Advertisement
ಮಧ್ಯಪ್ರದೇಶದ ಚಿತ್ರಕೂಟದಲ್ಲಿ ಆಶ್ರಮ ವನ್ನು ಹೊಂದಿರುವ, ರಾಮಚರಿತಮಾ ನಸದ ಹೆಸರಾಂತ ಕಥಾವಾಚಕರಾದ ಮೊರಾರಿ ಬಾಪು ಅವರು ತಮ್ಮ ವ್ಯಾಸಪೀಠದಿಂದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ 5 ಕೋ. ರೂ.ಗಳ ದೇಣಿಗೆಯನ್ನು ಘೋಷಿಸಿದ್ದಾರೆ. ಮೊಘಲ್ ವಂಶಸ್ಥನೆಂದು ಘೋಷಿಸಿಕೊಂಡಿ ರುವ ಪ್ರಿನ್ಸ್ ಯಾಕೂಬ್ ಹಬೀಬುದ್ದೀನ್ ತುಸೀ ಒಂದು ಕೆ.ಜಿ. ಭಾರದ ಚಿನ್ನದ ಗಟ್ಟಿಯನ್ನು ನೀಡುವುದಾಗಿ ಘೋಷಿಸಿದ್ದಾರೆ. ಇದಲ್ಲದೆಟ್ರಸ್ಟ್ನ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ ದಾಸ್ ಅವರಿಗೆ 40 ಕೆ.ಜಿ. ತೂಕವಿರುವ ಬೆಳ್ಳಿಯ ಇಟ್ಟಿಗೆಯನ್ನು ಹಸ್ತಾಂತರಿಸಲಾಗಿದ್ದು ಆ. 5ರಂದು ನಡೆಯಲಿರುವ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಈ ಇಟ್ಟಿಗೆಯನ್ನು ಇರಿಸಿ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಲಿರುವರು.
Related Articles
Advertisement
ಭಕ್ತರು ನಗದು ರೂಪದಲ್ಲಿ ಮಾತ್ರವಲ್ಲದೆ ಚಿನ್ನಾಭರಣಗಳನ್ನೂ ದೇಣಿಗೆಯಾಗಿ ನೀಡಿದ್ದಾರೆ. ಹೈದರಾಬಾದ್ ಮೂಲದ ಜುವೆಲ್ಲರ್ ಕೆ. ಶ್ರೀನಿವಾಸ್ ಅವರು ಒಂದು ಕೆ.ಜಿ. ಭಾರದ ಚಿನ್ನದ ಇಟ್ಟಿಗೆ ಮತ್ತು 5ಕೆ.ಜಿ. ಭಾರದ ಬೆಳ್ಳಿಯ ಇಟ್ಟಿಗೆಯನ್ನು ಟ್ರಸ್ಟ್‌ಗೆ ದೇಣಿಗೆ ನೀಡಿದ್ದಾರೆ. ಚಿನ್ನ-ಬೆಳ್ಳಿ ವ್ಯಾಪಾರಿಗಳ ಸಂಘದ ಉತ್ತರ ಪ್ರದೇಶ ಘಟಕದ ವತಿಯಿಂದ 33ಕೆ.ಜಿ.ತೂಕದ ಬೆಳ್ಳಿ ಇಟ್ಟಿಗೆಯನ್ನು ಟ್ರಸ್ಟ್‌ಗೆ ಹಸ್ತಾಂತರಿಸಲಾಗಿದೆ.
ಏತನ್ಮಧ್ಯೆ ವಿಶ್ವ ಹಿಂದೂ ಪರಿಷತ್ ದೇಶಾದ್ಯಂತದ 10 ಕೋಟಿ ಕುಟುಂಬಗಳನ್ನು ಸಂಪರ್ಕಿಸಿ ಒಂದು ರೂ.ನಿಂದ 10 ರೂ.ಗಳವರೆಗೆ ದೇಣಿಗೆ ಸಂಗ್ರಹಿಸುವ ಸಂಕಲ್ಪ ತೊಟ್ಟಿದೆ. ಕಳೆದ ನಾಲ್ಕು ತಿಂಗಳುಗಳ ಅವಧಿಯಲ್ಲಿ ಆನ್‌ಲೈನ್ ದೇಣಿಗೆ ಮೂಲಕ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ 6 ಕೋ. ರೂ.ಗಳನ್ನು ಸಂಗ್ರಹಿಸಿದೆ.