Advertisement

ಮಳೆಗೆ ಪ್ರಾರ್ಥಿಸಿ ಕತ್ತೆ ಮೆರವಣಿಗೆ

02:39 PM Jun 26, 2019 | Team Udayavani |

ಹಾವೇರಿ: ಮಳೆಗಾಗಿ ಪ್ರಾರ್ಥಿಸಿ ಮಂಗಳವಾರ ನಗರದಲ್ಲಿ ಕತ್ತೆಗೆ ಹಾರ ಹಾಕಿ, ಕುಂಕುಮ-ಗಂಧದಿಂದ ಸಿಂಗರಿಸಿ ತಮಟೆ ವಾದ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು.

Advertisement

ನಗರದ ರಸಗೊಬ್ಬರ ಅಂಗಡಿಗಳ ಮಾಲೀಕರು ಹಾಗೂ ವಿವಿಧ ಕಂಪನಿಗಳ ಸಿಬ್ಬಂದಿಗಳ ನೇತೃತ್ವದಲ್ಲಿ ನಡೆದ ಈ ಕತ್ತೆ ಮೆರವಣಿಗೆ ನಗರದ ಪುರಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡು ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಂಪನ್ನಗೊಂಡಿತು. ಮೆರವಣಿಗೆಯುದ್ದಕ್ಕೂ ಯುವಕರು ತಮಟೆ ಬಾರಿಸುತ್ತ, ಶಿಳ್ಳೆ ಹಾಕುತ್ತ ಮೆರವಣಿಗೆಯ ಮೆರಗು ಹೆಚ್ಚಿಸಿದರು. ಬಳಿಕ ಕತ್ತೆಗೆ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು. ಬಳಿಕ ನಗರದ ರೇಣುಕ ಮಂದಿರದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಉದ್ಯಮಿ ಕುಮಾರಸ್ವಾಮಿ ಮಠಪತಿ ಮಾತನಾಡಿ, ಜಿಲ್ಲೆಯಲ್ಲಿ ಜೂನ್‌ ಮುಗಿಯುತ್ತ ಬಂದಿದ್ದರೂ ಮಳೆಯಾಗಿಲ್ಲ. ಕಳೆದ ಎರಡು ದಿನಗಳಿಂದ ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದರೂ ಹಾವೇರಿಯಲ್ಲಿ ಮಾತ್ರ ಮಳೆ ಆಗಿಯೇ ಇಲ್ಲ. ಸಕಾಲದಲ್ಲಿ ಮಳೆಯಾಗದೇ ರೈತರು ಕಂಗಾಲಾಗಿದ್ದಾರೆ. ಮಳೆಬಾರದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ರೈತರು ಈಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಗಾಗಿ ಪ್ರಾರ್ಥಿಸಿ ಕತ್ತೆ ಮೆರವಣಿಗೆ ಮಾಡಿ ಪ್ರಾರ್ಥಿಸಲಾಗುತ್ತಿದೆ ಎಂದರು.

ಮಂಜುನಾಥ ಹಿರೇಗೌಡ್ರ, ಶಿವಬಸಪ್ಪ ಟೊಂಕದ, ರೇವಣಸಿದ್ದೇಶ ಪೂಜಾರ, ಗಣೇಶ ತೊಲಗೇರಿ, ಕೆ.ಸಿ.ನೆಗಳೂರ, ಮಂಜಪ್ಪ, ರಾಜು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next