Advertisement
ಪಟ್ಟಣದ ಚನ್ನಮ್ಮ ವೃತ್ತ, ಅಷ್ಟಗಿ ಚಿತ್ರಮಂದಿರ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಜವಳಿ ಬಜಾರ, ಡಬಲ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳೇ ಕತ್ತೆಗಳ ಆವಾಸ ತಾಣವಾಗಿದೆ. ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯ ಮಧ್ಯದಲ್ಲೇ ಬಿಡಾಡಿ ಕತ್ತೆಗಳು ನಿಲ್ಲುತ್ತಿರುವುದು ಹಾಗೂ ಮಲಗಿಕೊಳ್ಳುತ್ತಿರುವದರಿಂದಗಿ ದ್ವಿಚಕ್ರ ವಾಹನ ಸೇರಿದಂತೆ ಪ್ರತಿಯೊಂದು ಬೃಹತ್ ವಾಹನ ಸವಾರರಿಗೂ ಕಿರಿಕಿರಿಯುಂಟು ಮಾಡುತ್ತಿವೆ. ಜತೆಗೆ ರಸ್ತೆಯ ತಿರುವುಗಳಲ್ಲಿ ಬರುವ ವಾಹನ ಸವಾರರು, ಎಲ್ಲಿ ಕತ್ತೆಗಳು ಅಡ್ಡ ಬರುತ್ತವೆಯೋ ಎಂಬ ಆತಂಕದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾಗಿದೆ. ಈ ಕತ್ತೆಗಳು ನೆರೆಯ ಚಿಮ್ಮಡ ಗ್ರಾಮ ಮತ್ತು ರಬಕವಿ-ಬನಹಟ್ಟಿ ನಗರಗಳ ಖಾಸಗಿ ವ್ಯಕ್ತಿಗಳಿಗೆ ಸೇರಿವೆ. ಕತ್ತೆಗಳ ಮಾಲೀಕರು ಪ್ರತಿವರ್ಷ ರಬಕವಿ-ಬನಹಟ್ಟಿ ಭಾಗಗಳಲ್ಲಿನ ಇಟ್ಟಿಗೆ ತಯಾರಿಕೆಯ ಭಟ್ಟಿಗಳಲ್ಲಿ ಮತ್ತು ರಬಕವಿ-ಬನಹಟ್ಟಿ, ರಾಮಪುರ ಭಾಗದಲ್ಲಿನ ಇಕ್ಕಾಟದ ಪ್ರದೇಶಗಳಲ್ಲಿ ಇಟ್ಟಿಗೆ, ಉಸುಕು, ಕಲ್ಲು ಸಾಗಾಣಿಕೆಗೆ ಕತ್ತೆ ಬಳಸುತ್ತಾರೆ. ಕೆಲಸದ ಒತ್ತಡಗಳು ಕಡಿಮೆ ಇದ್ದಾಗ ಕತ್ತೆಗಳನ್ನು ಪಟ್ಟಣಕ್ಕೆ ತಂದು ಬಿಡುತ್ತಾರೆ ಎನ್ನಲಾಗಿದೆ. ಕತ್ತೆಗಳನ್ನು ವರ್ಷವಿಡಿ ದುಡಿಸಿಕೊಳ್ಳುವ ಮಾಲೀಕರು ಬೇಕಾಬಿಟ್ಟಿಯಾಗಿ ಬಿಟ್ಟಿರುವ ಕಾರಣ, ಕತ್ತೆಗಳು ಪಟ್ಟಣದ ಸುತ್ತಮುತ್ತಲಿನ ರೈತರ ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿವೆ. ಜತೆಗೆ ಪಟ್ಟಣದ ಪ್ರಮುಖ ರಸ್ತೆಯ ಉದ್ದಗಲಕ್ಕೂ ಕತ್ತೆಗಳ ಕಾಟ ಮಿತಿ ಮಿರಿದೆ. ಪ್ರಮುಖ ವೃತ್ತ ಮತ್ತು ರಸ್ತೆಗಳ ಮಧ್ಯೆಯೇ ಕತ್ತೆಗಳು ಮಲಗುವ ಪರಿಣಾಮ, ರಾತ್ರಿ ಸಮಯದಲ್ಲಿ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ.
Related Articles
Advertisement
-ಚಂದ್ರಶೇಖರ ಮೋರೆ