Advertisement
ದಿ.ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ (ಮಾ.17)ದಂದು ಕೈಗೊಂಡ ಸ್ನೇಹಿತರ ಸಂಕಲ್ಪ ಕೊನೆಗೂ ಈಡೇರಿದೆ. ತಾಲೂಕಿನ ಹೊಸಳ್ಳಿ ಕ್ಯಾಂಪಿನ ಹುಸೇನಮ್ಮ (35), ಬುದ್ಧಿಮಾಂದ್ಯ ಆಗಿರುವ ರೇಣುಕಮ್ಮ (30) ಎರಡು ವರ್ಷದ ಹಿಂದೆ ಪಾಲಕರನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದರು. ಅವರ ತಂದೆ ಹುಸೇನಪ್ಪ ಹಾಗೂ ಲಕ್ಷ್ಮಮ್ಮ ನಿಧನದ ಬಳಿಕ ಇಬ್ಬರೂ ತಬ್ಬಲಿಯಾಗಿದ್ದರು.
Related Articles
Advertisement
ಮೆಡಿಕಲ್ ಮಾಲೀಕ ರಾಜಶೇಖರರೆಡ್ಡಿ ಮಲ್ಲಾಪುರ ಮರಳು, ಕಿಟಕಿ, ಬಾಗಿಲಿಗೆ ತಗಲುವ ವೆಚ್ಚ ಭರಿಸಿದರು. ಅಕ್ಷಯ ಆಹಾರ ಜೋಳಿಗೆ ಟ್ರಸ್ಟ್‌ನಿಂದ ಮೇಷನ್ ಕೆಲಸ ಉಚಿತವಾಗಿ ಮಾಡಿಸಿಕೊಟ್ಟರು. ಕಾರುಣ್ಯಾಶ್ರಮದ ಚನ್ನಬಸಯ್ಯಸ್ವಾಮಿ ಕೂಡ ಸಾಥ್ ನೀಡಿದರು. ಇದರ ಫಲವಾಗಿ ಸುಸಜ್ಜಿತ ಸೂರು ನಿರ್ಮಾಣವಾಗಿದ್ದು, ವಿದ್ಯುತ್ ವ್ಯವಸ್ಥೆ ಕಲ್ಪಿಸಿ, ಮನೆಗೆ ಸುಣ್ಣ-ಬಣ್ಣ ಬಳಿಯಲಾಗಿದೆ. ಅನಿಲ್ ದಾಪತ್ತೆ ಎಂಬುವವರು ಫ್ಯಾನ್ ಉಚಿತವಾಗಿ ಕೊಡಿಸಿ ನೆಮ್ಮದಿ ಗಾಳಿ ಬೀಸಿದ್ದಾರೆ.
ಅಪ್ಪು ಮನೆ ಎಂದೇ ಹೆಸರುವಾಸಿಸ್ನೇಹಿತರ ಬಳಗ ಮನಸ್ಸು ಮಾಡಿದರೆ ಸಂಕಷ್ಟದಲ್ಲಿರುವ ಬಡವರಿಗೆ ನೆರವಾಗಬಹುದು ಎಂಬುದಕ್ಕೆ ಈ ಪ್ರಯತ್ನ ಸಾಕ್ಷಿಯಾಗಿದೆ. ಸೂರಿಲ್ಲವೆಂದು ಕೊರಗುತ್ತಿದ್ದ ಇಬ್ಬರು ಮಹಿಳೆಯರು, ಸ್ವಂತ ಸೂರು ಹೊಂದಿದ್ದಾರೆ. ಅವರಿಗೆ ಉಚಿತವಾಗಿ ಗ್ರಾಪಂ ಹೊಸಳ್ಳಿಯ ಅಧಿಕಾರಿಗಳು ಶೌಚಾಲಯ ಕಟ್ಟಿಸಿಕೊಡಬೇಕಿದೆ. ಈ ಹಿಂದೆ ತಾಂತ್ರಿಕ ಕಾರಣಕ್ಕೆ ಬಾಕಿ ಉಳಿದ ಆಶ್ರಯ ಯೋಜನೆ ಬಿಲ್‌ಗಳನ್ನು ಪಾವತಿಸಬೇಕಿದೆ ಎನ್ನುತ್ತಾರೆ ಸ್ಥಳೀಯರು. ನಮ್ಮದೇನೂ ಕೊಡುಗೆಯಿಲ್ಲ. ಎಲ್ಲ ದಾನಿಗಳು, ಕಾಣದ ಕೈಗಳ ನೆರವಿನಿಂದ ಇದು ಸಾಧ್ಯವಾಗಿದೆ. ಅಪ್ಪು ಜನ್ಮದಿನಾಚರಣೆ ಸಂದರ್ಭ ಇಂತಹ ಕುಟುಂಬವೊಂದಕ್ಕೆ ನೆರವಾಗುವ ಇಚ್ಛೆ ವ್ಯಕ್ತಪಡಿಸಿದಾಗ ಹಲವರು ಕೈ ಜೋಡಿಸಿ, ಮನೆ ಪೂರ್ಣಗೊಳಿಸಲು ಸಾಥ್ ನೀಡಿದ್ದಾರೆ.
ಅಶೋಕ ನಲ್ಲಾ, ಕಾರ್ಯದರ್ಶಿ
ಅಕ್ಷಯ ಆಹಾರ ಜೋಳಿಗೆ ಟ್ರಸ್ಟ್ ನಮ್ಮ ತಂದೆ ಹುಸೇನಪ್ಪ ಮನೆ ಕಟ್ಟಿಸಬೇಕೆಂಬ ಕನಸು ಕಂಡಿದ್ದರು. ಅದು ಪೂರ್ಣಗೊಳ್ಳಲೇ ಇಲ್ಲ. ಅವರು ನಿಧನರಾದ ಮೇಲೆ ದಿಕ್ಕು ತೋಚದಂತಾಯಿತು. ಊರ್ಮಿಳಾ ನಲ್ಲಾ ಹಾಗೂ ಅವರ ಪತಿ, ಸಾರ್ವಜನಿಕರ ಸಹಕಾರದೊಂದಿಗೆ ನಮಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ.
ಹುಸೇನಮ್ಮ, ಹೊಸಳ್ಳಿ ಕ್ಯಾಂಪಿನ
ನಿವಾಸಿ, ಸಿಂಧನೂರು ತಾಲೂಕು ಯಮನಪ್ಪ ಪವಾರ