡಿಕೆಶಿ ಸಿಎಂ ಆಗುತ್ತಾರೋ ಸಂಬಂಧವಿಲ್ಲ. ಆದರೆ ಚುನಾಯಿತ ಸರಕಾರ ಮಾತ್ರ ಇರಬೇಕು. ರಾಜ್ಯ ಸರಕಾರ ತಾವು ನಿರ್ದೋಷಿಗಳು ಆಗಬೇಕೆಂದರೆ ರಾಜ್ಯದಲ್ಲಿ ನಡೆದ ಕೊಲೆ ಹಾಗೂ ಪೆನ್‌ಡ್ರೈವ್ ಪ್ರಕರಣವನ್ನು ಸಿಪಿಐಗೆ ವಹಿಸಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.
ಬಾಗಲಕೋಟೆ: ಡಿ.ಕೆ. ಶಿವಕುಮಾರ್ ಪೆನ್‌ಡ್ರೈವ್ ಫ್ಯಾಕ್ಟರಿ ಮಾಲಕ ಅಂತ ನಾನು ಹೇಳುವುದಿಲ್ಲ. ಕುಮಾರಸ್ವಾಮಿ ದೊಡ್ಡ ಪಾತ್ರ ಇದೆ ಅಂತಾನೂ ಹೇಳುವುದಿಲ್ಲ. ಈ ಪೆನ್‌ಡ್ರೈವ್ ಪ್ರಕರಣದಲ್ಲಿ ವಿಶ್ವದ ಎದುರು ನಾವು ಬೆತ್ತಲಾಗಿದ್ದೇವೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಣ್ಣನ್ನು ನಾವು ತಾಯಿ ಅಂತ ಕರೆಯುತ್ತೇವೆ. ತಾಯಿ ಅಂತ ಕರೆಯುವ ಹೆಣ್ಣಿಗೆ ಇಷ್ಟು ಅಪಮಾನ ಆಗಿದ್ದು ಇದೇ ಮೊದಲು. ನಾನು ಸಿದ್ದರಾಮಯ್ಯ, ಗೃಹಮಂತ್ರಿಗೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಇದು ನಿಮ್ಮ ಕೈಲಿ ಆಗಲ್ಲ. ಸಿಬಿಐಗೆ ಕೊಟ್ಟು ಬಿಡಿ. ನಾವೆ ಮಾಡ್ತಿವಿ, ನಮಗೆ ಶಕ್ತಿ ಇದೆ. ಆದರೆ ಸಿಬಿಐಗೆ ಕೊಡದಿದ್ರೆ ನೀವು ಏನೇ ವರದಿ ಕೊಟ್ಟರೂ ಸರಕಾರ ಅದನ್ನು ಮಾಡಿಸಿದೆ ಎಂಬ ಭಾವನೆ ಬರುತ್ತದೆ ಎಂದರು.
Related Articles
Advertisement